ಧಾರ್ಮಿಕ ಚಟುವಟಿಕೆಗೆ ಕಡಿವಾಣ: ಶಾಸಕ ರಾಜೇಶ್‌ ನಾಯ್ಕ್‌ ಆಕ್ಷೇಪ

KannadaprabhaNewsNetwork |  
Published : Aug 30, 2025, 01:01 AM IST
32 | Kannada Prabha

ಸಾರಾಂಶ

ಶುಕ್ರವಾರ ಬಂಟ್ವಾಳ ತಾ.ಪಂ.ಎಸ್ ಜಿಎಸ್ ವೈ ಸಭಾಂಗಣದಲ್ಲಿ 2025-26 ರ ಸಾಲಿಮ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ರಾಜೇಶ್ ನಾಯ್ಕ್ ಮಾತನಾಡಿದರು.

ಬಂಟ್ವಾಳ: ಧಾರ್ಮಿಕ ಚಟುವಟಿಕೆಗೆ ಪೊಲೀಸರು ಕಡಿವಾಣ ಹಾಕಿದರೆ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ದೊಡ್ಡ ಮಟ್ಟದ ಹೊಡೆತ ಬಿದ್ದಂತೆ. ಇದನ್ನು ಪೊಲೀಸ್ ಇಲಾಖೆ ಆರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು, ಜನತೆಯ ಭಾವನೆಯ ಪ್ರಶ್ನೆಯಾಗಿದ್ದು,ಕರ್ತವ್ಯ ನಿರ್ವಹಣೆಯ ವೇಳೆ ಕಾನೂನಿನ ಚೌಕಟ್ಟಿನೊಳಗೆ ಹೊಂದಾಣಿಕೆ ಕೂಡ ಅಗತ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಶುಕ್ರವಾರ ಬಂಟ್ವಾಳ ತಾ.ಪಂ.ಎಸ್ ಜಿಎಸ್ ವೈ ಸಭಾಂಗಣದಲ್ಲಿ 2025-26 ರ ಸಾಲಿಮ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗಣೇಶೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಯಾದ ಕುರಿತು ಬಂದ ದೂರಿನ ಹಿನ್ನಲೆಯಲ್ಲಿ ಮಾತನಾಡಿದರು.ಬಂಟ್ವಾಳ ಪ್ರಸ್ತುತ ಶಾಂತಿಯ ವಾತಾವರಣದಲ್ಲಿದೆ ಈ ಮಧ್ಯೆ ಪೊಲೀಸರು ಸಾರ್ವಜನಿಕ ಕಾರ್ಯಕ್ರಮದ ಧ್ವನಿವರ್ಧಕ, ಚೆಂಡೆ, ಭಜನೆಯನ್ನು ಮೊಟಕುಗೊಳಿಸಿದರೆ ಜನರು ಕೂಡ ಪ್ರಚೋದನೆಗೊಳಗಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಎಚ್ಚರಿಕೆಯಿಂದ ನಿಭಾಹಿಸುವಂತೆ ಶಾಸಕ ರಾಜೇಶ್ ನಾಯ್ಕ್ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.ಸಭೆ ಆರಂಭದಲ್ಲಿ ತಹಸೀಲ್ದಾರ್ ಸಹಿತ ಕೆಲ ತಾಲೂಕು ಅಧಿಕಾರಿಗಳು ಗೈರು ಹಾಕರಾದ ಹಿನ್ನಲೆಯಲ್ಲಿ ಗರಂ ಆದ ಶಾಸಕರು ಒಂದು ಹಂತದಲ್ಲಿ ಸಭೆಯನ್ನು ಮುಂದೂಡುವಂತೆ ಸೂಚಿಸಿದರು. ಅಷ್ಟೊತ್ತಿಗೆ ತಹಸೀಲ್ದಾರ್ ಹೊರತುಪಡಿಸಿ ಉಳಿದ ಅಧಿಕಾರಿಗಳು ಸಭೆಗೆ ಹಾಜರಾದರು.ತಾಲೂಕಿನಲ್ಲಿ ಉಂಟಾಗುತ್ತಿರುವ 9/11 ಸಮಸ್ಯೆಯ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಮೈಕ್ ದೂರ ಇಟ್ಟ ಶಾಸಕರು: ಗಣೇಶ್ ಚತುರ್ಥಿ ಸಹಿತ ಹಬ್ಬಗಳ ಸಲುವಾಗಿ ಧ್ವನಿವರ್ಧಕ ಬಳಕೆಯಲ್ಲಿ ಡಿಸಿಬಲ್ ಮಿತಿಯನ್ನು ರಾಜ್ಯ ಸರಕಾರ ಜಾರಿಗೆ ತಂದಿರುವ ಕ್ರಮವನ್ನು ಶಾಸಕ ರಾಜೇಶ್ ನಾಯ್ಕ್ ಖಂಡಿಸಿ ಕೆಡಿಪಿ ಸಭೆಯುದ್ದಕ್ಕು ಮೈಕ್‌ ಬಳಸದೆ ದೂರ ಇಟ್ಟು ತನ್ನ ಅಸಮಾಧಾನವನ್ನು ಈ ಮೂಲಕ ವ್ಯಕ್ತಪಡಿಸಿದರು.ಟೈಲರಿಂಗ್ ಯಂತ್ರ ವಿತರಣೆ,ನೀರಿನ ಬೆಡ್ ವಿತರಣೆ,ಶ್ರವಣಸಾಧನ,ವಾಕಿಂಗ್ ಸ್ಟಿಕ್ ಮೊದಲಾದ ಸಲಕರಣೆಯನ್ನು ಶಾಸಕರು ಫಲಾನುಭವಿಗಳಿಗೆ ವಿತರಿಸಿದರು.

ತಾ.ಪಂ.ಇಒ ಸಚ್ಚಿನ್ ಕುಮಾರ್, ಆಡಳಿತಾಧಿಕಾರಿ ಮಂಜುನಾಥ್, ಪಂಚ ಗ್ಯಾರಂಟಿ ಅನುಷ್ಠಾನ ಬಂಟ್ಚಾಳ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ವೇದಿಕೆಯಲ್ಲಿದ್ದರು.ನಾಮನಿರ್ದೇಶಿತ ಸದಸ್ಯರಾದ ಗಿರೀಶ್ ಪರ್ವೆ, ಅಬ್ದುಲ್ಲಾ ಎ.ಶೋಭಾ ರೈ ಉಪಸ್ಥಿತರಿದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ