ಧರ್ಮಗುರುಗಳು ಧಾರ್ಮಿಕ ಕಲ್ಯಾಣಕ್ಕಾಗಿ ಹೋರಾಡಿದಾಗ ಮಾತ್ರ ಸಮಾಜದ ಪರಿವರ್ತನೆ ಆಗಲು ಸಾಧ್ಯ.
ಹರಪನಹಳ್ಳಿ: ಧರ್ಮಗುರುಗಳು ಸಮಾಜದಲ್ಲಿ ನಿಷ್ಪಕ್ಷಪಾತವಾಗಿ ಇದ್ದು ಒಳ್ಳೆಯ ಸಂದೇಶವನ್ನು ನೀಡಬೇಕೇ ಹೊರತು ಸಮಾಜದ ದಿಕ್ಕನ್ನು ತಪ್ಪಿಸುವ ಕೆಲಸ ಮಾಡಬಾರದು ಎಂದು ಜೈನ ಗುರು ಆಚಾರ್ಯ ವಿಮಲ್ ಸಾಗರ್ ಸುರೀಶ್ವರ ಜೀ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದಲ್ಲಿ ಅನಂತನಾಥ ಜೈನ ಶ್ವೇತಾಂಬರ ಸಮಾಜ, ಭಗವಾನ್ ಅನಂತನಾಥ್ ಜೈನ ಶ್ವೇತಾಂಬರ ಮಂದಿರದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಧರ್ಮಗುರುಗಳು ಧಾರ್ಮಿಕ ಕಲ್ಯಾಣಕ್ಕಾಗಿ ಹೋರಾಡಿದಾಗ ಮಾತ್ರ ಸಮಾಜದ ಪರಿವರ್ತನೆ ಆಗಲು ಸಾಧ್ಯ. ಮನುಷ್ಯರಾದ ನಾವು ಸಮಸಮಾಜ ನಿರ್ಮಾಣ ಮಾಡಲು ಎಲ್ಲ ರೀತಿಯ ತತ್ವಗಳನ್ನು ಪಾಲಿಸಬೇಕಾಗಿದೆ. ಸಮಾಜದ ಯುವ ಪೀಳಿಗೆಯ ಅನ್ಯ ಸಮಾಜದವರ ಜೊತೆ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿ ಪ್ರತಿಯೊಬ್ಬರೂ ಪ್ರೀತಿ ವಿಶಾಸ್ವದಿಂದ ನಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಶಾಂತಿ ಮೂಡಿಸಲು ಪ್ರಯತ್ನಿಸಬೇಕು. ಆಶಾಂತಿ ಉಂಟು ಮಾಡಬಾರದು. ಯುವಕರು ಅಪರಾಧ ಕೃತ್ಯಗಳಿಂದ ದೂರವಿದ್ದು, ತಂದೆ-ತಾಯಿಗಳನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು. ತಂದೆ-ತಾಯಿಗಳನ್ನು ಮತ್ತು ನೆರೆಹೊರೆಯವರನ್ನು ಎಂದಿಗೂ ದೂರ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ಧನರಾಜ ಜೈನ್, ಸುಮೇರ್ ಮಲ್ಲ ಜೈನ್, ಉತ್ತಮ್ ಚಂದ್ ಜೈನ್, ಗೌತಮ್ ಚಂದ್ ಜೈನ್, ಡಿ. ಕಾಂತಿಲಾಲ್, ಪ್ರಕಾಶ್ ಜೈನ್, ಜಯಂತಿಲಾಲ್ ಜೈನ್, ಚಂದನಮಲ್ಲ, ರಮೇಶ್ ಜೈನ್, ಅಶೋಕ ಜೈನ್, ಅಶೋಕ್ ಮೋಹನಲಾಲ್, ಹನುಮಂತ ಜೈನ್, ವಿಜಯನಗರ ಎಸ್ಪಿ ಜಾಹ್ನವಿ ಸೇರಿದಂತೆ ಸಮಾಜದ ಹಿರಿಯ ಮತ್ತು ಕಿರಿಯ ಮುಖಂಡರು ಧರ್ಮಗುರುಗಳು ಭಾಗವಹಿಸಿದ್ದರು.
ಹರಪನಹಳ್ಳಿಯಲ್ಲಿ ಜೈನ ಧರ್ಮ ಗುರು ಆಚಾರ್ಯ ವಿಮಲ್ ಸಾಗರ್ ಸುರೀಶ್ವರ ಜೀ ಧರ್ಮ ಸಂದೇಶ ನೀಡಿದರು. ವಿಜಯನಗರ ಎಸ್ಪಿ ಜಾಹ್ನವಿ, ಉತ್ತಮ ಚಂದ್ ಜೈನ್ ಇದ್ದರು.