ಚಿಕ್ಕಮಲ್ಲನಹೊಳೆ ಮಣ್ಣಿನ ರಸ್ತೆಗೆ ತಾತ್ಕಾಲಿಕ ಮುಕ್ತಿ!

KannadaprabhaNewsNetwork |  
Published : Jul 25, 2026, 01:45 AM IST
 24 ಜೆ.ಜಿ.ಎಲ್.1)  ಪತ್ರಿಕಾ ವರದಿ ಫಲಶೃತಿ : ಜಾಗೃತಗೊಂಡ ಅಧಿಕಾರಿಗಳು, ಚಿಕ್ಕಮಲ್ಲನಹೊಳೆ ರಸ್ತೆಗೆ ತಾತ್ಕಾಲಿಕ ಮುಕ್ತಿಗೊಂಡಿರುವ ದೃಷ್ಯ. | Kannada Prabha

ಸಾರಾಂಶ

‘ಮನವಿಗೆ ಸ್ಪಂದಿಸದ ಜನಪ್ರತಿನಿಧಿಗಳು-ಅಧಿಕಾರಿಗಳು: ಚಂದಾ ಸಂಗ್ರಹಿಸಿ ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ’ ಎಂಬ ತಲೆಬರಹದಡಿ ಪ್ರಕಟವಾಗಿದ್ದ ವಿಶೇಷ ವರದಿಗೆ ಕೊನೆಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ತೆರೆದಿದ್ದಾರೆ.

- ಕನ್ನಡಪ್ರಭ ವರದಿಗೆ ಜಗಳೂರು ಶಾಸಕ ದೇವೇಂದ್ರಪ್ಪ ಸ್ಪಂದನೆ ।

- ರಸ್ತೆ ಗುಂಡಿಗಳ ಸರಿಪಡಿಸಲು ಅಧಿಕಾರಿಗಳಿಗೆ ಖಡಕ್‌ ಸೂಚನೆ

- - -

(ಕನ್ನಡಪ್ರಭ ಫಲಶೃತಿ)

- - -

​ಕನ್ನಡಪ್ರಭ ವಾರ್ತೆ ಜಗಳೂರು

‘ಮನವಿಗೆ ಸ್ಪಂದಿಸದ ಜನಪ್ರತಿನಿಧಿಗಳು-ಅಧಿಕಾರಿಗಳು: ಚಂದಾ ಸಂಗ್ರಹಿಸಿ ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ’ ಎಂಬ ತಲೆಬರಹದಡಿ ಪ್ರಕಟವಾಗಿದ್ದ ವಿಶೇಷ ವರದಿಗೆ ಕೊನೆಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ತೆರೆದಿದ್ದಾರೆ.

ಕನ್ನಡಪ್ರಭ ಪ್ರಕಟಿಸಿದ ವರದಿಗೆ ಸ್ಪಂದಿಸಿದ ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು, ಅದರಂತೆ ಸ್ಥಳಕ್ಕೆ ಆಗಮಿಸಿದ ಜಿಪಂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ರಸ್ತೆ ಪರಿಶೀಲನೆ ನಡೆಸಿ, ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

೨.೧ ಕಿಮೀ ಹದಗೆಟ್ಟ ರಸ್ತೆ:

ಜಗಳೂರು ​ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಿಂದ ಖಾನಹೊಸಹಳ್ಳಿ ಸಂಪರ್ಕಿಸುವ ೨.೧ ಕಿ.ಮೀ. ರಸ್ತೆಯು ಸಂಪೂರ್ಣ ಮಣ್ಣಿನದಾಗಿದ್ದು, ತಗ್ಗು- ಗುಂಡಿಗಳಿಂದ ಕೂಡಿದೆ. ವಿಜಯನಗರ ಜಿಲ್ಲೆಯ ಹತ್ತಾರು ಹಳ್ಳಿಗಳನ್ನು ಬೆಸೆಯುವ ಪ್ರಮುಖ ರಸ್ತೆ ಇದಾಗಿದ್ದರೂ, ಸಂಚಾರ ಮಾತ್ರ ದುಸ್ತರವಾಗಿತ್ತು. ಈಗ ರಸ್ತೆಯ ತಗ್ಗು-ಗುಂಡಿಗಳಿಗೆ ಜಲ್ಲಿ ಹಾಗೂ ಮಣ್ಣು ತುಂಬಲಾಗಿದೆ. ರೋಲರ್ ಚಲಾಯಿಸಿ ರಸ್ತೆಯನ್ನು ಸಮತಟ್ಟು ಮಾಡಲಾಗಿದ್ದು, ಸದ್ಯ ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

​ಹಂತ ಹಂತವಾಗಿ ಶಾಶ್ವತ ಅಭಿವೃದ್ಧಿ:

"ಸದ್ಯಕ್ಕೆ ಗ್ರಾಮಸ್ಥರ ಸಂಚಾರಕ್ಕೆ ತೊಂದರೆ ಆಗದಂತೆ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಲಾಗಿದೆ. ಇನ್ನು ಆರು ತಿಂಗಳ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ‘ನರೇಗಾ’ ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಈ ರಸ್ತೆಯನ್ನು ಹಂತ ಹಂತವಾಗಿ ಶಾಶ್ವತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಪಂ ಎಂಜಿನಿಯರ್ ವಿಜಯ್ ನಾಯ್ಕ್ ತಿಳಿಸಿದ್ದಾರೆ.

ಗ್ರಾಮಸ್ಥರೇ ಚಂದಾ ಎತ್ತಿ ರಸ್ತೆ ಸರಿಮಾಡಿಕೊಳ್ಳುತ್ತಿದ್ದ ದಯನೀಯ ಸ್ಥಿತಿಯ ಕುರಿತು ಕನ್ನಡಪ್ರಭ ವರದಿ ಪ್ರಕಟಿಸುವ ಮೂಲಕ ಸಮಸ್ಯೆ ಬೆಳಕಿಗೆ ತಂದಿತ್ತು. ಆದ್ದರಿಂದ ಗ್ರಾಮಸ್ಥರು ಪತ್ರಿಕೆ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

- - -

(ಕೋಟ್‌)

* ಸಿಸಿ ರಸ್ತೆಗೆ ಕ್ರಮ ಸುದ್ದಿ ಪ್ರಕಟವಾಗಿದ್ದು ಗಮನಿಸಿ ಶಾಸಕರ ಸೂಚನೆಯಂತೆ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದ್ದೇನೆ. ಈ ರಸ್ತೆಯಲ್ಲಿ ರೈತರಷ್ಟೇ ಅಲ್ಲದೇ ಬಸ್‌ಗಳು ಸಹ ಸಂಚರಿಸುವುದನ್ನು ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿಯೇ ಜಿಪಂ ವತಿಯಿಂದ ಈ ಭಾಗಕ್ಕೆ ಸಿಸಿ ರಸ್ತೆ ನಿರ್ಮಿಸಲು ಪ್ರಯತ್ನಿಸಲಾಗುವುದು.

- ಎಂ.ಡಿ. ಕೀರ್ತಿ ಕುಮಾರ್, ರಾಜ್ಯಾಧ್ಯಕ್ಷ, ರಾಜ್ಯ ಎಸ್‌ಟಿ ಘಟಕ.

- - -

-24ಜೆಜಿಎಲ್.1ಬ: ಕನ್ನಡಪ್ರಭ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಚಿಕ್ಕಮಲ್ಲನಹೊಳೆ ಮಣ್ಣಿನ ರಸ್ತೆಯಲ್ಲಿದ್ದ ತಗ್ಗು-ಗುಂಡಿಗಳ ಸರಿಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈಬರ್ ಅಪರಾಧಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಿ
ಮೆದುಳಿನ ಕಾಯಿಲೆಗಳಿಗೆ ಹಾಸನದಲ್ಲೇ ಪರಿಣತ ಚಿಕಿತ್ಸೆ ಲಭ್ಯ