ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ತಾಲೂಕಿನ ಚಿಕ್ಕಗೊಂಡನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯ ಮತ್ತು ಸಹ ಪಠ್ಯೇತರ ಚಟುವಟಿಕೆ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಮಕ್ಕಳು ತಮ್ಮ ಅಭಿರುಚಿಗೆ ತಕ್ಕಂತೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ವಿಜೇತರಾಗುವಂತೆ ಮನವಿ ಮಾಡಿದರು.
ಬಿಆರ್‌ಸಿ ಕೇಂದ್ರದ ತುರುವನೂರು ಹೋಬಳಿ ವಿಭಾಗದ ಬಿಆರ್‌ಪಿ ಎಸ್.ಬಿ.ಶ್ವೇತ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಮಕ್ಕಳಿಗೆ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಬೇಕಾದರೆ ತೀರ್ಪುಗಾರರು ಯಾವುದೆ ತಾರತಮ್ಯವಿಲ್ಲದೆ ಪಾರದರ್ಶಕವಾಗಿ ತೀರ್ಪು ನೀಡಬೇಕೆಂದು ಮನವಿ ಮಾಡಿದರು.ಸಿಆರ್‌ಪಿ ಸರಸ್ವತಿ, ಎಸ್‌ಡಿಎಂಸಿ ಅಧ್ಯಕ್ಷ ಮಧು, ಶಾಲೆಯ ಹಳೆಯ ವಿದ್ಯಾರ್ಥಿ ಹರೀಶ್, ಮುಖ್ಯ ಶಿಕ್ಷಕರಾದ ದಿನೇಶ್‌ರೆಡ್ಡಿ, ಶಿಕ್ಷಕರುಗಳಾದ ಸುದರ್ಶನ್ ರುದ್ರಪ್ಪ, ಕೆ.ರೇವಣ್ಣ, ಅಣ್ಣಪ್ಪಸ್ವಾಮಿ, ಬಸವರಾಜ್, ಶಿವರಾಜ್, ಅರುಣ್‌ಕುಮಾರ್, ಕುಸುಮ, ವಿಜಯಲಕ್ಷ್ಮೀ, ಸುವರ್ಣಮ್ಮ, ರೀಟಾಮಣಿ, ವೀಣ, ಸಿದ್ದಮ್ಮ, ತ್ರಿವೇಣಿ, ರತ್ನಮ್ಮ ಹಾಗೂ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಸಹ ಶಿಕ್ಷಕರು, ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು.