ಶೃಂಗೇರಿ ಮಳೆಯ ನಡುವೆ ದುಮ್ಮಿಕ್ಕುತ್ತಿರುವ ಸಿರಿಮನೆ ಜಲಪಾತ ಸೊಗಸು

KannadaprabhaNewsNetwork |  
Published : Jul 23, 2026, 01:15 AM IST
ೇ್ | Kannada Prabha

ಸಾರಾಂಶ

ಶೃಂಗೇರಿ ಸಹ್ಯಾದ್ರಿ ಪರ್ವತ ಶ್ರೇಣಿಗಳ ನರಸಿಂಹ ಪರ್ವತದ ತಪ್ಪಲಲ್ಲಿ ಭಾರೀ ಮಳೆ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಸಿರಿಮನೆ ಜಲಪಾತದಲ್ಲಿ ನೀರು ಧುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕನ್ನಡಪ್ರಭ ವಾರ್ತೆ. ಶೃಂಗೇರಿ

ಸಹ್ಯಾದ್ರಿ ಪರ್ವತ ಶ್ರೇಣಿಗಳ ನರಸಿಂಹ ಪರ್ವತದ ತಪ್ಪಲಲ್ಲಿ ಭಾರೀ ಮಳೆ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಸಿರಿಮನೆ ಜಲಪಾತದಲ್ಲಿ ನೀರು ಧುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಧಾರ್ಮಿಕ ಕ್ಷೇತ್ರ ಶೃಂಗೇರಿಯಿಂದ ಸುಮಾರು 11 ಕಿ.ಮೀ. ದೂರದಲ್ಲಿರುವ ಸಿರಿಮನೆ ಕಿಗ್ಗಾ ಗ್ರಾಮದಲ್ಲಿದೆ. ಶೃಂಗೇರಿ ಕಾರ್ಕಳ ರಸ್ತೆಯಿಂದ ಸುಮಾರು 8 ಕಿ.ಮೀ. ದೂರದಲ್ಲಿ ಕಿಗ್ಗಾವಿದೆ. ಇಲ್ಲಿ ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯವಿದೆ. ಇಲ್ಲಿಂದ ಸುಮಾರು 3 ಕಿ.ಮೀ. ಅಂತರ ದೂರದಲ್ಲಿದೆ ಸಿರಿಮನೆ.

ಮಂಗಳೂರು ಕಾರ್ಕಳ ಕಡೆಯಿಂದ ನೆಮ್ಮಾರಿನಿಂದ ಸು.11 ಕಿ.ಮಿ.ದೂರ ಪ್ರಯಾಣಿಸಿ ಸಿರಿಮನೆ ತಲುಪಬಹುದು. ಪಶ್ಚಿಮ ಘಟ್ಟಗಳ ದಟ್ಟ ಕಾನನಗಳ ನಡುವೆ ಸೊಗಸಾಗಿ ದುಮ್ಮಿಕ್ಕುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವರ್ಷವಿಡೀ ನೀರು ತುಂಬಿರು ವುದರಿಂದ ಈ ಜಲಪಾತಕ್ಕೆ ವೀಕ್ಷಣೆಗೆ ವರ್ಷವಿಡೀ ವಿವಿಧೆಡೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ.

ಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದು, ಪ್ರವಾಸಿಗರಿಂದ ತುಂಬಿರುತ್ತದೆ. ಅಲ್ಲದೇ ಶೃಂಗೇರಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೆ ಬಂದು ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜಲಪಾತದಲ್ಲಿ ಪ್ರವಾಸಿಗರ ಅನುಕೂಲತೆ ದೃಷ್ಠಿಯಿಂದ ಸಾಕಷ್ಟು ಮೂಲ ಸೌಕರ್ಯ ಕಲ್ಪಿಸಲಾಗಿದೆ. ಕೆಳಗಿಳಿಯಲು ವ್ಯವಸ್ತಿತ ಮೆಟ್ಟಿಲುಗಳು, ಶೌಚಾಲಯ, ವಿಶ್ರಾಂತಿ ಕೊಠಡಿ,ವೀಕ್ಷಣಾ ಗೋಪೂರ ಇನ್ನಿತ್ಯಾದಿ ಸೌಲಭ್ಯ ಕಾಣಬಹುದಾಗಿದೆ. ಬೇಸಿಗೆ ಸುಡು ಬಿಸಿಲ ವಾತಾವರಣದ ನಡುವೆಯೂ ನೀರು ತುಂಬಿ ದುಮ್ಮಿಕ್ಕುತ್ತಿರುತ್ತದೆ. ಏಪ್ರಿಲ್,ಮೆ ತಿಂಗಳಲ್ಲಿಯೂ ಬಿಸಿಲ ದಾಹ ತಣಿಸಿಕೊಳ್ಳಲು ವಿವಿಧೆಡೆಗಳಿಂದ ಪ್ರವಾಸಿಗರು ಇಲ್ಲಿಗೆ ಮುಗಿ ಬೀಳುತ್ತಾರೆ.

-- ಬಾಕ್ಸ್‌--

ಮೊಬೈಲ್ ಸಂಪರ್ಕ ಸಮಸ್ಯೆ ನಿವಾರಿಸಲು ಟವರ್ ನಿರ್ಮಿಸಿ

ರಸ್ತೆ, ಮೂಲ ಸೌಕರ್ಯ, ಅಂಗಡಿ, ಹೋಟೇಲುಗಳಿದ್ದರೂ ಅಗತ್ಯ ಮೊಬೈಲ್ ಸೇವೆಯಿಲ್ಲ. ಕಿಗ್ಗಾ ದಲ್ಲಿ ಮೊಬೈಲ್ ಟವರ್ ಇದ್ದರೂ ಕೆಲ ದೂರ ಮಾತ್ರ ನೆಟ್ ವರ್ಕ್ ಸಿಗುತ್ತದೆ. ಆದರೆ ಸಿರಿಮನೆಯಲ್ಲಿ ಮೊಬೈಲ್ ಸಂಪರ್ಕವಿಲ್ಲದ ಕಾರಣ ಪ್ರವಾಸಿ ಗರು ಸೇರಿದಂತೆ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಅಪಘಾತ,ಅನಾರೋಗ್ಯ ಸಂದರ್ಭಗಳಲ್ಲಿ ತು್ರ್ತು ಚಿಕಿತ್ಸೆಗೆ ಪರದಾಡಬೇಕಿದೆ. ಪ್ರವಾಸಿ ತಾಣವಾಗಿ ರುವುದರಿಂದ ಸಾಕಷ್ಟು ಪ್ರವಾಸಿ ವಾಹನಗಳು ಸಂಚರಿಸುತ್ತಿರು ವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿರುತ್ತವೆ. ಇಂತಹ ತುರ್ತು ಸಂದರ್ಭದಲ್ಲಿ ಕರೆಮಾಡಲು ನೆಟ್ ವರ್ಕ ಇಲ್ಲದೇ ಕಿಗ್ಗಾಕ್ಕೆ ಬರಬೇಕಾದಂತಹ ದಯನೀಯ ಸ್ಥಿತಿ. ತುರ್ತಾಗಿ ಇಲ್ಲಿಗೊಂದು ಮೊಬೈಲ್ ಟವರ್ ನಿರ್ಮಿಸಿದರೆ ಇನ್ನಷ್ಟು ಅನುಕೂಲವಾಗಲಿದೆ.

22 22 ಶ್ರೀ ಚಿತ್ರ 2-ಶೃಂಗೇರಿ ತಾಲೂಕಿನಲ್ಲಿರುವ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಸಿರಿಮನೆ ಜಲಪಾತದಲ್ಲಿ ನೀರು ದುಮ್ಮಿುಕ್ಕುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಸೋರಿಕೆ: ಮೋದಿ ಜವಾಬ್ದಾರಿ ಹೊರಲಿ
ಪ್ಲಾಸ್ಟಿಕ್ ಮುಕ್ತ ಸುರಪುರ ನಿರ್ಮಾಣಕ್ಕೆ ಕೈಜೋಡಿಸಿ