ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಳ್ಳಿಗಳಲ್ಲಿ ನಾಟಕ ಹಾಗೂ ರಂಗ ಕಲೆಗಳು ಜನರನ್ನು ರಂಜಿಸುವ ಜೊತೆಗೆ ಬದುಕಿನ ಪಾಠ ಹೇಳುತ್ತಿದ್ದವು. ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುತ್ತವೆ ಎಂದು ಕನಿಷ್ಠ ವೇತನ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್‌ಪಿಕೆ ಉಮೇಶ್ ತಿಳಿಸಿದರು.ತಾಲೂಕಿನ ಉತ್ತುವಳ್ಳಿಯಲ್ಲಿ ಶ್ರೀ ಉರುಕಾತಾಬಿಂಕಾ ಹಬ್ಬದ ಪ್ರಯುಕ್ತ ಶ್ರೀ ಉರುಕಾತಾಂಬಿಕ ಕೃಪಾಪೋಷಿತ ನಾಟಕ ಮಂಡಲಿಯಿಂದ ಚಲನಚಿತ್ರ ನಟ ದಿ.ಸುಂದರ ಕೃಷ್ಣರಾಜೇ ಅರಸ್ ಅವರ ರಂಗಜ್ಜಿಕೆಯಲ್ಲಿ ಪ್ರದರ್ಶನಗೊಂಡ "ದ್ರೌಪತಿ ಸತ್ಯ ಪರೀಕ್ಷೆ " ನಾಟಕ ಕಾರ್ಯಕ್ರಮವನ್ನು ಉದ್ವಾಟಿಸಿ ಮಾತನಾಡಿದರು. ಗ್ರಾಮೀಣ ಕಲೆಯಾಗಿರುವ ಜಾನಪದ, ರಂಗಭೂಮಿ ನಾಟಕಗಳನ್ನು ಉಳಿಸಿ ಬೆಳೆಸಲು ಸರ್ಕಾರ ಹೆಚ್ಚಿನ ನೆರವು ನೀಡಬೇಕು. ಈಗ ನಗರ ಪ್ರದೇಶಗಳಲ್ಲಿ ಪೌರಾಣಿಕ ನಾಟಕ ಕಲೆ ಪ್ರೋತ್ಸಾಹಿಸಲು ಜಿಲ್ಲಾ ಮಟ್ಟದಲ್ಲಿ ನಾಟಕೋತ್ಸವನ್ನು ಆಯೋಜನೆ ಮಾಡಲಾಗುತ್ತದೆ. ಇದನ್ನು ಹಳ್ಳಿ ಹಳ್ಳಿಗಳಲ್ಲಿ ಇಂತಹ ನಾಟಕ ಆಯೋಜನೆ ಮಾಡುವವರಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕನಿಷ್ಠ ಪಕ್ಷ ಪೌರಾಣಿಕ ನಾಟಕಕ್ಕೆ ಒಂದು ಲಕ್ಷ ರು. ಸಹಾಯ ಧನ ನೀಡಬೇಕು ಎಂದು ಸರ್ಕಾರವನ್ನು ಉಮೇಶ್ ಮನವಿ ಮಾಡಿದರು. ಉತ್ತುವಳ್ಳಿ ಗ್ರಾಮ ಕಲೆಗೆ ಪ್ರಸಿದ್ಧಿ ಪಡೆದುಕೊಂಡಿದೆ. ಕಂಚಿನ ಕಂಠದ ಉತ್ತುವಳ್ಳಿ ಅರಸು ನಮ್ಮೂರಿನವರು ಎನ್ನುವುದು ಹೆಮ್ಮೆ. ಅವರು ಸಹ ರಂಗಭೂಮಿ ಕಲಾವಿದರಾಗಿ ಅನೇಕ ನಾಟಕಗಳನ್ನು ಅಭಿನಯಿಸಿ, ಸಿನಿಮಾ ರಂಗದಲ್ಲಿ ನಟನೆ ಮಾಡಿ, ಹೆಸರು ಮಾಡಿದ್ದರು. ಇಂಥ ಗ್ರಾಮದಲ್ಲಿ ನಾಟಕ ಪ್ರದರ್ಶನ ನಡೆಯುತ್ತಿರುವುದು ಹೆಮ್ಮೆ ಎನ್ನಿಸಿದೆ ಎಂದರು. ಗ್ರಾಪಂ ಪಿಡಿಒ ರವಿ ಮಾತನಾಡಿ, ಹಬ್ಬ ಹರಿದಿನಗಳು ಹಾಗೂ ಜಾತ್ರೆಗಳ ಸಂದರ್ಭದಲ್ಲಿ ಹಳ್ಳಿಗಳಲ್ಲಿ ನಾಟಕಗಳನ್ನು ಅಭಿನಯಿಸುವ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಎಲ್ಲರು ಸಹ ಪ್ರೋತ್ಸಾಹ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಶಿವಪುರ ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ತುಂಗಾಕುಮಾರ್, ವಿಶಾಲಾಕ್ಷಿ, ಶಂಕುತಲಾ, ಅಜಯ್, ನಾಗಮಣಿ ರಂಗಸ್ವಾಮಿ, ಎನ್. ಮಹೇಶ್, ಶಿವಣ್ಣ, ಮಹದೇವಮ್ಮ, ಶೋಭಾರಾಣಿ, ಶಿವಕುಮಾರ್,ಮಹದೇವಸ್ವಾಮಿ, ಪ್ರದೀಪ್. ಕಾರ್ಯದರ್ಶಿ ಮಂಜುನಾಥ್, ಯಜಮಾನರಾದ ಮಹೇಶ್, ರಮೇಶ್, ಸೋಮಣ್ಣ, ಮಹದೇವಯ್ಯ, ರಂಗಸ್ವಾಮಿ, ನಾಗರಾಜು, ಮಹದೇವಯ್ಯ, ಸಿದ್ದರಾಜು, ಮಹದೇವಯ್ಯ, ನಾಟಕ ವ್ಯವಸ್ಥಾಪಕ ಬಸವಣ್ಣ, ಕಾಂತರಾಜು, ಮಹೇಶ್.ಪಿ. ಮಂಟಯ್ಯ, ಪ್ರಭುಸ್ವಾಮಿ, ಮುತ್ತುರಾಜು ಇದ್ದರು.