)
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರದ ಈ ಸರ್ವಾಧಿಕಾರ ನೀತಿ ಪ್ರಜಾಪ್ರಭುತ್ವದಲ್ಲಿ ಬಹಳ ದಿನ ನಡೆಯಲ್ಲ. ತೇಜಸ್ವಿ ಸೂರ್ಯ 2ನೇ ಬಾರಿ ಸಂಸದರಾಗಿದ್ದು ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದಾರೆ. ಅವರನ್ನು ಬಂಧಿಸುವ ಮೂಲಕ ಜನ ವಿರೋಧ ನೀತಿ ಅನುಸರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲ ಸಮುದಾಯದ ಸಾಲದ ಬಡ್ಡಿ ಮನ್ನಾ ಮಾಡಿಇನ್ನೂ ಅಲ್ಪಸಂಖ್ಯಾತ ನಿಗಮ ಮಂಡಳಿ ಸಾಲದ ಬಡ್ಡಿ ಮನ್ನಾ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ ಮಾಡಬೇಡಿ. ಒಂದು ಸಮುದಾಯ ಓಲೈಕೆಯಿಂದ ಬೇರೆ ಸಮುದಾಯಕ್ಕೆ ಅನ್ಯಾಯ ವಾಗುತ್ತದೆ. ಒಂದು ಸಮುದಾಯ ಮಾತ್ರ ಮತ ನೀಡಿದೆಯಾ?, ಹಾಗಿದ್ದರೆ ಅದು ಸಂವಿಧಾನ ವಿರೋಧಿ. ನ್ಯಾಯ ಪರಿಪಾಲನೆ ಮಾಡುವವರ ಲಕ್ಷಣ ಇದಲ್ಲ. ತಕ್ಷಣ ಎಲ್ಲಾ ನಿಗಮದಲ್ಲಿ ಸಾಲ ಪಡೆದ ಬಡವರ ಬಡ್ಡಿ ಮನ್ನಾ ಮಾಡಿ ಎಂದು ಒತ್ತಾಯಿಸಿದರು.
---ಬಾಕ್ಸ್-----ಕುರ್ಚಿ ಕಿತ್ತಾಟದಲ್ಲಿ, ಜನರಿಗೆ ಸಂಕಷ್ಟ:
ರಾಜ್ಯ ಸರ್ಕಾರದ ಕುರ್ಚಿ ಕಿತ್ತಾಟದಲ್ಲಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಬೇಡಿ ಎಂದು ಸಿ.ಟಿ.ರವಿ ಹೇಳಿದ್ದಾರೆ.ರಾಜ್ಯದ ಜನತೆ 136 ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಆಡಳಿತ ನಡೆಸುವುದಕ್ಕೆ ಅವಕಾಶ ಕೊಟ್ಟಿದ್ದಾರೆ. ಆದರೆ, ಸರ್ಕಾರ ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಜನವಿರೋಧ ನೀತಿ ಬಿಟ್ಟು ಬೇರೇನು ಮಾಡುತ್ತಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಜನರಿಗೆ ಈಗಲೇ ಸಾಕಾಗಿದೆ. ಎಷ್ಟುದಿನ ಈ ಸರ್ಕಾರ ಇರುತ್ತೋ ಏನು ಎಂದು ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಇರುವಷ್ಟು ದಿನ ಏನಾದರೂ ಮಾಡಿಕೊಳ್ಳೋಣ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.