ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಪಟ್ಟಣದ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ವಿವಿಧ ಇಲಾಖೆಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಇತ್ತೀಚೆಗೆ ಜಿಲ್ಲಾಧಿಕಾರಿಯವರು ನಡೆಸಿದ ಸಭೆಯಲ್ಲಿ ಪಿಡಿಒಗಳು ತಪ್ಪು ಮಾಹಿತಿ ನೀಡಿದ್ದಾರೆ. ಹಾಹಾಕಾರ ಎದ್ದ ನಂತರ ಕ್ರಮ ವಹಿಸುವ ಬದಲು ಮುಂಚಿತವಾಗಿ ಜಾಗೃತರಾಗಬೇಕು ಎಂದರು.ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕಿರಣ್ ನಾಯ್ಕ ಮಾಹಿತಿ ನೀಡಿ, ತಾಲೂಕಿನ 104 ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗುವ ಲಕ್ಷಣಗಳು ಇದ್ದು, ಟಾಸ್ಕ್‌ಫೋರ್ಸ್ ಸಮಿತಿ ಮೂಲಕ ಜಿಲ್ಲಾಧಿಕಾರಿಯವರಿಗೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಕಳಿಸಿದ್ದೇವೆ ಎಂದು ಉತ್ತರಿಸಿದರು.
ಶಾಸಕರು, ಡಿಸಿಯವರಿಗೆ ನೀರಿನ ಸಮಸ್ಯೆ ಕುರಿತು ತಪ್ಪು ಮಾಹಿತಿ ನೀಡಿದ್ದೀರಿ ಎಂದು ಸುದೀರ್ಘ ಸಮಯ ಅಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು. ಇನ್ನೊಂದು ಬಾರಿ ಎಲ್ಲ ಪಿಡಿಒಗಳ ಸಭೆ ಕರೆದು ನೀರಿನ ಸಮಸ್ಯೆ ನಿವಾರಣೆ ಕುರಿತು ಚರ್ಚಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್ ಅವರಿಗೆ ಸೂಚಿಸಿದರು.
ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸಮ್ಮುಖದಲ್ಲಿ ಸಭೆ ನಡೆಸಿ ಬೆಳೆ ವಿಮೆ ತಾರತಮ್ಯದ ಕುರಿತು ಸರಿಪಡಿಸುತ್ತೇವೆ ಎಂದು ಕೃಷಿ ಎಡಿ ಉಮೇಶ ಉತ್ತರಿಸಿದರು.
ಪಟ್ಟಣದ ವಾಲ್ಮೀಕಿ ಭವನದ ಕಾಮಗಾರಿಯನ್ನು ಜನವರಿ ವೇಳೆಗೆ ಸಂಪೂರ್ಣಗೊಳಿಸಿ ಉದ್ಘಾಟನೆಯಾಗಬೇಕು ಎಂದು ಪಿಡಬ್ಲ್ಯುಡಿ ಎಇಇ ಪ್ರಕಾಶ ಪಾಟೀಲ್ ಅವರಿಗೆ ತಿಳಿಸಿದರು.
ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ಬಿಇಒ ಯು. ಬಸವರಾಜಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಬೆಸ್ಕಾಂ ಎಇಇಗಳಾದ ವಿರುಪಾಕ್ಷಪ್ಪ, ಆರಾದ್ಯ, ಆರ್‌ಎಫ್‌ಒಗಳಾದ ಮಲ್ಲಪ್ಪ, ದೇವರಾಜ, ಅಕ್ಷರ ದಾಸೋಹದ ಎಡಿ ಜಯರಾಜ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಎಇಇ ನಾಗಪ್ಪ, ಡಾ. ಶಂಕರನಾಯ್ಕ, ಪಿಎಸ್ಐ ಎಸ್.ಸಿ. ಹಿರೇಮಠ, ನರೇಗಾ ಎಡಿ ಸೋಮಶೇಖರ ಇತರರು ಇದ್ದರು.ಚಿತ್ರ