ಚಂದಯ್ಯ ಕಾಯಕ ವರ್ಗದ ಅಸ್ಮಿತೆ: ಅನಂತ ನಾಯ್ಕ

KannadaprabhaNewsNetwork |  
Published : Aug 11, 2025, 12:37 AM IST
9ಎಚ್‌ಪಿಟಿ8- ಹೊಸಪೇಟೆಯ ಅಮರಾವತಿ ಅತಿಥಿ ಗೃಹದ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಹಿಂದುಳಿದ ವರ್ಗಗಳ ಸೌಹಾರ್ದ ಸಮ್ಮಿಲನ ಸಭೆಯಲ್ಲಿ ಶರಣ ನುಲಿಯ ಚಂದಯ್ಯ ಜಯಂತ್ಯುತ್ಸವದಲ್ಲಿ ಪ್ರಗತಿಪರ ಚಿಂತಕ ಅನಂತ ನಾಯ್ಕ ಪುಷ್ಪಾರ್ಚನೆ ಮಾಡಿದರು. ಅಹಿಂದ ಮುಖಂಡರು ಇದ್ದರು. | Kannada Prabha

ಸಾರಾಂಶ

ನುಲಿಯ ಚಂದಯ್ಯನವರು ಕೇವಲ ಅವರ ಸಮುದಾಯಕ್ಕೆ ಸೀಮಿತವಾಗದೇ ಈ ನೆಲದ ಇಡೀ ಕಾಯಕ ಧರ್ಮದ ಪ್ರತಿರೂಪ.

ಹಿಂದುಳಿದ ವರ್ಗಗಳ ಸೌಹಾರ್ದ ಸಮ್ಮಿಲನ ಸಭೆಯಲ್ಲಿ ಶರಣ ನುಲಿಯ ಚಂದಯ್ಯ ಜಯಂತ್ಯುತ್ಸವಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವಗುರು ಬಸವಣ್ಣನ ವಚನ ಚಳವಳಿಯಲ್ಲಿ ಪ್ರಮುಖ ದಾರ್ಶನಿಕ ವಚನಕಾರರಾಗಿದ್ದ ನುಲಿಯ ಚಂದಯ್ಯ ನಾಡಿನ ಕಾಯಕ ವರ್ಗದ ಅಸ್ಮಿತೆ ಎಂದು ಪ್ರಗತಿಪರ ಚಿಂತಕ ಅನಂತ ನಾಯ್ಕ ತಿಳಿಸಿದರು.

ಸ್ಥಳೀಯ ಅಮರಾವತಿ ಅತಿಥಿ ಗೃಹದ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಹಿಂದುಳಿದ ವರ್ಗಗಳ ಸೌಹಾರ್ದ ಸಮ್ಮಿಲನ ಸಭೆಯಲ್ಲಿ ಶರಣ ನುಲಿಯ ಚಂದಯ್ಯ ಜಯಂತ್ಯುತ್ಸವದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ಮತ್ತು ಆ ಕಾಯಕದಿಂದ ಬರುವ ವರಮಾನವನ್ನು ಅಂದಿನ ಕಾಲದಲ್ಲಿಯೇ ದಾಸೋಹಕ್ಕೆ ಮೀಸಲಿಟ್ಟಿದ್ದರು. ನುಲಿಯ ಚಂದಯ್ಯ ಅವರ ಆದರ್ಶಗಳು ನಮಗೆಲ್ಲ ಮಾದರಿ ಆಗಿವೆ ಎಂದರು.

ನುಲಿಯ ಚಂದಯ್ಯನವರು ಕೇವಲ ಅವರ ಸಮುದಾಯಕ್ಕೆ ಸೀಮಿತವಾಗದೇ ಈ ನೆಲದ ಇಡೀ ಕಾಯಕ ಧರ್ಮದ ಪ್ರತಿರೂಪ ಎಂದು ಬಣ್ಣಿಸಿದ ಅನಂತ ನಾಯ್ಕ, ವಿಜಯನಗರ ಸಾಮ್ರಾಜ್ಯ ಕಟ್ಟಿದ ಕಾಯಕ ಜೀವಿಗಳಿಗೆ ನುಲಿಯ ಚಂದಯ್ಯನವರ ಬದುಕು ಪ್ರೇರಣೆ ಒದಗಿಸಿತ್ತು ಎಂದರು.

ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಮುಖಂಡರಾದ ತೋಳಿ ಭರಮಣ್ಣ, ಇರ್ಫಾನ್ ಮುದಗಲ್, ಗೌಡರ ರಾಮಚಂದ್ರಪ್ಪ, ಸೋಮಶೇಖರ ಬಣ್ಣದಮನೆ, ಬಾಣದ ಗಣೇಶ, ಶಿವಕುಮಾರ್, ಎನ್‌. ವೆಂಕಟೇಶ್‌, ವೀರಭದ್ರ ನಾಯಕ, ಸಣ್ಣ ಮಾರೆಪ್ಪ, ಪ್ರಮೋದ ಪುಣ್ಯಮೂರ್ತಿ, ಛಲವಾದಿ ಮಹಾಸಭಾದ ಸಣ್ಣ ಈರಣ್ಣ , ಗಿರೀಶ್, ಕೆ.ತಿಮ್ಮಾರೆಡ್ಡಿ, ಹಾರೂನ್ ಶೇಖ್, ಹುಲಿಗೆಮ್ಮ ಗಾಯಕ ಯಲ್ಲಪ್ಪ ಭಂಡಾರಧಾರ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!