ಆಧ್ಯಾತ್ಮದ ಅರಿವು-ಸಾಧನೆಯಿಂದ ಬದುಕಿನಲ್ಲಿ ಉನ್ನತಿ ಸಾಧ್ಯ: ರಂಭಾಪುರಿ ಶ್ರೀ

KannadaprabhaNewsNetwork |  
Published : Dec 06, 2025, 02:15 AM IST
೦೪ಬಿಹೆಚ್‌ಆರ್ ೩: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ನಾಡಿನ ವಿವಿಧ ಪ್ರಾಂತದ ಭಕ್ತರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಗೆ ಗೌರವ ಸಮರ್ಪಿಸಿ ಆಶೀರ್ವಾದ ಪಡೆದರು. | Kannada Prabha

ಸಾರಾಂಶ

ಬಾಳೆಹೊನ್ನೂರುಮಣ್ಣಿನಿಂದಾದ ಮಡಿಕೆ ಒಂದು ದಿನ ನಾಶವಾಗುತ್ತದೆ. ಆದರೆ ಮಣ್ಣು ನಾಶವಾಗುವುದಿಲ್ಲ. ಪ್ರಪಂಚದ ತುಂಬೆಲ್ಲ ಪರಮಾತ್ಮನಿದ್ದಾನೆ. ಆದರೆ ಕಣ್ಣಿಗೆ ಕಾಣುವುದಿಲ್ಲ. ಆಧ್ಯಾತ್ಮದ ಅರಿವು ಮತ್ತು ಸಾಧನೆಯಿಂದ ಬದುಕಿನಲ್ಲಿ ಉನ್ನತಿ ಸಾಧಿಸಲು ಸಾಧ್ಯ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಣ್ಣಿನಿಂದಾದ ಮಡಿಕೆ ಒಂದು ದಿನ ನಾಶವಾಗುತ್ತದೆ. ಆದರೆ ಮಣ್ಣು ನಾಶವಾಗುವುದಿಲ್ಲ. ಪ್ರಪಂಚದ ತುಂಬೆಲ್ಲ ಪರಮಾತ್ಮನಿದ್ದಾನೆ. ಆದರೆ ಕಣ್ಣಿಗೆ ಕಾಣುವುದಿಲ್ಲ. ಆಧ್ಯಾತ್ಮದ ಅರಿವು ಮತ್ತು ಸಾಧನೆಯಿಂದ ಬದುಕಿನಲ್ಲಿ ಉನ್ನತಿ ಸಾಧಿಸಲು ಸಾಧ್ಯ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಲ್ಲಿ ಹುಟ್ಟಬೇಕು ಅನ್ನುವುದು ನಮ್ಮ ಕೈಯಲ್ಲಿಲ್ಲ. ಆದರೆ ಎಲ್ಲಿ ಮುಟ್ಟಬೇಕು ಅನ್ನುವುದು ನಮ್ಮ ಕೈಯಲ್ಲಿದೆ. ಗುರಿ ಮುಟ್ಟುವ ತನಕ ಮನುಷ್ಯನ ಹೆಜ್ಜೆಯಿರಬೇಕು. ಸೂರ್ಯ ಆರಂಭದಲ್ಲಿ ಕೆಂಪಾಗಿ ಉದಯಿಸಿ, ಕೆಂಪಾಗಿಯೇ ಅಸ್ತನಾಗುತ್ತಾನೆ. ಅದೇ ರೀತಿ ಮಹಾತ್ಮರು ಸಂಪತ್ತಿರಲಿ ವಿಪತ್ತಿರಲಿ, ಸುಖವಿರಲಿ ದುಃಖವಿರಲಿ ಯಾವಾಗಲೂ ಒಂದೇ ರೀತಿ ಬಾಳುತ್ತಾರೆ. ಸಹನೆ ಯಿಲ್ಲದ ಹೆಂಡತಿ, ಸಂಪಾದನೆಯಿಲ್ಲದ ಗಂಡ, ಮಾತು ಕೇಳದ ಮಕ್ಕಳು ಸುಖ ಸಂಸಾರದ ಶತ್ರುಗಳು. ಜ್ಞಾನದಿಂದ ಅಧಿಕಾರ ದೊರೆಯಬಹುದು. ಆದರೆ ಗೌರವ ಸಿಗಬೇಕಾದರೆ ವ್ಯಕ್ತಿತ್ವ ಸಂಪಾದಿಸಿಕೊಳ್ಳಬೇಕಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬದುಕಿನ ಉನ್ನತಿ ಮತ್ತು ಶ್ರೇಯಸ್ಸಿಗೆ ಬೋಧಿಸಿದ ಶಿವಾದ್ವೈತ ಜ್ಞಾನ ಸಂಪತ್ತು ಸಕಲರನ್ನು ಉದ್ಧರಿಸುತ್ತದೆ ಎಂದರು. ಕಲ್ಲುಬಾಳುಮಠದ ಶಿವಾನಂದ ಶಿವಾಚಾರ್ಯರು, ಹುಡುಗಿ ಹಿರೇಮಠ ಸೋಮೇಶ್ವರ ಶಿವಾಚಾರ್ಯರು, ಬಿಡದಿಮಠದ ಶ್ರೀಗಳು, ಕಲ್ಲಹಳ್ಳಿ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಪ್ರಮುಖರಾದ ಪ್ರಭುದೇವ ಎಂ.ಕಲ್ಮಠ, ಕೊಟ್ರೇಶಪ್ಪ, ಬಾಸಾಪುರದ ಬಿ. ಎಂ. ಬೋಜೇಗೌಡ, ಕಡವಂತಿ ಅಣ್ಣೇಗೌಡ, ಶಿರವಾಸೆ ವಿಶ್ವನಾಥ ಮುಂತಾದ ಗಣ್ಯರು ಉಪಸ್ಥಿತರಿದ್ದರು. ನಾಡಿನೆಲ್ಲೆಡೆಯಿಂದ ಆಗಮಿಸಿದ ಭಕ್ತರು ಜಗದ್ಗುರುಗಳ ದರ್ಶನ ಪಡೆದು ಫಲ ಮಂತ್ರಾಕ್ಷತೆ ಸ್ವೀಕರಿಸಿದರು. ಪೌರ್ಣಿಮೆ ಅಂಗವಾಗಿ ಶ್ರೀಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ೦೪ಬಿಹೆಚ್‌ಆರ್ ೩:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ನಾಡಿನ ವಿವಿಧ ಪ್ರಾಂತದ ಭಕ್ತರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಗೆ ಗೌರವ ಸಮರ್ಪಿಸಿ ಆಶೀರ್ವಾದ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಭಾಷೆ ಕಲಿಯಿರಿ, ಕನ್ನಡವನ್ನು ಪ್ರೀತಿಸಿ, ಬೆಳೆಸಿ
ರಾಟ್ ವೀಲರ್ ನಾಯಿ ದಾಳಿಗೆ ಮಹಿಳೆ ಬಲಿ