ಎಸ್ಸೆಸ್ಸೆಲ್ಸಿಯಲ್ಲಿ ಪ್ರಿಯತೋಷ್‌ಗೆ ಶೇ. 98.8 ತಾಲೂಕಿಗೆ ಪ್ರಥಮ

KannadaprabhaNewsNetwork |  
Published : May 10, 2024, 01:38 AM IST
 ಕೊರಟಗೆರೆ ತಾಲೂಕಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನ ಚಾಣುಕ್ಯ ಪಬ್ಲಿಕ್ ಸ್ಕೂಲ್ನ ವಿದ್ಯಾಥರ್ಿ ಪ್ರಥಮ ಸ್ಥಾನ ಪಡೆದ ಕೆ.ಪಿ.ಪ್ರೀಯತೋಷ್, ದ್ವಿತೀಯ ಸ್ಥಾನ ಪಡೆದ ಭೂಮಿಕಾ, ತೃತೀಯ ಸ್ಥಾನ ಪಡೆದ ರವೀಂದ್ರ ಭಾರತಿ ಶಾಲೆಯ ಕಿರಣ್ರಾಜ್. | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶ ಬಿಡುಗಡೆಯಾಗಿದ್ದು ತಾಲೂಕಿನಲ್ಲಿ ಶೇ. 61.98 ರಷ್ಟು ಫಲಿತಾಂಶದೊಂದಿಗೆ ತಾಲೂಕು 3ನೇ ಸ್ಥಾನ ಪಡೆದಿದೆ. ತಾಲೂಕಿನಲ್ಲಿ ಒಟ್ಟು 2191 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಬಾಲಕರು 1097, ಬಾಲಕಿಯರು 1094 ಪೈಕಿ 568 ಬಾಲಕರು, 790 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆಯಾಗಿದ್ದು ತಾಲೂಕಿನಲ್ಲಿ ಶೇ. 61.98 ರಷ್ಟು ಫಲಿತಾಂಶದೊಂದಿಗೆ ತಾಲೂಕು 3ನೇ ಸ್ಥಾನ ಪಡೆದಿದೆ. ತಾಲೂಕಿನಲ್ಲಿ ಒಟ್ಟು 2191 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಬಾಲಕರು 1097, ಬಾಲಕಿಯರು 1094 ಪೈಕಿ 568 ಬಾಲಕರು, 790 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಈ ಬಾರಿ ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಕುಸಿತ ಕಂಡಿದ್ದರೂ ಎಂದಿನಂತೆ ವಿದ್ಯಾರ್ಥಿನಿಯರು ಮೇಲುಗೈ ಸಾದಿಸಿದ್ದಾರೆ. ಈ ಬಾರಿ ಪರೀಕ್ಷಾ ಕೇಂದ್ರಗಳಲಿ ಸಿಸಿಟಿವಿ ಅಳವಡಿಸಿದ್ದು, ಪರೀಕ್ಷೆಗಳನ್ನು ಕಟ್ಟು ನಿಟ್ಟಾಗಿ ನಡೆಸಲಾಗಿತ್ತು. ತಾಲೂಕಿನಲ್ಲಿ 19 ಸರ್ಕಾರಿ ಪ್ರೌಢಶಾಲೆ, 14 ಅನುದಾನಿತ ಪ್ರೌಢ ಶಾಲೆ, 7 ಅನುದಾನ ರಹಿತ ಹಾಗೂ 6 ವಸತಿ ಶಾಲೆಗಳು ಸೇರಿದಂತೆ ಒಟ್ಟು 46 ಪ್ರೌಢ ಶಾಲೆಗಳಿವೆ. ತಾಲೂಕಿನಲ್ಲಿ ಒಟ್ಟು 8 ಮಂದಿ ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕ ಪಡೆದಿದ್ದು, ಪಟ್ಟಣದ ಚಾಣಿಕ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ.ಪಿ.ಪ್ರಿಯತೋಷ್ 613 ಅಂಕಗಳನ್ನು ಪಡೆದು ಶೇ. 98.08 ರಷ್ಟು ಫಲಿತಾಂಶದೊಂದಿಗೆ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈ ಶಾಲೆಯ ವಿದ್ಯಾರ್ಥಿನಿ ಭೂಮಿಕಾ 609 ಶೇ. 97.4 ದ್ವಿತೀಯ ಸ್ಥಾನ, ರವೀಂದ್ರ ಭಾರತಿ ವಿದ್ಯಾಮಂದಿರದ ಕಿರಣ್ರಾಜ್ ಶೇ. 96.8, ಬಿಂದುಶ್ರೀ ಶೇ.96.6, ಶುಭಾಷ್ ಶೇ. 96.6, ಪಂಕಜ್‌ಕುಮಾರ್ ಶೇ.96.4, ಶ್ರೀರಕ್ಷಾ ಶೇ.96.4, ಹೂಲಿಕುಂಟೆ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಶರವಾಣಿ ಶೇ.96.4 ಅಂಕಗಳನ್ನು ಪಡೆದಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಕ್ಕೆ ನಿಧಿ ನೀಡಿದ್ದ ಲಕ್ಕುಂಡಿ ಪ್ರಜ್ವಲ್‌ಗೆ ಸರ್ಕಾರದಿಂದ ಸಿಕ್ತು ಬಂಪರ್ ಗಿಫ್ಟ್
ಕಾಂಗ್ರೆಸ್‌ನಿಂದ ಗೆದ್ದಿದ್ದ ಸುಬ್ಬಾರೆಡ್ಡಿ ಶಾಸಕತ್ವಕ್ಕೆ ‘ಸುಪ್ರೀಂ’ ರಕ್ಷಣೆ