ರಾಜಕೀಯ ಕ್ಷೇತ್ರದ ಏಳಿಗೆಗೆ ಸಣ್ಣ ಪತ್ರಿಕೆಗಳ ಕೊಡುಗೆ ಮುಖ್ಯ

KannadaprabhaNewsNetwork |  
Published : Apr 03, 2026, 01:30 AM IST
ಫೋಟೋ: 2 ಹೆಚ್‌ಎಸ್‌ಕೆ 3ಹೊಸಕೋಟೆ ಜಿಎಸ್.ಮಂಜುನಾಥ್ ಸಂಪಾದಕತ್ವದ ಹೊಸಕೋಟೆ ಪತ್ರಿಕೆಯ 26ನೇ ವರ್ಷದ ವಿಶೇಷ ಸಂಚಿಕೆಯನ್ನು ಮಾಜಿ ಸಂಸದ ಬಿಎನ್.ಬಚ್ಚೇಗೌಡ ಗೃಹ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ಇಂದಿನ ರಾಜಕೀಯ ಕ್ಷೇತ್ರದ ಏಳಿಗೆಗೆ ಸಣ್ಣ ಪತ್ರಿಕೆಗಳ ಪಾತ್ರ ಬಹುಮುಖ್ಯ. ಸ್ಥಳೀಯ ಸುದ್ದಿಗಳನ್ನು ಸ್ಥಳೀಯರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು

ಹೊಸಕೋಟೆ: ಇಂದಿನ ರಾಜಕೀಯ ಕ್ಷೇತ್ರದ ಏಳಿಗೆಗೆ ಸಣ್ಣ ಪತ್ರಿಕೆಗಳ ಪಾತ್ರ ಬಹುಮುಖ್ಯ. ಸ್ಥಳೀಯ ಸುದ್ದಿಗಳನ್ನು ಸ್ಥಳೀಯರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ನಗರದ ಗೃಹಕಚೇರಿಯಲ್ಲಿ ಹೊಸಕೋಟೆ ಪತ್ರಿಕೆ 26ನೇ ವರ್ಷದ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಸಣ್ಣ ಪತ್ರಿಕೆಗಳನ್ನು ನಡೆಸುವುದು ಕಷ್ಟವಾಗುತ್ತಿದೆ. ಸರ್ಕಾರಿ ಅನುದಾನ ಸಿಗಿದಿದ್ದರೂ ಸಂಪಾದಕರು ಎದೆಗುಂದದೆ ಸಣ್ಣ ಪತ್ರಿಕೆಗಳನ್ನು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಸಣ್ಣ ಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು. ಹೊಸಕೋಟೆ ಜಿಎಸ್ ಮಂಜುನಾಥ್ ಸಂಪಾದಕತ್ವದಲ್ಲಿ 26 ವರ್ಷಗಳ ಯಶಸ್ವಿನ ಹಾದಿ ಪತ್ರಿಕೆ ಪೂರೈಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ವರದಿಗಳ ಮೂಲಕ ಪತ್ರಿಕೆ ಅಚ್ಚುಕಟ್ಟಾಗಿ ಮೂಡಿಬರಲಿ ಎಂದರು.

ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪತ್ರಿಕೆಗಳಿಗೆ ಹಾಗೂ ಸುದ್ದಿ ಮಾಧ್ಯಮದವರಿಗೆ ಹೆಚ್ಚಿನ ಸಹಾಯ, ಸಹಕಾರ ನೀಡುತ್ತಿದ್ದು, ಈ ಬಾರಿ ಬಜೆಟ್‌ನಲ್ಲೂ ಅವರಿಗೆ ಹಣ ಒದಗಿಸುತ್ತಿದೆ. ಸರ್ಕಾರದಿಂದ ಈಗ ಪತ್ರಕರ್ತರಿಗೆ ಮಾಶಾಸನ, ಸರ್ಕಾರದ ಜಾಹೀರಾತು ಹಾಗೂ ಬಸ್ ಪಾಸುಗಳನ್ನು ಈಗಿನ ಸರ್ಕಾರ ಒದಗಿಸಿ ಕೊಟ್ಟಿದೆ ಎಂದು ಪತ್ರಿಕೆಗಳು ರಾಜ್ಯದ ಸಮಸ್ಯೆ ಬಗ್ಗೆ ಹಾಗೂ ಜನಕ್ಕೆ ಅನುಕೂಲವಾಗುವ ಸುದ್ದಿಗಳನ್ನು ಸ್ಥಳೀಯವಾಗಿ ಪ್ರಕಟಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ತಿಳಿಸಿದರು.

ಈ ವೇಳೆ ಗ್ರಾಪಂ ಸದಸ್ಯ ಕೆ.ಮಂಜುನಾಥ್, ಜಿ.ಎಸ್.ಉದಯ್ ಕುಮಾರ್, ವೈ.ಜಿ.ಮುರಳಿ, ರಾಮಚಂದ್ರ, ಜ್ಯೋತಿಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.

ಫೋಟೋ: 2 ಹೆಚ್‌ಎಸ್‌ಕೆ 3

ಹೊಸಕೋಟೆಯಲ್ಲಿ ಹೊಸಕೋಟೆ ಪತ್ರಿಕೆಯ 26ನೇ ವರ್ಷದ ವಿಶೇಷ ಸಂಚಿಕೆಯನ್ನು ಮಾಜಿ ಸಂಸದ ಬಿಎನ್.ಬಚ್ಚೇಗೌಡರು ಬಿಡುಗಡೆಗೊಳಿಸಿ, ಸನ್ಮಾನ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನೆಗಾಡು ಸೋಲಿಗರ ಹಾಡಿಗೆ ಕೊನೆಗೂ ಹರಿದ ಗಂಗೆ
ನಾಯಕತ್ವ ವೃದ್ಧಿಗೆ ವಿದ್ಯಾರ್ಥಿ ಸಂಸತ್ತು ಸಹಕಾರಿ: ಪ್ರೊ. ಜೆ.ಎಂ. ನಾಗಯ್ಯ