ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಶ್ರೀಉಗ್ರ ನರಸಿಂಹ ಸ್ವಾಮಿ ದೇವಾಲಯದ ಬಳಿಯಿಂದ ತಾಲೂಕು ಆಡಳಿತ ಹಾಗೂ ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ನಡೆದ ಬ್ರಹ್ಮಶ್ರೀನಾರಾಯಣ ಗುರುಗಳ 171ನೇ ಜಯಂತಿ ಅಂಗವಾಗಿ ನಡೆದ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಸಮಾಜದ ಅಸಮಾನತೆ ದೂರವಾಗಿ ಕಟ್ಟಕಡೆಯ ವ್ಯಕ್ತಿ ಕೂಡ ಶಿಕ್ಷಣವಂತರಾಗುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಆಂದೋಲನ ಮಾದರಿಯಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ನಾರಾಯಣ ಗುರುಗಳು ಎಂದು ಬಣ್ಣಿಸಿದರು.ಕರಾಳ ಜಾತಿ ವ್ಯವಸ್ಥೆ ಕಾಲದಲ್ಲಿ ನಾರಾಯಣ ಗುರುಗಳು ಎಲ್ಲಾ ಜಾತಿ, ವರ್ಗದವರು ಸಮಾನರು ಎಂಬ ಸಂದೇಶ ಸಾರು ವಮೂಲಕ ಆಗಿನ ಕಟ್ಟುಪಾಡುಗಳ ವಿರುದ್ಧ ಜನಜಾಗೃತಿ ಮೂಡಿಸಿ ಸ್ವಾಮಿ ಸ್ವಾಭಿಮಾನಿ ಸಮಾಜಕ್ಕೆ ನಾಂದಿ ಹಾಡಿದ ಗುರುವರ್ಯರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ತಮ್ಮಯ್ಯ, ಉಪಾಧ್ಯಕ್ಷರಾದ ಎ.ಎಚ್.ನಾರಾಯಣಸ್ವಾಮಿ, ಹೋಬಳಿ ರಂಗ, ಕಾರ್ಯದರ್ಶಿ ಸಂಘಟನಾ ಕಾರ್ಯದರ್ಶಿ ನಿತಿನ್ ಗೌಡ, ಕಾರ್ಯದರ್ಶಿಶ್ರೀನಿವಾಸ್, ಜಿಲ್ಲಾ ಪ್ರತಿನಿಧಿ ಸೌಮ್ಯ, ಮುಖಂಡರಾದ ಗೋವಿಂದರಾಜು, ದೇವರಾಜು, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹಾದೇವು, ಅಹಿಂದ ಸಂರಕ್ಷಣಾ ವೇದಿಕೆಯ ಶ್ರೀನಿವಾಸ ಶೆಟ್ಟಿ, ಶಶಿಕುಮಾರ್, ವಿಶ್ವಕರ್ಮ ಸಂಘಟನೆಯ ಪಿ.ಆನಂದಾಚಾರ್ ಮತ್ತಿತರರು ಭಾಗವಹಿಸಿದ್ದರು.
ಶ್ರೀರಂಗಪಟ್ಟಣ:
ಈ ವೇಳೆ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್, ಉಪಾಧಕ್ಷ ರವಿಕುಮಾರ್, ಸಮಾಜದ ಇತರೆ ಮುಖಂಡರುಗಳು , ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಧಿಕಾರಿ ವರ್ಗ ಹಾಜರಿದ್ದರು.