ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಹೊರವಲಯದಲ್ಲಿರುವ ಬಂಧಿಖಾನೆಯಲ್ಲಿನ ಖೈದಿಗಳಿಗೆ ಬೆಂಗಳೂರಿನ ಕಾಲಿಂಗ್ ಏರೋಸ್ಪೇಸ್ ಕಂಪನಿಯವರು ಹಮ್ಮಿಕೊಂಡಿದ್ದ ವಿವಿಧ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ-ಜಾತಿಗಳ ನಡುವೆ ಕಿತ್ತಾಟ ಶುರುವಾಗಿದ್ದು, ದೇಶಭಕ್ತಿ, ಐಕ್ಯತೆ ನಶಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಾಲಿಂಗ್ ಏರೋಸ್ಪೇಸ್ ಕಂಪನಿಯವರು ನೀರಿನ ಘಟಕ ಇನ್ನಿತರೆ ಸಲಕರಣೆಗಳನ್ನು ನೀಡಿರುವುದು ನಿಜಕ್ಕೂ ಅರ್ಥಪೂರ್ಣವಾದುದು ಎಂದರು.
ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಎಸಗಿ ಇಲ್ಲಿಗೆ ಬಂದಿದ್ದೀರ. ನಿಮ್ಮ ನಡವಳಿಕೆಗಳನ್ನು ತಿದ್ದಿಕೊಂಡು ಹೊರಗೆ ಹೋದ ಮೇಲೆ ಪರಿವರ್ತನೆಯಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕು ಕಟ್ಟಿಕೊಳ್ಳಿ. ಸಿಟ್ಟಿನ ಕೈಗೆ ಬುದ್ದಿ ಕೊಡಬೇಡಿ ಎಂದು ಖೈದಿಗಳಿಗೆ ಕಿವಿಮಾತು ಹೇಳಿದರು.ಕಾಲಿಂಗ್ ಏರೋಸ್ಪೇಸ್ ಕಂಪನಿಯ ಕರಣ್ ಮಾತನಾಡಿ, ಸಮಾಜಕ್ಕೆ ಏನಾದರೂ ಉಪಕಾರಿಯಾಗಬೇಕೆಂಬ ಚಿಂತನೆಯಿಟ್ಟುಕೊಂಡು ಕಂಪನಿಯಿಂದ ನಿಮಗೆ ಕೆಲವು ಸಲಕರಣೆಗಳನ್ನು ವಿತರಿಸಿದ್ದೇವೆ. ಲೈಬ್ರರಿಯಲ್ಲಿ ಸಿಗುವ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ನೀವು ಕುಟುಂಬವನ್ನು ಬಿಟ್ಟು ಜೈಲಿನಲ್ಲಿರುವುದೇ ನಿಮಗೆ ದೊಡ್ಡ ಶಿಕ್ಷೆ. ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನದೆ ಆದ ಹಕ್ಕಿದೆ. ಹಾಗಂತ ಸ್ವೇಚ್ಚಾಚಾರವಾಗಿ ವರ್ತಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.
ಕಾಲಿಂಗ್ ಏರೋಸ್ಪೇಸ್ ಕಂಪನಿಯ ನಾಗವೇಣಿ , ಸಮಾಜ ಸೇವಕಿ ಗಾಯತ್ರಿ ಶಿವರಾಂ, ವೈ.ಬಿ.ಮಹೇಂದ್ರನಾಥ್, ನಾಗರಿಕ ಬಂದೂಕು ತರಬೇತಿ ಶಿಬಿರದ ಮಹಮದ್‌ಆಲಿ, ಜೈಲರ್ ರಾಜೇಂದ್ರ ಕೋರ್ಪಡೆ, ಸಹಾಯಕ ಜೈಲರ್‌ಗಳಾದ ರಾಮಣ್ಣ ಹರ‍್ಕಲ್ ಮಡಿವಾಳಪ್ಪ, ಕಾಲಿಂಗ್ ಏರೋಸ್ಪೇಸ್ ಕಂಪನಿಯ ಪುರುಷೋತ್ತಮ್, ರಾಘವೇಂದ್ರ, ಪಾಲ್ಗುಣ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪರಿಷತ್ ಸದಸ್ಯ ಬಸವರಾಜ್ ಇದ್ದರು.