ಸಮಾಜಸೇವಕರಿಗೆ ಸಾರ್ವಜನಿಕರ ಸಹಕಾರ ಸಿಗಲಿ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork |  
Published : Oct 19, 2024, 12:24 AM ISTUpdated : Oct 19, 2024, 12:25 AM IST
ಫೋಟೊಪೈಲ್- ೧೮ಎಸ್ಡಿಪಿ೪- ಸಿದ್ದಾಪುರದ ಆಶಾಕಿರಣ ಟ್ರಸ್ಟ ನೀಡುವ ಸದ್ಭಾವನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಭೀಮಣ್ಣ ನಾಯ್ಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಮಾಜಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ ಹಾಗೂ ಕೃಷಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಎರಡು ಸಂಸ್ಥೆಯವರಿಗೆ ಸದ್ಭಾವನಾ ಪ್ರಶಸ್ತಿ ನೀಡುವುದು ಅತ್ಯುತ್ತಮವಾದ ಕಾರ್ಯವಾಗಿದೆ.

ಸಿದ್ದಾಪುರ: ಸ್ಥಳೀಯ ಆಶಾಕಿರಣ ಟ್ರಸ್ಟ್ ವತಿಯಿಂದ ಸದ್ಭಾವನಾ ಪ್ರಶಸ್ತಿಯನ್ನು ಮನುವಿಕಾಸ ಸಂಸ್ಥೆ ಕರ್ಜಗಿ ಹಾಗೂ ಅಜಿತ ಮನೋಚೇತನ ಸಂಸ್ಥೆ ಶಿರಸಿ ಅವರಿಗೆ ನೀಡಲಾಯಿತು. ಸ್ಥಳೀಯ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಜನ್ಮದಿನೋತ್ಸವ ಹಾಗೂ ಮಹಾದೇವಿ ತಾಯಿ ದೊಡ್ಮನೆ ಇವರ ಸಂಸ್ಮರಣಾ ದಿನ ಪ್ರಯುಕ್ತ ಸದ್ಭಾವನಾ ದಿನ ಆಚರಣೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭವನ್ನು ಶಾಸಕ ಭೀಮಣ್ಣ ಟಿ. ನಾಯ್ಕ ಉದ್ಘಾಟಿಸಿದರು.ಭೀಮಣ್ಣ ನಾಯ್ಕ ಮಾತನಾಡಿ, ಸಾಮಾಜಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ ಹಾಗೂ ಕೃಷಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಎರಡು ಸಂಸ್ಥೆಯವರಿಗೆ ಸದ್ಭಾವನಾ ಪ್ರಶಸ್ತಿ ನೀಡುವುದು ಅತ್ಯುತ್ತಮವಾದ ಕಾರ್ಯವಾಗಿದೆ. ದನಿಯಿಲ್ಲದ ದುರ್ಬಲ ವರ್ಗಕ್ಕೆ ವಿಶೇಷಚೇತನರಿಗೆ ಸಹಾಯವನ್ನು ಕಲ್ಪಿಸಿ ಅವರಿಗಾಗಿ ಶಿಕ್ಷಣ ನೀಡುವ ಮಹಾನ್ ಕೆಲಸವನ್ನು ಡಾ. ರವಿ ಹೆಗಡೆ ಹೂವಿನ್ಮನೆ ಹಾಗೂ ಅವರ ತಂಡದವರು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸರ್ಕಾರದ ಹಾಗೂ ಸಾರ್ವಜನಿಕರ ಸಹಾಯಹಸ್ತ ಸಿಗಬೇಕು ಎಂದರು. ಶಿರಸಿಯ ಅಜಿತ ಮನೋಚೇತನ ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್ ಹಾಗೂ ಮನೋವಿಕಾಸ ಸಂಸ್ಥೆ ಕರ್ಜಗಿ ಇದರ ಮುಖ್ಯಸ್ಥ ಹರಿಶ್ಚಂದ್ರ ಭಟ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಮುಖ್ಯಅತಿಥಿ ಸ್ಥಳೀಯ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಪ್ರಶಸ್ತಿಗೆ ಪಾತ್ರರಾದ ಸುಧೀರ ಭಟ್ ಶಿರಸಿ, ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಮನುವಿಕಾಸ ಸಂಸ್ಥೆಯ ಪರವಾಗಿ ಅಧ್ಯಕ್ಷ ಗಣಪತಿ ಭಟ್, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ, ಶಿರಸಿ ಲಯನ್ಸ್ ವಲಯ ಅಧ್ಯಕ್ಷ ಅಶೋಕ ಹೆಗಡೆ ಹಾಗೂ ಸ್ಥಳೀಯ ಲಯನ್ಸ್ ಕಾರ್ಯದರ್ಶಿ ಕುಮಾರ ಗೌಡರ್ ಮಾತನಾಡಿದರು.ಅಧ್ಯಕ್ಷತೆಯನ್ನು ಆಶಾಕಿರಣ ಟ್ರಸ್ಟ್‌ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನ್ಮನೆ ಅವರು ವಹಿಸಿ ಮಾತನಾಡಿ, ಅಂಧ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಆಶಾಕಿರಣ ಟ್ರಸ್ಟ್ ಶ್ರಮಿಸುತ್ತಿದ್ದು, ಅದರ ಜತೆಯಲ್ಲಿ ಹೆಣ್ಣುಮಕ್ಕಳ ಉದ್ಯೋಗಾವಕಾಶಕ್ಕಾಗಿ ಹೊಲಿಗೆ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದ್ದು, ಒಂದು ಜನಪರ ಕೆಲಸವಾಗಿದೆ ಎಂದರು.ವೇದಿಕೆಯಲ್ಲಿ ಲಯನ್ಸ್ ಕೋಶಾಧ್ಯಕ್ಷ ಆಕಾಶ ಹೆಗಡೆ ಗುಂಜಗೋಡ, ಕಾರ್ಯಕ್ರಮದ ಸಂಯೋಜಕಿ ಮಧುಮತಿ ಶೀಗೇಹಳ್ಳಿ ಹಾಗೂ ಆಶಾಕಿರಣ ಟ್ರಸ್ಟ್‌ನ ಕೋಶಾಧ್ಯಕ್ಷ ನಾಗರಾಜ ದೋಶೆಟ್ಟಿ ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಮಧುಮತಿ ಶೀಗೇಹಳ್ಳಿ ಹಾಗೂ ನಾಗರಾಜ ದೋಶೆಟ್ಟಿ ಅವರು ವಾಚಿಸಿದರು. ಜಮುರಾ ಅಂಧರ ಶಾಲೆಯ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಅಂಧರ ಶಾಲೆಯ ವಿದ್ಯಾರ್ಥಿ ಸಹನಾ ಗೌಡ ಸ್ವಾಗತಿಸಿದರು. ಮಹೇಂದ್ರ ಎಸ್. ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ
ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ