ನಿಲ್ಲದ ಮಳೆ ಆರ್ಭಟ । ತಗ್ಗುಪ್ರದೇಶಗಳು ಜಲಾವೃತ ಜನಜೀವನ ಅಸ್ತವ್ಯಸ್ತ.
ತಾಲೂಕಿನಲ್ಲಿ ಪುಷ್ಯಮಳೆ ಆರ್ಭಟ ಜೋರಾಗಿದ್ದು ಭಾನುವಾರ ಮತ್ತೆ ಅಬ್ಬರಿಸಿತು. ಶನಿವಾರ ತುಂಗಾನದಿ ಪ್ರವಾಹದಿಂದ ಬಹುತೇಕ ಪ್ರದೇಶಗಳು ಜಲಾವೃತಬವಾಗಿ ರಸ್ತೆ ಸಂಪರ್ಕ ಕಡಿತ ಭಾನುವಾರವೂ ಮುಂದುವರಿಯಿತು.ಶ ನಿವಾರ ರಾತ್ರಿಯಿಡಿ ಮಳೆ ಅಬ್ಬರ, ತುಂಗಾ ನದಿಯ ಪ್ರವಾಹದಿಂದ ಜನಜೀವನ ತತ್ತರಿಸಿದೆ.
ಪಶ್ಚಿಮಘಟ್ಟಗಳ ತಪ್ಪಲು ತುಂಗಾನದಿ ಉಗಮಸ್ಥಳವಾದ ಎಸ್.ಕೆ.ಬಾರ್ಡರ್, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಮ್ಮಾರು, ಕಿಗ್ಗಾ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗೆ ಯಿಂದ ಪ್ರವಾಹ ಇಳಿಯದೇ ಭಾನುವಾರವೂ ಜಲದಿಗ್ಬಂಧನ ಮುಂದುವರಿದಿತ್ತು.ಗಾಂಧಿ ಮೈದಾನಕ್ಕೆ ಶನಿವಾರ ರಾತ್ರಿಯಿಂದ ತುಂಗಾನದಿ ಪ್ರವಾಹದ ನುಗ್ಗಿ ಭಾನುವಾರ ಸಂಪೂರ್ಣ ಜಲಾವೃತವಾಗಿತ್ತು. ಶ್ರೀಮಠದ ಬೋಜನಾ ಶಾಲೆ, ಶ್ರೀಮಠದಿಂದ ನರಸಿಂಹವನಕ್ಕೆ ಹೋಗುವ ದಾರಿ, ಸಂಧ್ಯಾವಂದನ ಮಂಟಪಕ್ಕೆ ನೀರು ತುಂಬಿ ಶ್ರೀ ಕಪ್ಪೆ ಶಂಕರ ದೇವಾಲಯ ಸಂಪೂರ್ಣ ಮುಳುಗಡೆಯಾಗಿತ್ತು.
2 ಶ್ರೀ ಚಿತ್ರ 2-ಶೃಂಗೇರಿ ಶ್ರೀ ಮಠದ ಸಮೀಪ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿಯ ಪ್ರವಾಹ.