ಸಾವಿರಾರು ಕೋಟಿ ರು. ಕ್ರಿಯಾಯೋಜನೆ ತಯಾರಿಸಿ ಸಿಎಂಗೆ ಸಲ್ಲಿಸಲು ಕ್ರಮ: ಕೆ.ಎಂ.ಉದಯ್

KannadaprabhaNewsNetwork |  
Published : Jul 17, 2026, 02:00 AM IST
8ಕೆಎಂಎನ್ ಡಿ32  | Kannada Prabha

ಸಾರಾಂಶ

ಆತಗೂರು ಹೋಬಳಿಯ ವಿವಿದ ಗ್ರಾಮಗಳಲ್ಲಿ ಕಂಡುಬರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಜತೆಗೆ ಏತ ನೀರಾವರಿಗಳ ಪುನಶ್ಚೇತನ ಹಾಗೂ ಶಿಂಷಾನದಿಗೆ ಅಡ್ಡಲಾಗಿ ಚೆಕ್‌ ಡ್ಯಾಂ ನಿರ್ಮಾಣ ಹಾಗೂ ರೈತರ ಬಹುದಿನಗಳ ಬೇಡಿಕೆಯಾದ ಸರ್ವೇ ಸಮಸ್ಯೆಗೆ ಇತೀಶ್ರೀ ಹಾಡಲು ಕ್ರಮ ವಹಿಸಲಾಗಿದೆ. ಹಲವು ಅರ್ಜಿಗಳು ವಿಲೇವಾರಿಯಾಗುವ ಜತೆಗೆ ಬಾಕಿ ಉಳಿದಿರುವ 200 ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಿದ್ದಾರೆ ಎಂದರು.

ಮದ್ದೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿ ಜೊತೆಗೆ ತಮ್ಮ ಅಧಿಕಾರದ ಅವಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ಗುರಿಯೊಂದಿಗೆ ಈಗಾಗಲೇ ವಿವಿಧ ಇಲಾಖೆಗಳಿಂದ ಸಾವಿರಾರು ಕೋಟಿ ರು.ಗಳ ಕ್ರಿಯಾಯೋಜನೆ ತಯಾರಿಸಿ ಮುಖ್ಯಮಂತಿಗಳಿಗೆ ಮನವಿ ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಬಸವಲಿಂಗನದೊಡ್ಡಿ, ಮಲ್ಲನಾಯ್ಕನಹಳ್ಳಿ, ಹರಕನಹಳ್ಳಿ, ಅವಸರದಹಳ್ಳಿ, ಕುರುಬರದೊಡ್ಡಿ, ಹೆಬ್ಬೆರಳು, ಬ್ಯಾಲದಕೆರೆ, ನವಿಲೆ ಹಾಗೂ ಅಂಕನಾಥಪುರ ಗ್ರಾಮಗಳ ಅಭಿವೃದ್ಧಿಗೆ ಬಿಡುಗಡೆಯಾಗಿರುವ ₹1.50 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ನೀರಾವರಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಸುಮಾರು ₹700 ಕೋಟಿಗಳ ಪಟ್ಟಿ ತಯಾರಿಸುವ ಜೊತೆಗೆ ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ತಲಾ ₹100 ಕೋಟಿಗಳ ಕ್ರಿಯಾಯೋಜನೆ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಮುಂದಾಗಿದ್ದೇನೆ. ಶೀಘ್ರ ಅನುದಾನ ಬಿಡುಗಡೆಯಾಗಿ ಕ್ಷೇತ್ರದಾದ್ಯಂತ ಅಭಿವೃದ್ಧಿ ಪರ್ವವಾಗಲಿದೆ ಎಂದರು.

ಆತಗೂರು ಹೋಬಳಿಯ ವಿವಿದ ಗ್ರಾಮಗಳಲ್ಲಿ ಕಂಡುಬರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಜತೆಗೆ ಏತ ನೀರಾವರಿಗಳ ಪುನಶ್ಚೇತನ ಹಾಗೂ ಶಿಂಷಾನದಿಗೆ ಅಡ್ಡಲಾಗಿ ಚೆಕ್‌ ಡ್ಯಾಂ ನಿರ್ಮಾಣ ಹಾಗೂ ರೈತರ ಬಹುದಿನಗಳ ಬೇಡಿಕೆಯಾದ ಸರ್ವೇ ಸಮಸ್ಯೆಗೆ ಇತೀಶ್ರೀ ಹಾಡಲು ಕ್ರಮ ವಹಿಸಲಾಗಿದೆ. ಹಲವು ಅರ್ಜಿಗಳು ವಿಲೇವಾರಿಯಾಗುವ ಜತೆಗೆ ಬಾಕಿ ಉಳಿದಿರುವ 200 ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಿದ್ದಾರೆ ಎಂದರು.

ಈ ವೇಳೆ ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ನಿರ್ದೇಶಕ ಎಂ.ಕೆ.ಹರೀಶ್‌ಬಾಬು, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದಮರಿ, ಗ್ರಾಪಂ ಮಾಜಿ ಅಧ್ಯಕ್ಷ ವಾಸು, ಮುಖಂಡರಾದ ಕೆ.ದಾಸೇಗೌಡ. ಶಂಕರಲಿಂಗಯ್ಯ, ಶಿವರಾಮು, ಪುಟ್ಟೇಗೌಡ, ನಾಗರಾಜು, ವಾಸು, ಕೃಷ್ಣ, ರಾಮಣ್ಣ, ಅಪ್ಪಾಜಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋನಂ ವಾಂಗ್ಚೂಕ್ ಹೋರಾಟಕ್ಕೆ ಗದುಗಿನಲ್ಲಿ ಬೆಂಬಲ
ಬೆಳೆವಿಮೆ ಯೋಜನೆ: ರೈತರಿಗೆ ಸಹಕಾರ ನೀಡದ ಬ್ಯಾಂಕ್ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ