ತೆರಿಗೆ ಪರಿಷ್ಕರಣೆಯಿಂದ ಜನರಿಗೆ ಹೊರೆ

KannadaprabhaNewsNetwork |  
Published : Apr 23, 2026, 01:30 AM IST
00 | Kannada Prabha

ಸಾರಾಂಶ

ತುಮಕೂರು ನಗರಪಾಲಿಕೆಯು 2026-27ನೇ ಸಾಲಿನ ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕಾನೂನುಬಾಹಿರವಾಗಿ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೆಚ್ಚಿಸಿರುವ ತೆರಿಗೆಯನ್ನು ರದ್ದು ಮಾಡಬೇಕು, ಇಲ್ಲವಾದಲ್ಲಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ನಗರಪಾಲಿಕೆಯು 2026-27ನೇ ಸಾಲಿನ ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕಾನೂನುಬಾಹಿರವಾಗಿ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೆಚ್ಚಿಸಿರುವ ತೆರಿಗೆಯನ್ನು ರದ್ದು ಮಾಡಬೇಕು, ಇಲ್ಲವಾದಲ್ಲಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ಹೇಳಿದರು.ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ತೆರೆಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕ್ರಯದ ಒಟ್ಟು ಮೊಬಲಗು ಮೊತ್ತದ ಶೇಕಡ 0.2ರಷ್ಟು ಪಾವತಿಸಿಕೊಳ್ಳುವುದು ಅಂತ ಪರಿಷ್ಕರಿಸಲಾಗಿದ್ದು. ಇದರಿಂದ ಸುಮಾರು ಶೇಕಡ ೫೦ರಷ್ಟು ತೆರಿಗೆ ಹೊರೆ ಜನರ ಮೇಲೆ ಬೀಳಲಿದೆ. ಈ ಮೂಲಕ ನಗರಪಾಲಿಗೆ ಹಗಲು ದರೋಡೆಗಿಳಿದಿದೆ ಎಂದು ಟೀಕಿಸಿದರು.ಮಹಾನಗರ ಪಾಲಿಕೆಯ ಆಯುಕ್ತರ ಕಛೇರಿ ಆದೇಶ ಸಂಖ್ಯೆ: ಆಸ್ತಿ ತೆರಿಗೆ ಪರಿಷ್ಕರಣೆಗೆ 50/4-195/2025-26, 2:23-03-2026003 ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದು, ಸದರಿ ಆದೇಶದಲ್ಲಿ 2025-26ನೇ ಸಾಲಿಗೆ ಪಾವತಿಸಿಕೊಳ್ಳುತ್ತಿರುವ ಆಸ್ತಿ ತೆರಿಗೆಯನ್ನು, ನೊಂದಣಿ ಮತ್ತು ಮುದ್ರಾಂಕ ಶುಲ್ಕದ ಶೇ 2ರಷ್ಟು ಇದ್ದು, 2026-27ನೇ ಸಾಲಿನ ಶುಲ್ಕವನ್ನು ಕ್ರಯದ ಒಟ್ಟು ಮೊಬಲಗು ಮೊತ್ತದ ಶೇ 0.2ರಷ್ಟು ಪಾವತಿಸಿಕೊಳ್ಳುವುದು ಅಂತ ಪರಿಷ್ಕರಿಸಲಾಗಿದ್ದು, ಉಲ್ಲೇಖ (1) ಮತ್ತು (2)ರ ಪ್ರಕಾರ ಅಂತ ನಮೂದಿಸಿರುತ್ತಾರೆ. ಈ ಪರಿಷ್ಕರಣೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇಕಡ ೫೦ರಷ್ಟು ಜಾಸ್ತಿ ಆಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಆಟೋಟದ ಜೊತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಕೆ.ಎಸ್.ಆನಂದ್‌
ಹಳೆಯ ನೆನಪು ಮರು ಕಳಿಸಿದ ಸ್ನೇಹ ಸಮ್ಮಿಲನ: ಕೆ.ಎಸ್.ಮನೋಹರ್