ನಿರಂತರ ಸಮಾಜಘಾತುಕ ಚಟುವಟಿಕೆಗಳನ್ನು ಗಮನಿಸಿ ಜಿಲ್ಲಾಡಳಿತ ಈ ಹಿಂದೆ ಗಡಿಪಾರು ಆದೇಶ ಹೊರಡಿಸಿತ್ತು. ಆದರೆ ಗಡಿಪಾರು ನಿಯಮಗಳನ್ನು ಉಲ್ಲಂಘಿಸಿ ಮತ್ತೆ ಜಿಲ್ಲೆಯಲ್ಲಿ ಕಾಣಿಸಿಕೊಂಡು ತನ್ನ ದಾದಾಗಿರಿಯನ್ನು ಮುಂದುವರಿಸಿದ್ದನು ಎನ್ನಲಾಗಿದೆ.
ಗದಗ: ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಪೊಲೀಸರಿಗೆ ತಲೆನೋವಾಗಿದ್ದ ಲಕ್ಷ್ಮೇಶ್ವರದ ಕುಖ್ಯಾತ ರೌಡಿಶೀಟರ್ ಇರ್ಫಾನ್ ತಹಸೀಲ್ದಾರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡು ಆರೋಪಿಯನ್ನು ಒಂದು ವರ್ಷದ ಅವಧಿಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.
ಪೊಲೀಸ್ ದಾಖಲೆಗಳ ಪ್ರಕಾರ, ಇರ್ಫಾನ್ ತಹಸೀಲ್ದಾರ ವಿರುದ್ಧ ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ ಸೇರಿದಂತೆ ವಿವಿಧ ಗಂಭೀರ ಸ್ವರೂಪದ ಏಳು ಪ್ರಕರಣಗಳು ದಾಖಲಾಗಿದ್ದು, ಇನ್ನೂ ಎಂಟು ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದಾನೆ. ಒಟ್ಟಾರೆ 15 ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಹೊಂದಿದ್ದರೂ ಈ ಹಿಂದೆ ಕೈಗೊಂಡ ಕಾನೂನು ಕ್ರಮಗಳು ಆತನ ಅಪರಾಧ ಚಟುವಟಿಕೆಗಳನ್ನು ತಡೆಯಲು ವಿಫಲವಾಗಿದ್ದವು.
ನಿರಂತರ ಸಮಾಜಘಾತುಕ ಚಟುವಟಿಕೆಗಳನ್ನು ಗಮನಿಸಿ ಜಿಲ್ಲಾಡಳಿತ ಈ ಹಿಂದೆ ಗಡಿಪಾರು ಆದೇಶ ಹೊರಡಿಸಿತ್ತು. ಆದರೆ ಗಡಿಪಾರು ನಿಯಮಗಳನ್ನು ಉಲ್ಲಂಘಿಸಿ ಮತ್ತೆ ಜಿಲ್ಲೆಯಲ್ಲಿ ಕಾಣಿಸಿಕೊಂಡು ತನ್ನ ದಾದಾಗಿರಿಯನ್ನು ಮುಂದುವರಿಸಿದ್ದನು ಎನ್ನಲಾಗಿದೆ.
ಆತನ ಅಪರಾಧ ಹಿನ್ನೆಲೆ, ಪ್ರಕರಣಗಳ ದಾಖಲೆಗಳು ಹಾಗೂ ಸಾರ್ವಜನಿಕ ಶಾಂತಿಗೆ ಉಂಟಾಗಬಹುದಾದ ಅಪಾಯವನ್ನು ಪರಿಗಣಿಸಿ, ಪೊಲೀಸ್ ಇಲಾಖೆ ಗೂಂಡಾ ಕಾಯ್ದೆಯಡಿ ಬಂಧನ ಪ್ರಕ್ರಿಯೆ ಕೈಗೊಂಡಿದೆ. ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಒಂದು ವರ್ಷದ ಕಾಲ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡುವಂತೆ ಆದೇಶಿಸಲಾಗಿದೆ.
ಅಶಾಂತಿ ಸಹಿಸಲ್ಲ: ಸಾರ್ವಜನಿಕ ಶಾಂತಿ ಕದಡುವ, ಪುನರಾವರ್ತಿತ ಅಪರಾಧಗಳಲ್ಲಿ ತೊಡಗುವ ಹಾಗೂ ಕಾನೂನಿಗೆ ಸವಾಲು ಹಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಕೈಗೆತ್ತಿಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸುವುದು ಜನರಲ್ಲಿ ಭಯ ಮೂಡಿಸುವವರನ್ನು ಸಹಿಸುವುದಿಲ್ಲ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.ಅಲ್ಪಸಂಖ್ಯಾತ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗ್ರಹ
ನರಗುಂದ: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯವರ ಮಂತ್ರಿ ಮಂಡಲದಲ್ಲಿ 5 ಜನ ಮುಸ್ಲಿ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಸ್ಲಿಂ ಹಕ್ಕುಗಳ ವೇದಿಕೆಯ ಮುಖಂಡರು ಆಗ್ರಹಿಸಿದರು.ಶುಕ್ರವಾರ ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರಾದ ಜಮೀರ್ ಅಹ್ಮದ್ ಖಾ್, ಸಲೀಂ ಅಹ್ಮದ, ತನ್ವೀರ್ ಸೇಠ್, ಖನೀಜಾ ಫಾತಿಮಾ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಟಿಸಿದರು.ಈ ಸಂದರ್ಭದಲ್ಲಿ ಭಾಷಾ ಪಠಾಣ, ಅಫ್ತಾರ ಪಠಾಣ, ಬುಡ್ಡ ಮಟಗೇರ, ಮೋದಿನಸಾಬ ಮುಳಗುಂದ, ರಜಾಕ ಸೊಲಾಪುರ, ರಾಜು ನದಾಫ, ದಾವೂದ ಖಾನ, ಲೋದಿ ಫಾರೂಕ್ ಮಾಜಿದಮನಿ, ಭಾಷಾಸಾಬ ಗದಗ, ಇಬ್ರಾಹಿಂ ಸವಟಗಿ, ಮೊಮ್ಮದ್ ಮದರ್ಖಂಡಿ, ರಫೀಕ ಜಮಖಾನ, ಮುಲ್ಲನವರ, ಕಲಂಧರ ಸಕಲಿ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.