ಕನ್ನಡ ಪ್ರಭ ವಾರ್ತೆ ಬ್ಯಾಕೋಡು
ಇಲ್ಲಿಯ ಸಮೀಪದ ಸಿಗಂದೂರು ದೇವಸ್ಥಾನದ ಶೇಷಪ್ಪ ನಾಯಕ ವೇದಿಕೆಯಲ್ಲಿ ಸಿಗಂದೂರು ದಸರಾ ವೈಭವಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿ, ರೈತಪರ ಕಾಳಜಿ ಇರುವ ಕಾಗೋಡು ತಿಮ್ಮಪ್ಪರವರ ಕಾಲದಲ್ಲಿ ಶರಾವತಿ ಸಂತ್ರಸ್ತರು ಪಡೆದ ಭೂಮಿ ಹಕ್ಕನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಜಾ ಗೊಳಿಸಲಾಗಿತ್ತು. ಈಗ ಅಂತಹ ಭೂಮಿ ಕಳೆದುಕೊಂಡ ರೈತರಿಗೆ ಮರು ಹಕ್ಕನ್ನು ನೀಡುವ ಭರವಸೆ ನೀಡಿದರು.
ಸಿಗಂದೂರಿನಧರ್ಮದರ್ಶಿ ಡಾ. ಎಸ್. ರಾಮಪ್ಪ ಮಾತನಾಡಿ, ಸಿಗಂದೂರು ದೇವಸ್ಥಾನ ನನ್ನದೊಬ್ಬನದಲ್ಲ. ಜಾತಿ, ಧರ್ಮ ಎನ್ನದೇ, ಕಷ್ಟ ಎಂದು ಬಂದವರಿಗೆ ದೇವಿ ಕರುಣಿಸುತ್ತಾಳೆ. ದೇವಿಯ ಪವಾಡ ಅದ್ಬುತ ಮೂರು ದಶಕಗಳಲ್ಲಿ ಹಲವು ಬದಲಾವಣೆತಂದಿದ್ದು, ಸಿಗಂದೂರು ಸೇತುವೆ ಆಗಿದೆ ಎಂದರೆ ದೇವಿಯ ಆಶೀರ್ವಾದ ಅಪಾರವಾದುದು. ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಸದ್ಭಕ್ತರು ಕಣ್ತುಂಬಿಕೊಂಡು ದೇವಿಯ ಆಶೀರ್ವಾದ ಪಡೆದುಕೊಳ್ಳಿ ಎಂದು ಕರೆ ನೀಡಿದರು.ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಮಾತನಾಡಿ, ರಾಮಪ್ಪನವರ ಅವಿರತ ಶ್ರಮ, ಮತ್ತು ಭಕ್ತರ ಸಹಕಾರ, ಕಾಗೋಡು ತಿಮ್ಮಪ್ಪನವರು ಈ ಹಿಂದೆ ದೇವಸ್ಥಾನಕ್ಕೆ ಒದಗಿಸಿದ ಮೂಲಭೂತ ಸೌಕರ್ಯಗಳು ದೇವಸ್ಥಾನ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಗಣ್ಯರನ್ನು ಡೊಳ್ಳು ತಂಡದವರು ಸ್ವಾಗತಿಸಿದರು. ಎಲ್ಲಾ ಗಣ್ಯರಿಗೂ ದೇವಸ್ಥಾನದ ಸಮಿತಿಯಿಂದ ಗೌರವಸಮರ್ಪಣೆ ನಡೆಯಿತು.
ಪೂರ್ಣಿಮಾ ಕರೂರು ಪ್ರಾರ್ಥಿಸಿ, ಎಚ್ ಆರ್ ರವಿಕುಮಾರ್ ಸ್ವಾಗತಿಸಿದರು.
ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ಇಲ್ಲಿಯವರೆಗೂ ಎಪ್ಪತ್ತೆರಡು ಶಾಲೆಗಳಿಗೆ ಸುಣ್ಣ-ಬಣ್ಣ ನೀಡುವುದರ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು 2025ರ ದಸರಾ ಪ್ರಯುಕ್ತ, ಮರಾಠಿ, ಹುರುಳಿ ಹಾಗೂ ಕಟ್ಟಿನಕಾರು ಸರ್ಕಾರಿ ಶಾಲೆಗಳಿಗೆ ಬಣ್ಣ ವಿತರಿಸಲಾಯಿತು.