ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

KannadaprabhaNewsNetwork |  
Published : Nov 22, 2025, 02:45 AM IST
ಪೊಟೋ ಪೈಲ್ : 21ಬಿಕೆಲ್7 | Kannada Prabha

ಸಾರಾಂಶ

ಹೊನ್ನಾವರದಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಇಲ್ಲಿಯ ನಾಗಶ್ರೀ ಮಾರ್ಷಲ್ ಆರ್ಟ್ಸ್‌ನ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿ ಕಟಾ ಮತ್ತು ಕುಮಿತೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಹೊನ್ನಾವರದಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಇಲ್ಲಿಯ ನಾಗಶ್ರೀ ಮಾರ್ಷಲ್ ಆರ್ಟ್ಸ್‌ನ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿ ಕಟಾ ಮತ್ತು ಕುಮಿತೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕಿಶನ್ ನಾಯ್ಕ ಕಟಾ ವಿಭಾಗದಲ್ಲಿ ದ್ವಿತೀಯ, ಕುಮಿತೆ ವಿಭಾಗದಲ್ಲಿ ತೃತೀಯ, ಅಥರ್ವ ಆರ್. ಕಟಾ ವಿಭಾಗದಲ್ಲಿ ಪ್ರಥಮ, ಗುರುದೀಪ ನಾಯ್ಕ ಕಟಾ ವಿಭಾಗದಲ್ಲಿ ತೃತೀಯ, ಸಂಕೇತ ನಾಯ್ಕ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ಮದನ್ ನಾಯ್ಕ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ, ಭಾನುಶ್ರೀ ನಾಯ್ಕ ಕಟಾ ವಿಭಾಗದಲ್ಲಿ ತೃತೀಯ, ಆಯುಷ್ಮಾನ್ ಶೆಟ್ಟಿ ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ, ಅಥರ್ವ ನಾಯ್ಕ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ, ಜನನಿ ನಾಯ್ಕ ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮಿತೆ ವಿಭಾಗದಲ್ಲಿ ಪ್ರಥಮ, ಮೊಹಮ್ಮದ್ ಅರ್ಹಾನ್ ಕಟಾ ಮತ್ತು ಕುಮಿತೆ ದ್ವಿತೀಯ, ಅಥರ್ವ ಎಂ. ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಕುಮಿತೆ ವಿಭಾಗದಲ್ಲಿ ದ್ವಿತೀಯ, ಮೊಹಮ್ಮದ್ ರಯ್ಯಾನ್ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ, ಸಚಿನ್ ನಾಯ್ಕ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ, ರತನ್ ಪಾವಸ್ಕರ್ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮಿತೆ ತೃತೀಯ ಸ್ಥಾನ, ಸಾನ್ವಿ ನಾಯ್ಕ ಕಟಾ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ, ಶ್ರೇಯಸ್ ಮೊಗೇರ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ, ಅಖಿಲಾ ನಾಯಕ್ ಕಟಾ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಆಧ್ಯಾ ಆರ್. ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ನಾಗಶ್ರೀ ನಾಯ್ಕ ಮತ್ತು ಸ್ಪೋರ್ಟ್ಸ್ ಕರಾಟೆ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಈಶ್ವರ ನಾಯ್ಕ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಈ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

PREV

Recommended Stories

ಆಯುರ್ವೇದ ಕೇವಲ ವೈದ್ಯಕೀಯ ವಿಜ್ಞಾನವಲ್ಲ
ಅಂಕ ಪಡೆಯುವುದಕ್ಕಾಗಿ ಓದಬೇಡಿ: ಬಜರಂಗಬಲಿ