ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ ಗ್ರಾಮದಲ್ಲಿನ ಶ್ರೀಗಂಗಸಂದ್ರಮ್ಮ ದೇವಿ ದೇವಾಸ್ಥಾನದ ಜೀರ್ಣೋದ್ಧಾರ, ವಿಮಾನಗೋಪುರ, ರಾಜಗೋಪುರ ಹಾಗೂ ದೇವಸ್ಥಾನದ ಮುಖ್ಯದ್ವಾರದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ಈ ಹಿಂದೆ ಪ್ರತಿ ಗ್ರಾಮಗಳಲ್ಲೂ ಯಾವುದೇ ಅನಾಹುತಗಳು, ಕೇಡು ಬರಬಾರದು, ಗ್ರಾಮದ ಜನ ಸುಖ, ಶಾಂತಿಯಿಂದ ಇರಲೆಂದು ದೇವಾಲಯಗಳನ್ನು ನಿರ್ಮಾಣ ಮಾಡುತ್ತಿದ್ದರು. ಇಂದಿನ ಯುವ ಸಮುದಾಯ ಹಿಂದೂ ಸಂಪ್ರದಾಯಗಳನ್ನು ಉಳಿಸುವಲ್ಲಿ ಮುಂದಾಗುವ ಅನಿವಾರ್ಯತೆ ಹೆಚ್ಚಿದೆ ಎಂದರು.ಶಿವಗಂಗೆಯ ಮೆಲಣಗವಿ ಮಠದ ಡಾ. ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭೂಮಿಯ ಮೇಲೆ ಹೆಚ್ಚು ಪಾಲು ಸಮುದ್ರವೇ ಇದ್ದರೂ ಪ್ರಕೃತಿಗೆ ದಾಹ ತಣಿಸುವುದು ಕೆರೆ- ಕಟ್ಟೆ, ನದಿಗಳು. ಅದರಂತೆ ನಾವು ಕೂಡಿಟ್ಟ ಹಣವನ್ನು ಧಾರ್ಮಿಕ ಕಾರ್ಯಗಳಿಗೆ, ಬಡಜನರಿಗೆ, ಶಿಕ್ಷಣಕ್ಕೆ, ದಾಸೋಹಕ್ಕೆ ದಾನ ಮಾಡಿದರೆ, ದೇವರ ಸೇವೆ ಮಾಡಿದಂತೆ, ಅದರಲ್ಲಿಯೂ ಹಣ ಇದ್ದವರು ಎಲ್ಲರೂ ದಾನಿಗಳಾಗುವುದಿಲ್ಲ, ಭಕ್ತಿ ಮತ್ತು ಸೇವಾ ಮನೋಭಾವ ಇದ್ದರೆ ಮಾತ್ರ ಮಾನವ ಪರಿಪೂರ್ಣನಾಗುತ್ತಾನೆ ಎಂದರು.
ಶ್ರೀ ಆದಿಚುಂಚನಗಿರಿ ಮಠ ವಿಜಯನಗರ ಶಾಖೆಯ ಶ್ರೀಸೌಮ್ಯನಾಥ ಸ್ವಾಮೀಜಿ, ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ದಾನಿಗಳಾದ ಪುಷ್ಪಲತ, ದೊಡ್ಮನೆ ಸಿ.ವೆಂಕಟೇಶ್, ವಕೀಲ ಹನುಮಂತೇಗೌಡ್ರು, ಶ್ರೀ ಗಂಗಸಂದ್ರಮ್ಮ ದೇವಿ ಮುಖ್ಯಸ್ಥರಾದ ಎಲ್.ನಟರಾಜು, ಅರುಣ್ ಕುಮಾರ್, ರಂಗಸ್ವಾಮಿ, ನರಸಿಂಹರಾಜು, ಹನುಮಂತಪ್ಪ ಕೆಂಪೆಗೌಡ್ರು, ರಾಮಣ್ಣ, ರವಿಕುಮಾರ್, ಹನುಮಂತರಾಜು, ಜಯರಾಮ್, ಶಿವರಾಜು, ಮೋಹನ್ ಕುಮಾರ್, ನಾರಾಯಣ್ ಗೌಡ, ಕೋಡಿಗೇಹಳ್ಳಿ ಗ್ರಾಪಂ ಅಧ್ಯಕ್ಷ ಅಂಜನಮೂರ್ತಿ ಉಪಸ್ಥಿತರಿದ್ದರು.