ದೇವನಹಳ್ಳಿ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಕೋಟೆಯ ತೇರಿನ ಬೀದಿಯಲ್ಲಿ ಭಕ್ತರು ತೇರು ಎಳೆದು ಭಕ್ತಿಭಾವ ಮೆರೆದರು.
ತಾಲೂಕಾದ್ಯಂತ ಆಗಮಿಸಿದ ಸಹಸ್ರಾರು ಭಕ್ತರು ಶ್ರೀವೇಣುಗೋಪಾಲಸ್ವಾಮಿ ರಥಕ್ಕೆ ಬಾಳೆಹಣ್ಣು ದವನ ಸಮರ್ಪಿಸಿ ಗೋವಿಂದ ಗೋವಿಂದ ನಾಮ ಸ್ಮರಿಸಿ, ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಕಮಲದ ಹಾರ, ಬಂದಿ, ನಂಜರಾಜೆ ಅರಸರ ಪದಕ, ಪರಂಗಿ ಸುಳಿ ಪದಕ, ಪದ್ಮ ಸುಳಿ ಪದಕ, ಮುತ್ತಿನ ಕಂಟಿ ಸರ, ಟೊಳ್ಳು ಗುಂಟಿನ ಸರ ಕಂಠಿ, ಚಂದ್ರದಾರ ನಕಾಶೆ, ರತ್ನ ಪಡಿ ಕಿರೀಟ, ಚಂದ್ರ ಸೂರ್ಯ ಮುತ್ತಿನ ಬಟ್ಟು ಸೇರಿದಂತೆ ಕೋಟ್ಯಂತರ ರು. ಮೌಲ್ಯದ ಆಭರಣಗಳನ್ನು ಪ್ರತಿವರ್ಷ ನಕ್ಷತ್ರದ ದಿನದಂದು ನಡೆಯುವ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಹೊರತಂದು ದೇವರಿಗೆ ಅಲಂಕಾರ ಮಾಡಿ ದೇವಾಲಯದಲ್ಲಿ ಪ್ರದಕ್ಷಿಣೆ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತಾಲೂಕು ಆಡಳಿತ ಪುನಃ ಖಜಾನೆಯಲ್ಲಿ ಭದ್ರಪಡಿಸಿದರು.ಜಾತ್ರೆ ಅಂಗವಾಗಿ ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯದ ಬಳಿಯ ದೊಡ್ಡಅಣ್ಣಯ್ಯಪ್ಪ ಛತ್ರದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
೩ ದೇವನಹಳ್ಳಿ ಚಿತ್ರಸುದ್ದಿ: ೧