ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ ಬೆಳೆಸುವ ಶಿಕ್ಷಣ ಅಗತ್ಯ: ತಿಪ್ಪೇರುದ್ರಪ್ಪ

KannadaprabhaNewsNetwork | Published : Sep 17, 2024 12:48 AM

ಸಾರಾಂಶ

ಚಿಕ್ಕಮಗಳೂರು, ಪ್ರಸ್ತುತ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತುಂಬುವ ಕೆಲಸ ಮಾಡುತ್ತಿದೆ. ಅವರಿಗೆ ಉಪಯುಕ್ತವಾದ ಜೀವನದ ಮೌಲ್ಯ, ಸಂಸ್ಕಾರ ಬೆಳೆಸಿ ಕೊಳ್ಳುವಂತ ಶಿಕ್ಷಣ ನೀಡಬೇಕು ಎಂದು ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಹೇಳಿದರು.

ಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರು- ಶಿಷ್ಯರ ಸಮಾಗಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಸ್ತುತ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತುಂಬುವ ಕೆಲಸ ಮಾಡುತ್ತಿದೆ. ಅವರಿಗೆ ಉಪಯುಕ್ತವಾದ ಜೀವನದ ಮೌಲ್ಯ, ಸಂಸ್ಕಾರ ಬೆಳೆಸಿ ಕೊಳ್ಳುವಂತ ಶಿಕ್ಷಣ ನೀಡಬೇಕು ಎಂದು ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಹೇಳಿದರು.

ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರು- ಶಿಷ್ಯರ ಸಮಾಗಮ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಚದುರಿ ಹೋದಂತ ಹಕ್ಕಿಗಳು ಮರಳಿ ಗೂಡು ಸೇರಿದಂತೆ ಮತ್ತೊಮ್ಮೆ ಹಳೇ ವಿದ್ಯಾರ್ಥಿಗಳು ಜೂನಿಯರ್‌ ಕಾಲೇಜು ಆವರಣದಲ್ಲಿ ಸೇರಿ ಗುರು-ಶಿಷ್ಯರ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವಂತಹ 25 ನೇ ವರ್ಷದ ಸಂಭ್ರಮ ಇದಾಗಿದೆ ಎಂದು ಶ್ಲಾಘಿಸಿದರು.

ಪ್ರಕೃತಿ ಮತ್ತು ಮನುಷ್ಯರ ಸಂಬಂಧ ಹಾಗೂ ಗುರು-ಶಿಷ್ಯರ ಸಂಬಂಧ ಕ್ಷೀಣಿಸುತ್ತಿರುವ ಈ ಘಳಿಗೆಯಲ್ಲಿ ಹಳೆ ಗುರುಗಳನ್ನು ನೆನಪು ಮಾಡಿ ಕೊಳ್ಳುವ ಉದ್ದೇಶದಿಂದ ಎಲ್ಲಾ ಶಿಷ್ಯರು ಸೇರಿ ಒಗ್ಗಟ್ಟಿನಿಂದ ಮಧುರ ಮೆಲಕುಗಳ, ತಮ್ಮ ಪ್ರೀತಿ, ಭಕ್ತಿ- ಭಾವದಿಂದ ನಮ್ಮನ್ನು ಗೌರವಿಸಿದ್ದಾರೆ ಎಂದರು.ಶಿಷ್ಯರ ಉತ್ತರೋತ್ತರ ಭವಿಷ್ಯ ಚೆನ್ನಾಗಿರಲಿ, ಮುಂದೆ ಒಳ್ಳೆಯ ಸ್ಥಾನಮಾನ ಅಲಂಕರಿಸುವ ಮೂಲಕ ಮನೆಗೆ, ಜಿಲ್ಲೆಗೆ, ಗುರುಗಳಿಗೆ ಕೀರ್ತಿ ತರುವಂತರಾಗಿ ಎಂದು ಶುಭ ಹಾರೈಸಿದರು.ಹಳೇ ವಿದ್ಯಾರ್ಥಿ ಪವನ್ ಮಾತನಾಡಿ, 1998- 2000 ಸಾಲಿನ ಹಳೇ ವಿದ್ಯಾರ್ಥಿಗಳು ಒಗ್ಗೂಡಿ 25ನೇ ವರ್ಷದ ಸವಿ ನೆನಪಿಗಾಗಿ ಗುರು-ಶಿಷ್ಯರ ಸಮಾಗಮ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.ಅಂದಿನ ಉಪನ್ಯಾಸಕರಾಗಿದ್ದ ಇರ್ಷಾದ್ ಭಾನು, ಬಾಣೂರು ಚನ್ನಪ್ಪ, ಬಿ.ತಿಪ್ಪೇರುದ್ರಪ್ಪ, ಚಂದ್ರಶೇಖರ್ ಇವರನ್ನು ಆತ್ಮೀಯವಾಗಿ ಆಹ್ವಾನಿಸಿ ಕಾಲೇಜಿನಲ್ಲಿ ಸನ್ಮಾನಿಸಲಾಯಿತು ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ವಿರೂಪಾಕ್ಷ, ಉಪನ್ಯಾಸಕರುಗಳಾದ ಮಧು, ತ್ಯಾಗರಾಜ್ ಉಪಸ್ಥಿತರಿದ್ದರು.

15 ಕೆಸಿಕೆಎಂ 3ಚಿಕ್ಕಮಗಳೂರಿನ ಜೂನಿಯರ್‌ ಕಾಲೇಜು ಆವರಣದಲ್ಲಿ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರು-ಶಿಷ್ಯರ ಸಮಾಗಮವನ್ನು ತಿಪ್ಪೇರುದ್ರಪ್ಪ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು.

Share this article