ಕನ್ನಡಪ್ರಭ ವಾರ್ತೆ ಹೊಸನಗರ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹೆಸರಿಗೆ ಹೋಗಿರುವ ರೈತರ ಭೂಮಿ ವಾಪಸ್ ರೈತರಿಗೆ ಸಿಗಲಿ, ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ಅನ್ನದಾತನಿಗೆ ಖನ್ನ ಹಾಕುವ ಕೆಲಸ ಜಮೀರ್ ಟೀಂ ಮತ್ತು ಸಿದ್ದರಾಮಯ್ಯ ಮಾಡಿದ್ದಾರೆ. ಶಿವಮೊಗ್ಗದ ಮೂಡ್ಲಿಯಲ್ಲಿ ಈಗಾಗಲೇ ಐತಿಹಾಸಿಕ ಸ್ಥಳಗಳ ಜಾಗಗಳನ್ನು ವಕ್ಫ್ ಕಬಳಿಸಲು ಯತ್ನಿಸುತ್ತದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಕ್ಫ್ ಆಸ್ತಿಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳು ವಕ್ಫ್ ಕೈ ಸೇರಿವೆ ಎಂದು ತಿಳಿಯಲಿದ್ದು, ಅವುಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರೈತರು ನೆಮ್ಮದಿ ಜೀವನ ನಡೆಸುವುದು ಕಷ್ಟವಾಗಿದೆ. ಪಹಣಿಗಳಲ್ಲಿ ತಮ್ಮ ಹೆಸರು ಹೋಗಿ ವಕ್ಫ್ ಬೋರ್ಡ್ ಎಂದು ನಮೂದಾಗುವುದೋ ಎಂಬ ಆತಂಕದಲ್ಲಿ ರೈತಾಪಿ ವರ್ಗವಿದೆ. ಇದಕ್ಕೆ ಮಠ-ಮಂದಿರಗಳು ಹೊರತಾಗಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಲವು ಹಿಂದೂ ದೇವಾಲಯಗಳ ಜಮೀನು ಸಹ ಇಂದು ವಕ್ಫ್ ಬೋರ್ಡ್ ಹೆಸರಿಗೆ ಪಹಣಿಯಲ್ಲಿ ನೊಂದಣಿಯಾಗಿರುವುದು ದುರಂತದ ಸಂಗತಿ ಎಂದು ಹೇಳಿದರು.ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಪಕ್ಷದ ಹಲವು ನಾಯಕರು ಘಟನೆ ನಡೆದ ಸ್ಥಳವಾದ ವಿಜಯಪುರ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಪಹಣಿ ಸಮಸ್ಯೆಗಳನ್ನು ರೈತರಿಂದ ಆಲಿಸಿದ್ದು, ಬಿಜೆಪಿ ರಾಜ್ಯಾದ್ಯಂತ ಗಂಭೀರ ಹೋರಾಟಕ್ಕೆ ಮುಂದಾಗಿದೆ.
ರಾಜ್ಯಾದ್ಯಂತ ದಾಖಲೆ ತಿದ್ದಿ ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ. ಸರ್ಕಾರ ಕೂಡಲೇ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.