ರಾಷ್ಟ್ರ ದ್ರೋಹಿಗಳ ನಂಬಿಕೆ ಸುಳ್ಳು ಮಾಡಿದೆ: ಕೆ.ಪಿ.ಸುರೇಶ್ ಕುಮಾರ್
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನಮ್ಮ ದೇಶದ ಜನರ ನಿರೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ನಮ್ಮ ಹೆಮ್ಮೆಯ ಸೈನಿಕರು ಈಡೇರಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ನ ಶೃಂಗೇರಿ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ತಿಳಿಸಿದರು.
ಪತ್ರಿಕಾ ಹೇಳಿಕೆ ನೀಡಿ, ಹಿಂದೂಗಳ ಹತ್ಯೆ ಮಾಡಿ ಪಾರಾಗಬಹುದೆಂಬ ರಾಷ್ಟ್ರ ದ್ರೋಹಿಗಳ ನಂಬಿಕೆ ಸುಳ್ಳಾಗಿಸಲಾಗಿದೆ. ವಿದ್ರೋಹದ ಕೃತ್ಯಗಳು, ಆಂತರಿಕ ಶತ್ರುಗಳಿಂದ ಹಿಂದೂಗಳ ಹತ್ಯೆಯನ್ನು ಸೆಕ್ಯುಲರ್ ಹತ್ಯೆಗಳಾಗಿ ಪರಿವರ್ತಿಸುವ ದುರಹಂಕಾರದ ಮಾತು, ನಡೆಗಳ ನಡುವೆ ಪಾಕಿಸ್ಥಾನದ 9 ಆಯ್ದ ಉಗ್ರಗಾಮಿ ಕೇಂದ್ರಗಳನ್ನು ನಮ್ಮ ಸೈನಿಕರು ಧೂಳೆಬ್ಬಿಸಿರುವುದು ಸಮಾಧಾನ ತಂದಿದೆ ಎಂದರು.ಮನುಕುಲದ ಶತ್ರುಗಳಾದ ಉಗ್ರಗಾಮಿಗಳನ್ನು ಹೆರುವ ವಾರ್ಡಗಳಂತೆ ರೂಪುಗೊಂಡಿರುವ ಪಾಕಿಸ್ತಾನ ಸದಾ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡು ತನ್ನನ್ನು ಸಮರ್ಥಿಸಿಕೊಳ್ಳುತ್ತಿರುವುದರಿಂದ ಜಗತ್ತಿನ ಒಳಿತಿಗೆ ಉಗ್ರರ ನಿರ್ನಾಮವಾಗ ಬೇಕಾಗಿರುವುದು ಅನಿವಾರ್ಯವಾಗಿದೆ. ನಿರಂತರ ಜಿಹಾದಿ ಕ್ರೌರ್ಯಕ್ಕೆ ಒಳಗಾದ ನಮ್ಮ ರಾಷ್ಟ್ರಕ್ಕೆ, ಸಮಾಜಕ್ಕೆ ಶಾಂತಿ ಉಪದೇಶ ಮಾಡುವ ಬಾಹ್ಯ ಮತ್ತು ಆಂತರಿಕ ಶಕ್ತಿಗಳ ಹುನ್ನಾರದ ಮುಖವಾಡಗಳನ್ನು ನಾಡಿನ ಜನರು ಕಿತ್ತೊಗೆಯುವ ದಿನ ದೂರವಿಲ್ಲ. ಈ ಆಪರೇಷನ್ ಸಿಂದೂರ ಅತ್ಯಂತ ವಿವೇಕಯುತ ಕಾರ್ಯತಂತ್ರದಿಂದ ಕೂಡಿದ ಅತ್ಯಂತ ಪ್ರಬುದ್ಧವಾದ ತೀರ್ಮಾನವಾಗಿದೆ. ಆಪರೇಷನ್‌ಗೆ ಸಿಂದೂರ ಎನ್ನುವ ಹೆಸರಿಡುವುದರಿಂದ ಆರಂಭಿಸಿರುವ ಈ ಕಾರ್ಯಾಚರಣೆ ದುಷ್ಟ ಶಕ್ತಿ ಗಳ ಮೂಲಕ್ಕೆ ಮರ್ಮಾಘಾತ ನೀಡಿದ ಕಾರ್ಯಾಚರಣೆ ಇದಾಗಿತ್ತು ಎಂದು ತಿಳಿಸಿದ್ದಾರೆ.
-- ಬಾಕ್ಸ್--ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ಪಹಲ್ಗಾಂನಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ ಕೃತ್ಯವನ್ನು ಕಳಸ ಹಾಗೂ ಶೃಂಗೇರಿಯಲ್ಲಿ ಪ್ರತಿಭಟಿಸಿದ ಹಿಂದೂ ಕಾರ್ಯ ಕರ್ತರ ಮೇಲೆ ಸುಳ್ಳು ಪೊಲೀಸ್ ಕೇಸ್ ದಾಖಲಿಸಿ ಕೃತ್ಯವನ್ನು ವಿರೋಧಿಸುವವರ ಶಕ್ತಿ ಕುಂದಿಸುವ ಕೆಲಸ ಪೊಲೀಸರ ಮೂಲಕ ರಾಜ್ಯ ಸರ್ಕಾರ ಮಾಡುತ್ತಿದೆ. ಆದರೆ, ಈ ಪ್ರಯತ್ನ ವಿಫಲವಾಗಲಿದೆ. ಯಾವುದೇ ಹಿಂಜರಿಕೆಯಿಲ್ಲದೆ ಹಿಂದೂ ಧರ್ಮದ ರಕ್ಷಣೆಗೆ, ಹಿಂದೂಗಳ ರಕ್ಷಣೆಗಾಗಿ ಯಾವ ರೀತಿಯ ಪ್ರತಿಭಟನೆಯನ್ನೂ ಕೂಡ ಮಾಡಲು ಹಿಂದೂಗಳು ಸದಾ ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.