ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಪಿಇಎಸ್ ಕಾನೂನು ಕಾಲೇಜಿನ ಸಹಯೋಗದಲ್ಲಿ ಮುಕ್ತಾಯಗೊಂಡ ಕಾನೂನು ಅರಿವು-ನೆರವು ಹಾಗೂ ವನಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾನೂನು ಕಾಲೇಜು ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಮತ್ತು ದೇಶಕ್ಕೆ ಯಾವ ಸೇವೆಯನ್ನು ನೀಡಬಹುದು ಎಂಬುದರ ಬಗ್ಗೆ ಅರಿವಿರಬೇಕು. ಜೊತೆಗೆ ಇಂತಹ ಎನ್‌ಎಸ್‌ಎಸ್ ಶಿಬಿರಗಳಲ್ಲಿ ಹೆಚ್ಚು ಭಾಗವಹಿಸುವಿಕೆ ಮುಖ್ಯವಾಗಬೇಕು. ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸಿಕೊಡಬಹುದು ಎಂಬ ಅನುಭವ ಇಂತಹ ಶಿಬಿರದಿಂದ ಸಿಗುತ್ತದೆ ಎಂದು ಸಲಹೆ ನೀಡಿದರು.ಸಮಾಜದ ಸಂಸ್ಕೃತಿ ವ್ಯಕ್ತಿಯ ಸಂಸ್ಕೃತಿ ಮೇಲೆ ನಿಂತಿರುತ್ತದೆ ಅದೇ ರೀತಿ ಜೊತೆಗೆ ಗ್ರಾಮೀಣ ಸಂಸ್ಕೃತಿ ಮೇಲೆ ದೇಶದ ಸಂಸ್ಕೃತಿ ನಿಂತಿರುತ್ತದೆ. ಅಧಿಕಾರ ಸಿಕ್ಕಿದೆ ಎಂದಾಕ್ಷಣ ಹೆಚ್ಚು ಅಹಂಕಾರ ಪಡಬಾರದು. ಸಮಾಜದಲ್ಲಿ ಅನಾಚಾರಗಳು, ಅತ್ಯಾಚಾರಗಳು ಹೆಚ್ಚಾಗುತ್ತಿವೆ, ಅವುಗಳನ್ನು ನಿಲ್ಲಬೇಕಾದರೆ ವಕೀಲರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಸಮಾಜದಲ್ಲಿ ಕ್ರೌರ್ಯತೆ ನಿಂತುಹೋಗಿ ಸಮಾಜ ಸುಭೀಕ್ಷವಾಗಿರುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಭಾರತೀನಗರಸರ್ಕಾರಿ ಶಾಲೆಗಳು ಅಭಿವೃದ್ಧಿಗೆ ಸಂಘಸಂಸ್ಥೆಗಳ ಸಹಕಾರ ಬಹಳ ಮುಖ್ಯ ಎಂದು ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮಿದೇವಿ ಮಹಿಳಾ ಟ್ರಸ್ಟ್‌ನ ಅಧ್ಯಕ್ಷೆ ಶಾಂತ ರಾಮಸ್ವಾಮಿ ತಿಳಿಸಿದರು.
ಇದೇ ವೇಳೆ ಶಾಂತರಾಮಸ್ವಾಮಿ ಅವರಿಗೆ ಶಾಲೆ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋರಮ, ಜ್ಯೋತಿ, ವಿಮಲ, ಇಂದ್ರೀರಾಸತೀಶ್, ಜಯಲಕ್ಷ್ಮಿ, ಯಲಾದಹಳ್ಳಿ ಶಾಲೆ ಮುಖ್ಯ ಶಿಕ್ಷಕ ಕೆ.ಮಂಜು, ಸಹಶಿಕ್ಷಕರಾದ ವೀರರಾಜಅರಸು, ಮಹೇಶ್, ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ, ದೊರೆ, ಆಲಭುಜನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಜಿ.ಪದ್ಮಾವತಿ, ಸಹಶಿಕ್ಷಕರಾದ ಎ.ಎನ್.ಅಶ್ವಿನಿ, ಎ.ಎಸ್.ಕವನ, ಎಸ್‌ಡಿಎಂಸಿ ಅಧ್ಯಕ್ಷ ಎ.ವಿ.ಜಗದೀಶ್ ಸೇರಿದಂತೆ ಹಲವರಿದ್ದರು.