ತರಳಬಾಳು ವಿದ್ಯಾಸಂಸ್ಥೆ ಟಿಪಿಸಿಕೆ ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿಕೆಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ತರಳಬಾಳು ವಿದ್ಯಾಸಂಸ್ಥೆಯ ಟಿಪಿಸಿಕೆ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿರಿಗೆರೆ ತರಳಬಾಳು ಮಠ ಸ್ವತಂತ್ರ ಪೂರ್ವದಲ್ಲೇ ವಿದ್ಯಾಸಂಸ್ಥೆ ಕಟ್ಟಿ ಬೆಳೆಸಿ ಲಕ್ಷಾಂತರ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಕಾರಣವಾಗಿದೆ. ಸಂಸ್ಥೆಯ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ.
ಈ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುವುದೇ ಒಂದು ಪುಣ್ಯ. ವಿದ್ಯಾಭ್ಯಾಸ ಮಾಡುವುದು ಮಹಾಪುಣ್ಯ. ತಂದೆ-ತಾಯಿಗಳು ಬಹಳ ಶ್ರಮದಿಂದ ಮಕ್ಕಳ ವಿದ್ಯಾವಂತರಾಗಿಸಲು ಪ್ರಯತ್ನಿಸುವರು. ತಂದೆ ತಾಯಿಗಳ ಕನಸು ನನಸಾಗಿಸಲು ಮಕ್ಕಳು ಗಮನ ನೀಡಬೇಕು. ಓದಿನ ಜೊತೆಗೆ ನಿತ್ಯ ವಿದ್ಯಾರ್ಥಿಗಳು ವಚನ, ಪುರಾಣ, ಮಹಾಕಾವ್ಯಗಳ ಅಭ್ಯಾಸ ಮಾಡಿ ವಿನಯವಂತಿಕೆ ಸಂಸ್ಕೃತಿ ಸಂಸ್ಕಾರ ಕಲಿಯಬೇಕು. ಮೌಲ್ಯಗಳ ಬದುಕು ಎಲ್ಲರದಾಗಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಲವಕುಮಾರ್ ಜಿ.ಎಚ್, ವಿದ್ಯಾರ್ಥಿಗಳು ಓದುಬರಹದ ಜೊತೆಗೆ ಸಾಂಸ್ಕೃತಿಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸರ್ವತೋಮುಖ ಅಭಿವೃದ್ಧಿಗೆ ವಿದ್ಯಾರ್ಥಿಗಳು ಆಟೋಟಗಳಲ್ಲಿ ನೃತ್ಯ ಕಲೆ ಹಾಡುಗಾರಿಕೆ ಮುಂತಾದ ವ್ಯಕ್ತಿತ್ವ ವಿಕಸನ ಚಟುವಟಿಕೆಗಳಲ್ಲಿ ನಿತ್ಯ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದರು.ಶಾಲಾ ಸಲಹ ಸಮಿತಿ ಉಪಾಧ್ಯಕ್ಷ ಸುಧಾ ಮಾರುತೇಶ್, ಶಾಲಾ ಮುಖ್ಯ ಶಿಕ್ಷಕಿ ಎನ್.ವಿ.ದಿವ್ಯ, ಸದಸ್ಯರಾದ ಪ್ರಭಾಕರ್ ಮಾಳಿಗೆ, ರಾಜಶೇಖರ್, ಮಮತಾ ಗುರುಶಾಂತಪ್ಪ, ಶಕುಂತಲಾ, ಪ್ರ್ರವೀಣ್, ಮಾರುತೇಶ್, ಕೆ.ಚಂದ್ರಯ್ಯ, ಡಿ.ಆಶಾ, ಎಚ್.ಎಸ್.ಹಾಲೇಶ್, ಕವಿತಾ ಶಾಲಾ ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.