ರೈತರ ಆರ್ಥಿಕ ಶಕ್ತಿ ಹೆಚ್ಚಿಸಿದ ಕೀರ್ತಿ ರೋಣ ಕ್ಷೇತ್ರದ ಶಾಸಕ ಜಿಎಸ್ಪಿಗೆ ಸಲ್ಲಬೇಕು

KannadaprabhaNewsNetwork |  
Published : Apr 12, 2025, 12:46 AM IST
ಪೋಟೊ ಕ್ಯಾಪ್ಸನ್:ರೋಣನಗರದ ರಾಜೀವಗಾಂಧಿ ಕಾಲೇಜಿನಲ್ಲಿ ಶಾಸಕ ಜಿ.ಎಸ್.ಪಾಟೀಲರಿಗೆ ಹುಟ್ಟುಹಬ್ಬದ ನಿಮಿತ್ತ ಡಂಬಳ ಭಾಗದಿಂದ ಶುಭವನ್ನು  ಕೋರಿದರು. | Kannada Prabha

ಸಾರಾಂಶ

ಹೋಬಳಿಯ ಭಾಗದಲ್ಲಿ ಸಿಂಗಟಾಲೂರ ಏತ ನೀರಾವರಿ ಜಾರಿಗೆ ತರುವುದರ ಮೂಲಕ ಈ ಭಾಗದ ರೈತರ, ಕಾರ್ಮಿಕರ, ಕಡುಬಡವರ ಆರ್ಥಿಕ ಶಕ್ತಿ ಹೆಚ್ಚಿಸಿದ ಕೀರ್ತಿ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ಸಲ್ಲುತ್ತದೆ ಎಂದು ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಡಂಬಳ

ಹೋಬಳಿಯ ಭಾಗದಲ್ಲಿ ಸಿಂಗಟಾಲೂರ ಏತ ನೀರಾವರಿ ಜಾರಿಗೆ ತರುವುದರ ಮೂಲಕ ಈ ಭಾಗದ ರೈತರ, ಕಾರ್ಮಿಕರ, ಕಡುಬಡವರ ಆರ್ಥಿಕ ಶಕ್ತಿ ಹೆಚ್ಚಿಸಿದ ಕೀರ್ತಿ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ಸಲ್ಲುತ್ತದೆ ಎಂದು ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.

ರೋಣನಗರದ ರಾಜೀವಗಾಂಧಿ ಕಾಲೇಜಿನಲ್ಲಿ ಶಾಸಕ ಜಿ.ಎಸ್. ಪಾಟೀಲರ ಹುಟ್ಟುಹಬ್ಬದ ನಿಮಿತ್ತ ಡಂಬಳ ಭಾಗದಿಂದ ಶುಭವನ್ನು ಕೋರಿ ಮಾತನಾಡಿದ ಅವರು, ಮುಂಡರಗಿ ತಾಲೂಕೆಂದರೆ ಬರದ ನಾಡು ಎಂದೇ ಬಿಂಬಿತವಾಗಿತ್ತು. ಅದನ್ನು ಅಲ್ಲಗಳೆಯಲು ನಿರಂತರವಾಗಿ ತಮ್ಮನ್ನು ಜನಸೇವೆಗಾಗಿ ತೊಡಗಿಸಿಕೊಂಡು ಜಲ ಮೂಲ ಹೆಚ್ಚಾಗಬೇಕು ಎನ್ನುವ ದೃಢ ನಿರ್ಧಾರವನ್ನು ಮಾಡಿ ಪ್ರತಿ ಹಳ್ಳಕೊಳ್ಳಗಳಿಗೆ ಬೃಹತ್ತ ಬಾಂದಾರಗಳನ್ನು ನಿರ್ಮಿಸಿದ್ದಲ್ಲದೆ ಈ ಭಾಗದ ಪ್ರತಿ ಕೆರೆ ನೀರು ತುಂಬಿಸುವ ನೀಲನಕ್ಷೆಯನ್ನು ಮಾಡಿಕೊಂಡು ತಾಮ್ರುಗುಂಡಿ ಕೆರೆ, ಡಂಬಳ ಕೆರೆ, ಹಿರೇವಡ್ಡಟ್ಟಿ ಕೆರೆ, ಜಂತ್ಲಿ ಶಿರೂರ ಕೆರೆ, ಪೇಠಾ ಆಲೂರ ಕೆರೆಗಳನ್ನು ಮತ್ತು ಹಳ್ಳದ ಮೂಲಕ ಸಿಂಗಟಾಲೂರ ಏತನೀರಾವರಿ ಮೂಲಕ ಪ್ರತಿ ಬಾಂದಾರಗಳಿಗೆ ನೀರು ಹರಿಸಿದ್ದರಿಂದ ಬಂದಾಗುವ ಸ್ಥಿತಿಯಲ್ಲಿ ಇದ್ದ 5ಸಾವಿರಕ್ಕು ಹೆಚ್ಚು ಬೋರವೆಲ್ಲಗಳು ಮತ್ತೆ ರೈತರ ಮತ್ತು ಜೀವ ಸಂಕುಲದ ಬುಗ್ಗೆಯಾಗಿ ಕೆಲಸಮಾಡಿವಂತೆ ಮಾಡಿರುವ ಶ್ರೇಯಸ್ಸು ಶಾಸಕರಾದ ಜಿ.ಎಸ್. ಪಾಟೀಲರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಿಥುನ.ಜಿ. ಪಾಟೀಲ, ಬಸುರಾಜ ಪೂಜಾರ, ಹಾಲಪ್ಪ ಡೊಳ್ಳಿನ, ಬಸುರಾಜ ಕುಸಗಲ್ಲ, ಅನಿಲಕುಮಾರ ಪಲ್ಲೇದ, ಈರಣ್ಣ ನಂಜಪ್ಪನವರ, ಶಂಕ್ರಪ್ಪ ಗುಡಿ, ಇಒ ವಿಶ್ವನಾಥ ಹೊಸಮನಿ, ಪಿಡಿಒ ಮಾಲತೇಶ, ಬಿ.ಒ ಎಚ್.ಎಮ್. ಪಡ್ನೆಸ, ಸಿಆರ್‌ಪಿ ಮೃತ್ಯುಂಜಯ ಪೂಜಾರ, ಗ್ರಾಮದ ಹಿರಿಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು