ಕಾಳಸಂತೆಯಲ್ಲಿ ಗ್ಯಾಸ್‌ ಮಾರಾಟ ತಡೆಯಿರಿ

KannadaprabhaNewsNetwork |  
Published : Mar 14, 2026, 02:00 AM IST
ಎಲ್‌ಪಿಜಿ ತುಂಬಿಸಲು ಬಂದಿರುವ ಆಟೋಗಳು. | Kannada Prabha

ಸಾರಾಂಶ

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಆಟೋ ಚಾಲಕರು ನಿತ್ಯದ ದುಡಿಮೆಯಿಂದ ಉಪಜೀವನ ಸಾಗಿಸುವುದು ದುಸ್ತರವಾಗಿದೆ. ಈ ಮಧ್ಯೆ ಇರಾನ್-ಅಮೆರಿಕ ಯುದ್ಧದ ಪರಿಣಾಮ ಗ್ಯಾಸ್ ಬೆಲೆ ಏರಿಕೆ ಮಾಡಿದ್ದಲ್ಲದೇ, ಗ್ಯಾಸ್ ಸರಬರಾಜು ಗಣನೀಯವಾಗಿ ಕಡಿತಗೊಳಿಸಲಾಗಿದೆ.

ಹುಬ್ಬಳ್ಳಿ:

ಕೃತಕ ಅಭಾವ ಸೃಷ್ಟಿಸಿ ಗ್ಯಾಸ್(ಎಲ್‌ಪಿಜಿ) ಕಾಳ ಸಂತೆಯಲ್ಲಿ ಮಾರುತ್ತಿರುವುದನ್ನು ತಡೆಗಟ್ಟಲು ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ಚೆನ್ನಮ್ಮ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ರಿಕ್ಷಾ ಪೆಟ್ರೋಲ್ ಟ್ಯಾಂಕರ್ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಕಾಳ ಸಂತೆ ಮಾರಾಟ ತಡೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಆಟೋ ಚಾಲಕರು ನಿತ್ಯದ ದುಡಿಮೆಯಿಂದ ಉಪಜೀವನ ಸಾಗಿಸುವುದು ದುಸ್ತರವಾಗಿದೆ. ಈ ಮಧ್ಯೆ ಇರಾನ್-ಅಮೆರಿಕ ಯುದ್ಧದ ಪರಿಣಾಮ ಗ್ಯಾಸ್ ಬೆಲೆ ಏರಿಕೆ ಮಾಡಿದ್ದಲ್ಲದೇ, ಗ್ಯಾಸ್ ಸರಬರಾಜು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಇದರಿಂದ ಇಂಧನ ಕೊರತೆಯಾಗಿ ಆಟೋ ಓಡಿಸುವುದನ್ನು ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ. ಕುಟುಂಬ ನಿರ್ವಹಣೆ ಸವಾಲು ಎದುರಾಗಿದೆ. ಏತನ್ಮಧ್ಯೆ ಇಂಧನ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಸುವ ದಂಧೆ ನಡೆಸುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇಂಧನ ಅಭಾವ ಆಗದಂತೆ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಳಿಕ ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ, ಜೀವನ ಉತ್ಕುರಿ, ದಾವಲಸಾಬ ಕುರಹಟ್ಟಿ, ಮುರುಳಿ ಇಂಗಳಹಳ್ಳಿ, ರಾಜೇಶ ಬಿಜವಾಡ, ರಫೀಕ್ ಕುಂದಗೋಳ, ದಾವೂದ ಅಲಿಶೇಖ, ಮಹಾವೀರ ಬಿಲಾನ್, ಮಲ್ಲಿಕಾರ್ಜುನ ನಂದಿಹಾಳ, ಗುರು ಬೆಟಗೇರಿ, ಬಾಬರ ಜಮಖಾನೆ, ಅಮರ ಗದಗ, ಸಾಧಿಕ ತಡಕೋಡ, ಅಮರೀಶ ಅಣಿ, ಮುತ್ತು ಬಾರಕೇರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ