ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಾಂತರಾಜು ವರದಿ ಅವೈಜ್ಙಾನಿಕವಾಗಿದ್ದು ಈ ವರದಿಯಲ್ಲಿ ಒಕ್ಕಲಿಗರಿಗೆ ಶೇ. ೪ರಷ್ಟುಮಾತ್ರ ಮೀಸಲಾತಿ ಕಲ್ಪಿಸಲಾಗಿದ್ದು ಇದು ಜನಸಂಖ್ಯೆಗೆ ಅನುಗುಣವಾಗಿಲ್ಲ. ಒಕ್ಕಲಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಕ್ಕಲಿಗರು ಎಷ್ಟು ಜನಸಂಖ್ಯೆಯಿದ್ದಾರೆ ಎಂದುಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ಸಂಘದಿಂದ ಹೊಸ ಆ್ಯಪ್ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.ಸಮುದಾಯದ ಅಭಿವೃದ್ಧಿಗೆ ಕ್ರಮ
೨೦೨೧ರಲ್ಲಿ ಒಕ್ಕಲಿಗರ ಸಂಘಕ್ಕೆ ಹೊಸ ಆಡಳಿತ ಮಂಡಳಿ ಬಂದ ಬಳಿಕ ಸಂಘದ ಬೆಳವಣಿಗೆಗೆ ಹಾಗೂ ಸಮುದಾಯ ಮಕ್ಕಳ ಅಭಿವೃದ್ದಿ ಸಾಕಷ್ಟು ಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ, ಈ ಹಿಂದೆ ಸಂಘ ನಷ್ಟದಲ್ಲಿತ್ತು, ಆದರೆ ಹೊಸ ಆಡಳಿತ ಮಂಡಳಿ ಬಂದ ನಾಲ್ಕು ವರ್ಷಗಳಲ್ಲಿ ೬೦೦ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಸಂಘದ ಸದಸ್ಯರಿಗೆ ಮಾತ್ರ ಶೇ. ೨೫ರಷ್ಟು ರಿಯಾಯ್ತಿ ಚಿಕಿತ್ಸೆ ದೊರೆಯುತ್ತಿತ್ತು, ಹೊಸ ಸಂಘ ಸಮುದಾಯದ ಎಲ್ಲಾ ಜನರಿಗೂ ರಿಯಾಯಿತಿ ದೊರೆಯುವಂತೆ ಕ್ರಮವಹಿಸಿದೆ. ಅಲ್ಲದೆ ಒಳ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಸಹ ಮಾಡಿದೆ ಎಂದರು.ರಾಜ್ಯದ ನಾನಾ ಕಡೆ ೪ ಹೆಣ್ಣು ಮಕ್ಕಳ ವಸತಿ ನಿಲಯ ಸ್ಥಾಪಿಸಲಾಗಿದೆ, ೪ ವೈದ್ಯಕೀಯ ಕಾಲೇಜನ್ನು ಆರಂಭಿಸಲಾಗಿದೆ, ಅಗತ್ಯವಿರುವ ಕಡೆ ಹೆಣ್ಣು ಮಕ್ಕಳ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಜಮೀನು ಖರೀದಿಗೆ ಸಂಘ ಮುಂದಾಗಿದೆ. ಮೈಸೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಲು ಮುಂದಾಗಿದೆ ಈಗ ಒಕ್ಕಲಿಗರ ಸಂಘ ಆರ್ಥಿಕವಾಗಿ ಸಂವೃದ್ದಿಯಾಗಿದೆ. ಹಾಗೂ ಸಂಘದ ಸದಸ್ಯತ್ವವನ್ನು ಆಯಾ ತಾಲೂಕುಗಳಿಗೆ ತೆರಳಿ ಅಲ್ಲೆ ಗುರುತಿನ ಚೀಟಿ ವಿತರಿಸುವ ಕಾರ್ಯ ಸಹ ಭರದಿಂದ ಸಾಗಿದೆ ಎಂದು ವಿವರಿಸಿದರು.ಭ್ರಷ್ಟಾಚಾರ ಮುಕ್ತ ಸಂಘಸಂಘದ ಮತ್ತೊಬ್ಬ ರಾಜ್ಯ ನಿರ್ದೇಶಕ ಡಾಃಡಿ.ಕೆ.ರಮೇಶ್ ಮಾತನಾಡಿ, ಒಕ್ಕಲಿಗರ ಸಂಘ ಸ್ಥಾಪನೆಯಾಗಿ ೧೨೦ವರ್ಷಗಳಾಗಿದ್ದು ಇದುವರೆಗೂ ಸಂಘ ಅಭಿವೃದ್ದಿಯಾಗದೆ ಭ್ರಷ್ಟಾಚಾರದಲ್ಲಿ ತೇಲಿತ್ತು, ಈಗ ಹೊಸ ಆಡಳಿತ ಮಂಡಳಿ ೧೨೦ವಷಗಳಿಂದ ಆಗದ ಸಾಧನೆಗಳನ್ನು ಮಾಡಿ ತೋರಿಸಿದೆ, ಬೆಂಗಳೂರಿನಲ್ಲಿ ಕೆಂಪೇಗೌಡ ರಿಸರ್ಚ್ ಸೆಂಟರ್ ಮಾಡಲು ೧೨೦ ಎಕರೆ ಜಮೀನು ಖರೀದಿ ಮಾಡಲು ಮುಂದಾಗಿದೆ ಎಂದರು.
ದೆಹಲಿಯಲ್ಲಿ ಸಮುದಾಯ ಭವನಇದಲ್ಲದೆ ದೆಹಲಿಯಲ್ಲಿಯೂ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಹಾಸ್ಟೆಲ್ ನಿರ್ಮಾಣಕ್ಕೆ ಚಿಂತನೆ ಮಾಡಲಾಗುತಿದೆ ಮತ್ತು ಕೋಲಾರದಲ್ಲಿ ಲ್ಯಾಂಡ್ ಬ್ಯಾಂಕ್ ಮಾಡಲು ಸಹ ಸಂಘ ಮುಂದಾಗಿದೆ ಎಂದು ಸಂಘದ ಸಾಧನೆಯನ್ನು ತಿಳಿಸಿದರು.ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆ ನಿರ್ದೇಶಕ ಜನಾರ್ಧನ್,ಮುಖಂಡರಾದ ಚಿಕ್ಕಹೊಸಹಳ್ಳಿ ಮಂಜುನಾಥ್,ಹೊಸೂರು ಕೃಷ್ಣಪ್ಪ,ಕಣಿಂಬೆಲೆ ಶ್ರೀನಿವಾಸ್,ವೈ.ಇ.ಶ್ರೀನಿವಾಸ್,ಕೊಂಡಹಳ್ಳಿ ನಾರಾಯಣಸ್ವಾಮಿ,ದೇವರಾಜ್ ಇತರರು ಇದ್ದರು.