ನಾನು ರಾಜಕೀಯದ ಕೊನೆಯ ಘಟ್ಟಕ್ಕೆ ಬಂದು ನಿಂತಿದ್ದೇನೆ ಎಂದ ಸಚಿವ

KannadaprabhaNewsNetwork |  
Published : Feb 10, 2026, 01:15 AM IST
Mysuru

ಸಾರಾಂಶ

ನಾನು ರಾಜಕೀಯದ ಕೊನೆಯ ಘಟ್ಟಕ್ಕೆ ಬಂದು ನಿಂತಿದ್ದೇನೆ, ಇನ್ನು ಎರಡುವರೆ ವರ್ಷಗಳಲ್ಲಿ ತಾಲೂಕಿಗೆ ಬೇಕಾದ ಅಭಿವೃದ್ಧಿಗಳನ್ನು ಮಾಡಿ ಜನಮನದಲ್ಲಿ ಉಳಿಯಬೇಕೆಂದಿದ್ದೇನೆ ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್‌ಹೇಳಿದರು

 ಬೆಟ್ಟದಪುರ  : ನಾನು ರಾಜಕೀಯದ ಕೊನೆಯ ಘಟ್ಟಕ್ಕೆ ಬಂದು ನಿಂತಿದ್ದೇನೆ, ಇನ್ನು ಎರಡುವರೆ ವರ್ಷಗಳಲ್ಲಿ ತಾಲೂಕಿಗೆ ಬೇಕಾದ ಅಭಿವೃದ್ಧಿಗಳನ್ನು ಮಾಡಿ ಜನಮನದಲ್ಲಿ ಉಳಿಯಬೇಕೆಂದಿದ್ದೇನೆ ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್‌ಹೇಳಿದರು. 

ಪಿರಿಯಾಪಟ್ಟಣ ತಾಲೂಕಿನ ಮರದೂರು ವಡ್ಡರಹಳ್ಳಿ, ಮೇಲೂರು, ಕೊತ್ತುವಳ್ಳಿ ಗ್ರಾಮಗಳಲ್ಲಿ ಸುಮಾರು 10 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಯಾರು ನಮ್ಮ ಹಿತೈಷಿಗಳು ಅವರನ್ನು ಬೆಂಬಲಿಸಿ, ನಮ್ಮಂತೆ ಸಹಕರಿಸಬೇಕೆಂದು ತಿಳಿಸಿದರು. 

ರಾಗಿ ಖರೀದಿ ಕೇಂದ್ರ ಉದ್ಘಾಟನೆ ಬೆಟ್ಟದಪುರದಲ್ಲಿ ಈ ವರ್ಷದ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಈ ಬಾರಿ ರಾಗಿ ಖರೀದಿ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು, ರೈತರಿಗೆ ಅನ್ಯಾಯವಾದರೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. 

 ರಾಗಿಗೆ ಯಾವುದೇ ತರಹದ ಕೂಲಿಯನ್ನು ವಸೂಲಿ ಮಾಡಬಾರದು

ರೈತರು ತರುವ ರಾಗಿಗೆ ಯಾವುದೇ ತರಹದ ಕೂಲಿಯನ್ನು ವಸೂಲಿ ಮಾಡಬಾರದು, ಎಪಿಎಂಸಿ ಆವರಣದಲ್ಲಿ ಬರುವ ರೈತರಿಗೆ ಯಾವುದೇ ತರಹ ತೊಂದರೆ ನೀಡಿದರೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಪ್ರತಿವಾರವು ತಮ್ಮ ಗಮನಕ್ಕೆ ತರಬೇಕೆಂದು ಹಾಗೂ ಬಂಡವಾಳಶಾಹಿಗಳು ರೈತರನ್ನು ಉಪಯೋಗಿಸಿಕೊಂಡು ರೈತರಿಂದ ಖರೀದಿ ಮಾಡಿದ ಉತ್ತಮ ಗುಣಮಟ್ಟದ ರಾಗಿಗೆ ಕಲ್ಲು ಮಣ್ಣುಗೂ ಬೆಳೆಸಿಕೊಂಡು ವ್ಯಾಪಾರ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. 

ಖರೀದಿ ಕೇಂದ್ರದಲ್ಲಿ ರೈತರ ಮೇಲೆ ದಬ್ಬಾಳಿಕೆ ಕ್ರಮ

ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಸ್ವಾಮಿಗೌಡ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಆನಂದ್ ಮಾತನಾಡಿ, ಖರೀದಿ ಕೇಂದ್ರದಲ್ಲಿ ರೈತರ ಮೇಲೆ ದಬ್ಬಾಳಿಕೆ, ಅಕ್ರಮವಾಗಿ ಕೂಲಿ ವಸೂಲಿ ದೌರ್ಜನ್ಯಗಳು ನಡೆದರೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಚಿವರಿಗೆ ಮನವಿ ಮಾಡಿದರು. 

ಮೇಲಾಧಿಕಾರಿಗಳು ಸ್ಥಳದಲ್ಲೇ ವಾಸ್ತವ್ಯವಿದ್ದು ಪ್ರತಿದಿನ ರೈತರಿಗೆ ತೊಂದರೆ ಆಗದಂತೆ ಖರೀದಿ ಮಾಡಬೇಕೆಂದು ತಿಳಿಸಿದರು.ಕಾಂಗ್ರೆಸ್ ಮುಖಂಡ ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಸ್ವಾಮಿಗೌಡ, ರಹಮದ್ ಜಾನ್ ಬಾಬು, ಪಿಎಲ್. ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ ಜಿಲ್ಲಾ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಚಿಕ್ಕೇಗೌಡ, ವಿಜಯರಾಜ ಅರಸ್, ವಿಎಸ್ಎಸ್ಎನ್ ಅಧ್ಯಕ್ಷ ದಿಲೀಪ್ ಗೌಡ, ಕುಮಾರ್, ಬಿಟಿಕೆ ಶೇಖರ್, ಬಿ.ವಿ. ರವಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ. ಗಿರೀಶ್, ಮಾಜಿ ಎಪಿಎಂಸಿ ಅಧ್ಯಕ್ಷ ಜಯಚಂದ್ರ, ಯಶೋಧರ, ರಾಜ್ಯ ಅರಸು ಮಂಡಳಿ ನಿರ್ದೇಶಕ ಸತೀಶ್ ರಾಜ್ ಅರಸ್, ತಹಸೀಲ್ದಾರ್ ನಿಸರ್ಗಪ್ರಿಯ, ಇಒ ಸುನಿಲ್ ಕುಮಾರ್, ಆಹಾರ ಇಲಾಖೆಯ ಸಣ್ಣಸ್ವಾಮಿ, ಮಂಜುನಾಥ್, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರು, ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ
ಗ್ಯಾಸ್‌ಗಾಗಿ ಆಟೋ ಚಾಲಕರ ಯುದ್ಧ! - ಬಂಕ್‌ಗಳ ಮುಂದೆ ರಾತ್ರಿ ಇಡೀ ಜಾಗರಣೆ