ಪ್ರತಿಫಲಾಪೇಕ್ಷೆಯಿಲ್ಲದ ಕೆಲಸದಿಂದ ತೃಪ್ತಿ

KannadaprabhaNewsNetwork |  
Published : Oct 07, 2024, 01:35 AM IST
ಬಳಗ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಇಂದು ಪ್ರಶಸ್ತಿ, ಹೆಸರು, ಕೀರ್ತಿ ಸಂಪಾದನೆಗೆ ಹರ ಸಾಹಸ ಪಡುತ್ತಿದ್ದೇವೆ, ವಸೂಲಿ ಪ್ರಭಾವ ಬೀರುವ ಕೆಲಸ ಸರಿಯಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸ ನೀಡುವ ತೃಪ್ತಿ ದೊಡ್ಡದು ಎಂದು ತಾಲ್ಲೂಕು ಅಕ್ಷರ ದಾಸೋಹ( ಬಿಸಿಯೂಟ ಯೋಜನೆ) ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಇಂದು ಪ್ರಶಸ್ತಿ, ಹೆಸರು, ಕೀರ್ತಿ ಸಂಪಾದನೆಗೆ ಹರ ಸಾಹಸ ಪಡುತ್ತಿದ್ದೇವೆ, ವಸೂಲಿ ಪ್ರಭಾವ ಬೀರುವ ಕೆಲಸ ಸರಿಯಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸ ನೀಡುವ ತೃಪ್ತಿ ದೊಡ್ಡದು ಎಂದು ತಾಲ್ಲೂಕು ಅಕ್ಷರ ದಾಸೋಹ( ಬಿಸಿಯೂಟ ಯೋಜನೆ) ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಹೇಳಿದರು.

ಪಟ್ಟಣದ ಹುಡ್ಕೋ ಬಡಾವಣೆಯ ಹಸಿರು ತೋರಣ ಉದ್ಯಾನವನದಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕವಾದ ಅಶೋಕ ರೇವಡಿ ಹಾಗೂ ಬಿದರಕುಂದಿ, ಎನ್.ಎಲ್.ನಾಯ್ಕೋಡಿ ಪ್ರತಿಷ್ಠಾನ ನೀಡುವ ಗುರುಶ್ರೇಷ್ಠ ಪ್ರಶಸ್ತಿ ಪಡೆದ ಬಿ.ಎಚ್.ಬಳಬಟ್ಟಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯತ್ವ ಪಡೆಯುವುದು ಗೌರವದ ಸಂಗತಿ. ಅದರಲ್ಲೂ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕಗೊಳ್ಳುವುದು ಗೌರವದ ಸಂಕೇತ. ಬಿದರಕುಂದಿ ನಾಯ್ಕೋಡಿ ಪ್ರತಿಷ್ಠಾನ ಸಹ ಅತ್ಯಂತ ಯೋಗ್ಯರಾದ ನಿವೃತ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತದೆ ಎಂದರು.ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷರಾದ ರವಿ ಗೂಳಿ ಹಾಗೂ ಬಿ.ಎಸ್.ಮೇಟಿ ಮಾತನಾಡಿ, ಅಶೋಕ ರೇವಡಿ ಹಾಗೂ ಬಿ.ಎಚ್.ಬಳಬಟ್ಟಿ ಅವರ ಸಮಾಜಮುಖಿ ಕೆಲಸ ಗುರುತಿಸಿ ಸನ್ಮಾನ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಸನ್ಮಾನ ಸ್ವೀಕರಿಸಿ ಅಶೋಕ ರೇವಡಿ ಹಾಗೂ ಬಿ.ಎಚ್.ಬಳಬಟ್ಟಿ ಮಾತನಾಡಿದರು. ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ ಮಾತನಾಡಿ, ಸದಸ್ಯರನ್ನು ವಿವಿಧ ಸಂಘ, ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದು ನಮಗೆಲ್ಲ ಸಂತಸದ ಸಂಗತಿಯಾಗಿದೆ. ಪ್ರಶಸ್ತಿಗಳು ನಮ್ಮ ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಶ್ರೀಶೈಲ ಮರೋಳ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ, ಬಿ.ಎಸ್.ಮೇಟಿ, ರವಿ ಗೂಳಿ, ರಾಜಶೇಖರ ಕಲ್ಯಾಣಮಠ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ವೆಂಕನಗೌಡ ಪಾಟೀಲ, ಅಮರೇಶ ಗೂಳಿ, ಕಿರಣ ಕಡಿ, ಬಸವರಾಜ ಸಿದರಡ್ಡಿ, ರವಿ ತಡಸದ, ಬಿ.ಎಂ.ಪಲ್ಲೇದ, ವೀರೇಶ ಹಂಪನಗೌಡ್ರ, ವಿಲಾಸರಾವ್ ದೇಶಪಾಂಡೆ, ಶರಣು ಹಿರೇಕುರುಬರ, ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ಅಮರೇಶ ಐಹೊಳೆ, ಸೋಮಶೇಖರ ಚೀರಲದಿನ್ನಿ, ಜಿ.ಎಂ.ಹುಲಗಣ್ಣಿ, ಪಿ.ಆರ್.ಕೂಡಗಿ, ಶಿವನಗೌಡ ಪಾಟೀಲ, ಪುಟ್ಟು ಕಡಕೋಳ, ವೀರೇಶ ಢವಳಗಿ, ವಿನಯಕುಮಾರ ಹಿರೇಮಠ, ಚಿದಾನಂದ ಗುಬಚಿ, ವಿನಯ ಗಡೇದ ಇದ್ದರು. ಶಿಕ್ಷಕರಾದ ಎಲ್.ಎಂ.ಚಲವಾದಿ ಸ್ವಾಗತಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ನಾಗಭೂಷಣ ನಾವದಗಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ