ಕನ್ನಡಪ್ರಭ ವಾರ್ತೆ ಕೋಲಾರಹಿರಿಯರು ಕುಟುಂಬದಲ್ಲಿ ಯಾರಿಗೂ ಹೊರೆಯಾಗದಂತೆ ಜೀವನ ನಡೆಸಲು ಅನುಕೂಲವಾಗುವಂತೆ ಸರ್ಕಾರವು ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳನ್ನು ಬಳಸಿಕೊಂಡು ನೆಮ್ಮದಿಯ ಜೀವನ ನಡೆಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ೨೦೦೭ರಲ್ಲಿ ಹಿರಿಯ ನಾಗರೀಕರ ಸುರಕ್ಷತೆಗಾಗಿ ಕಾಯ್ದೆ ಜಾರಿಗೊಳಿಸಿದ್ದು, ಹಿರಿಯರು ಈ ಕಾಯ್ದೆಯ ಪ್ರಯೋಜನ ಪಡೆಯಬೇಕು, ಆಸರೆಯಿಲ್ಲದವರಿಗೆ ಊಟ ಬಟ್ಟೆ ಹಾಗೂ ಜೀವನಾಂಶ ಒದಗಿಸಲು ಸಹಾಯವಾಗುತ್ತಿದೆ ಎಂದರು. ತಂದೆ, ತಾಯಿಯನ್ನು ಪೋಷಿಸಿ
ಇತ್ತೀಚಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ ಪಡೆಯಲು ಸಹಾಯವಾಣಿ ತೆರೆಯಲಾಗಿದೆ. ಬಸ್-ರೈಲ್ವೆ ನಿಲ್ದಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ಉಚಿತ ಸಹಾಯವಾಣಿ ಸಂಖ್ಯೆ ಪ್ರದರ್ಶಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು. ರಸ್ತೆ ಬದಿಗಳಲ್ಲಿ, ದೇವಸ್ಥಾನಗಳ ಬಳಿ ನಿರಾಶ್ರಿತ ಹಿರಿಯ ನಾಗರೀಕರು ಕಂಡು ಬಂದರೆ ಕೂಡಲೇ ಕರೆ ಮಾಡಿ ಮಾಹಿತಿ ತಿಳಿಸುವುದು ಸಾಮಾಜಿಕ ಜವಾಬ್ದಾರಿ ಎಂದರು.ಶತಾಯುಷಿಗಳಿಗೆ ಸನ್ಮಾನ
ಶತಾಯುಷಿಗಳಾದ ಗದ್ದೆಕಣ್ಣೂರು ಸಂಗಪ್ಪ, ತಲಗುಂದ ಚೌಡಪ್ಪ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಹಿರಿಯರಿಗೆ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಇಲಾಖಾಧಿಕಾರಿ ರಮ್ಯ.ಎಂ ಇದ್ದರು.