ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆಕೆಯ ಸಂಭಂದಿಕರನ್ನು ಕರೆಸಿ ಹಿರಿಯರನ್ನು ಬೀದಿಗೆ ತಳ್ಳದಂತೆ ಬುದ್ದಿವಾದ ಹೇಳಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಎದುರಿಗಿರುವ ಶಾಪಿಂಗ್ ಮಾಲ್ ಬಳಿ ಭಿಕ್ಷೆ ಬೇಡುತಿದ್ದ ವೃದ್ದೆಯೊಬ್ಬಳನ್ನು ಕಾನೂನು ಸೇವೆಗಳ ಪ್ರಾದಿಕಾರದ ಪ್ಯಾನೆಲ್ ವಕೀಲರು ಕಂಡು ನನಗೆ ತಿಳಿಸಿದರು, ತಕ್ಷ ಸ್ಥಳಕ್ಕೆ ಬಂದು ತಹಸೀಲ್ದಾರ್ ಅನಿಲ್ ರನ್ನು ಕರೆಸಿ ಹಿರಿಯ ನಾಗರಿಕರ ರಕ್ಷಣಾ ಘಟಕಕ್ಕೆ ಕಳುಹಿಸಿಕೊಟ್ಟಿದ್ದೇನೆ, ಭಿಕ್ಷೆ ಬೇಡುತಿದ್ದ ವೃದ್ದೆಯ ಹೆಸರು ಗೊತ್ತಾಗಿಲ್ಲ. ಆದರೆ ಆಕೆ, ನಗರದ ಗಂಗನಮಿದ್ದೆ ವಾರ್ಡ್ ನಲ್ಲಿ ನನ್ನ ಮಗಳು ವೆಂಕಟಲಕ್ಷ್ಮೀ ಇದ್ದಾಳೆ ಎಂದು ಹೇಳುತಿದ್ದರು. ಅವರ ಸಂಬಂಧಿಕರನ್ನು ಕರೆಸಿ ನಾಳೆ ಬುದ್ದಿವಾದ ಹೇಳಿ ದಂಡ ವಿಧಿಸಿ ಮನೆಗೆ ಕಳಿಸುವ ಕೆಲಸ ಮಾಡುತ್ತೇವೆ. ಇದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವವರನ್ನು ರಕ್ಷಿಸುವ ಕೆಲಸ ನಾಳೆಯಿಂದಲೇ ಪ್ರಾರಂಭಿಸುವುದಾಗಿ ಅವರು ತಿಳಿಸಿದ್ದಾರೆ.ತಹಸೀಲ್ದಾರ್ ಅನಿಲ್, ಪ್ಯಾನಲ್ ವಕೀಲರಾದ ಮಂಜುನಾಥರೆಡ್ಡಿ, ಸೌಜನ್ಯ ಗಾಂಧಿ, ಸಂತೋಷ್, ಹಿರಿಯ ನಾಗರಿಕರ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಇದ್ದರು.