ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರಗಳನ್ನು ಉಮೇದುದಾರರು ಅಥವಾ ಸೂಚಕರು ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕಗೆ ಕಲಬುರಗಿ ಶಾಮರಾವ್ ಮೇದಾರ್ ಭಾರತೀಯ ಜನ ಸಾಮ್ರಾಟ್ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ಉಮೇದುದಾರರ ಸೂಚಕರು ಉಪಸ್ಥಿತರಿದ್ದರು. ಶುಕ್ರವಾರದಿಂದ ಆರಂಭಗೊಂಡಿರುವ ನಾಮಪತ್ರ ಸಲ್ಲಿಕೆ ಕಾರ್ಯವು ಎ.19 ರ ವರೆಗೆ ನಡೆಯಲಿದೆ.ಬಿಗಿ ಭದ್ರತೆ:ಲೋಕಸಭಾ ಚುನಾವಣೆ ನಾಮತ್ರ ಸಲ್ಲಿಕೆ ಪ್ರಕ್ರಿಯೇ ಶುರುವಾಗಿದ್ದರಿಂದ ಚುನಾವಾಣಧಿಕಾರಿಗಳ ಕಚೇರಿಯಾಗಿರುವ ಜಿಲ್ಲಾಧಿಕಾರಿ ಕಚೇರಿ ಸುತ್ತಲು ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಪೊಲೀಸ್ ಹಾಗೂ ಸೇನೆ ಸಿಬ್ಬಂದಿ ಕಚೇರಿ ಸುತ್ತಲು ಭದ್ರತೆ ಕೊಟ್ಟರು. ಬಿರು ಬಿಸಿಲು ಹಿನ್ನೆಲೆ ಡಿಸಿ ಕಚೇರಿ ಆವರಣದಲ್ಲಿ ನೆರಳಿನ ವ್ಯವಸ್ಥೆ ಸಹ ಮಾಡಲಾಯಿತು. ಮುಂದಿನ ವಾರದಲ್ಲಿ ಕಾಂಗ್ರೆಸ್,ಬಿಜೆಪಿ ಸೇರಿ ಇತರೆ ಪಕ್ಷಗಳಿಂದ ಉಮೇದುವಾರಿಕೆಗಳು ಸಲ್ಲಿಕೆಯಾಗಲಿದ್ದು, ಬರುವ ಎ.20 ಶನಿವಾರ ನಾಮಪತ್ರಗಳ ಪರಿಶೀಲನೆ ಕಾರ್ಯ ಜರುಗಲಿದ್ದು, 22 ರೊಳಗೆ ನಾಮಪತ್ರ ವಾಪಸ್ಸು ಪಡೆಯಬಹುದಾಗಿದೆ. ಮೇ.7 ಕ್ಕೆ ಮತದಾನ ಅದೇ ರೀತಿ ಜೂ.4 ಕ್ಕೆ ಮತ ಎಣಿಕೆ ಎಣಿಕೆ ಜರುಗಲಿದೆ.