ಯೋಧರ ರಕ್ಷಣೆಗೆ ಪ್ರಾರ್ಥಿಸಿ ಗಣೇಶನಿಗೆ ವಿಶೇಷ ಪೂಜೆ

KannadaprabhaNewsNetwork |  
Published : May 11, 2025, 11:46 PM IST
ಹಾವೇರಿಯ ದಾನೇಶ್ವರಿ ನಗರದ ಗಜಾನನ ದೇವಸ್ಥಾನದಲ್ಲಿ ಗಜಾನನ ಯುವಕ ಮಂಡಳಿ ವತಿಯಂದ ಭಾರತೀಯ ಯೋಧರ ರಕ್ಷಣೆಗಾಗಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಗಡಿಯಲ್ಲಿ ನಮ್ಮ ಯೋಧರು ಆಪರೇಷನ್ ಸಿಂದೂರ ಕಾರ್ಯಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಜಯಶಾಲಿಯಾಗಿ ಭಾರತ ಮಾತೆಯನ್ನು ಕಾಪಾಡುವಂತಹ ಶಕ್ತಿ ದಯಪಾಲಿಸಿ ಎಲ್ಲ ವಿಘ್ನಗಳನ್ನು ದೂರ ಮಾಡಲೆಂದು ಪ್ರಾರ್ಥಿಸಲಾಯಿತು.

ಹಾವೇರಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಎಲ್ಲ ಯೋಧರ ಮನೋಸ್ಥೈರ್ಯ ಹೆಚ್ಚಿಸಲು ಹಾಗೂ ಅವರ ರಕ್ಷಣೆಗಾಗಿ ಗಜಾನನ ಯುವಕ ಮಂಡಳಿ ವತಿಯಂದ ಸ್ಥಳೀಯ ದಾನೇಶ್ವರಿ ನಗರದ ಗಜಾನನ ದೇವಸ್ಥಾನದಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಡಿಯಲ್ಲಿ ನಮ್ಮ ಯೋಧರು ಆಪರೇಷನ್ ಸಿಂದೂರ ಕಾರ್ಯಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಜಯಶಾಲಿಯಾಗಿ ಭಾರತ ಮಾತೆಯನ್ನು ಕಾಪಾಡುವಂತಹ ಶಕ್ತಿ ದಯಪಾಲಿಸಿ ಎಲ್ಲ ವಿಘ್ನಗಳನ್ನು ದೂರ ಮಾಡಲೆಂದು ಪ್ರಾರ್ಥಿಸಲಾಯಿತು.ಈ ವೇಳೆ ಗಜಾನನ ಯುವಕ ಮಂಡಳಿಯ ಸಿದ್ದಲಿಂಗೇಶ ಮೆಣಸಿನಹಾಳ, ಮಲ್ಲಿಕಾರ್ಜುನ ಕಡ್ಡಿಪುಡಿ, ಕಲವೀರಪ್ಪ ಬೆಣಗೇರಿ, ಗಿರೀಶ ಮತ್ತು ಸಿದ್ದಣ್ಣ ಜೋಗೂರ ಸೇರಿದಂತೆ ಇತರರು ಇದ್ದರು. ಕೀರ್ತಿ ಕಾಲೇಜಿನ ಕಟ್ಟಡ ಉದ್ಘಾಟನೆ ಇಂದು

ಸವಣೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರಾರಂಭಿಸಿದ ಕೀರ್ತಿ ಪದವಿ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನೆ ಮೇ 12ರಂದು ಬೆಳಗ್ಗೆ 11 ಗಂಟೆಗೆ ನೆರವೇರಲಿದೆ ಎಂದು ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಪಾಟೀಲ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂತನ ಕಟ್ಟಡ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ಬಂಕಾಪುರದ ರೇವಣಸಿದ್ದೇಶ್ವರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಶಿಗ್ಗಾಂವಿಯ ಸಂಗನಬಸವ ಸ್ವಾಮೀಜಿ ಹಾಗೂ ಹಿರೇಮಣಕಟ್ಟಿಯ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸುವರು.ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೂತನ ಕಟ್ಟಡ ಉದ್ಘಾಟಿಸುವರು. ಸಂಸದ ಬಸವರಾಜ ಬೊಮ್ಮಾಯಿ ಘನ ಉಪಸ್ಥಿತಿ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮಾರಂಭ ಉದ್ಘಾಟಿಸುವರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಪೊಲೀಸಗೌಡ್ರ ಅಧ್ಯಕ್ಷತೆ ವಹಿಸುವರು.

ಶಾಸಕ ಯಾಸೀರಖಾನ್ ಪಠಾಣ ಸಭಾಭವನ ಹಾಗೂ ಉದ್ಯಮಿ ಭರತ ಬೊಮ್ಮಾಯಿ ಕಾಲೇಜಿನ ಗ್ರಂಥಾಲಯ ಉದ್ಘಾಟಿಸುವರು.

ಹೆಸ್ಕಾಂ ಅಧ್ಯಕ್ಷ ಸೈಯ್ಯದ ಅಜೀಮ್‌ಪೀರ್ ಖಾದ್ರಿ, ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಶಿಕ್ಷಣ ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಳ್ಳುವರು ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಪೊಲೀಸಗೌಡ್ರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟಕ್ಕಾಗಿ ಪದವಿ ಕಾಲೇಜಿನಲ್ಲಿ ಈಗಾಗಲೇ ಬಿಎ, ಬಿಕಾಂ ತರಗತಿ ಶಿಕ್ಷಣ ನೀಡಲಾಗುತ್ತಿದೆ. ನೂತನ ಕಾಲೇಜಿನ ಕಟ್ಟಡದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳದೊಂದಿಗೆ ಬಿಸಿಎ ತರಗತಿಯನ್ನು ಪ್ರಾರಂಭಿಸಲಾಗುವುದು ಎಂದರು.

ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಫಕ್ಕೀರಗೌಡ ಪೋಲಿಸಗೌಡ್ರ, ಪಾಚಾರ್ಯ ಪ್ರೊ. ಮಾಲತೇಶ ದಾನಪ್ಪನವರ ಸೇರಿದಂತೆ ಕಾಲೇಜು ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು ಇದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ