ದಾಂಡೇಲಿ-ಅಳ್ನಾವರ ರೈಲು ಪುನಾರಂಭ ಸಂತಸ ತಂದಿದೆ: ಮಾಜಿ ಶಾಸಕ ಸುನಿಲ ಹೆಗಡೆ

KannadaprabhaNewsNetwork |  
Published : Feb 06, 2026, 02:45 AM IST
ದಾಂಡೇಲಿ ರೈಲ್ವೆ ನಿಲ್ದಾಣ. | Kannada Prabha

ಸಾರಾಂಶ

ಫೆ.೭ರಂದು ಶನಿವಾರ ಸಂಜೆ ೪ ಗಂಟೆಗೆ ದಾಂಡೇಲಿ-ಅಳ್ನಾವರ ರೈಲು ಪುನಾರಂಭದ ಘೋಷಣೆ ಮಾಡಿರುವುದು ಜನರಿಗೆ ಸಂತಸ ತಂದಿದೆ.

ಕನ್ನಡಪ್ರಭ ವಾರ್ತೆ ದಾಂಡೇಲಿ

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರ ಪ್ರಯತ್ನದ ಫಲವಾಗಿ ಫೆ.೭ರಂದು ಶನಿವಾರ ಸಂಜೆ ೪ ಗಂಟೆಗೆ ದಾಂಡೇಲಿ-ಅಳ್ನಾವರ ರೈಲು ಪುನಾರಂಭದ ಘೋಷಣೆ ಮಾಡಿರುವುದು ಜನರಿಗೆ ಸಂತಸ ತಂದಿದೆ ಎಂದು ಮಾಜಿ ಶಾಸಕ ಸುನಿಲ ಹೆಗಡೆ ಹೆಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಪ್ರಯಾಣಿಕರ ರೈಲು ಈಗ ಮತ್ತೆ ಪ್ರಾರಂಭವಾಗುತ್ತಿದೆ. ಇದರಿಂದ ದಾಂಡೇಲಿಯ ಪ್ರವಾಸೋದ್ಯಮಕ್ಕೆ ಮತ್ತು ಜನತೆಗೆ ಸಂತಸ ತಂದಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.

ಫೆ.೭ರ ೪.೩೦ಕ್ಕೆ ಸಚಿವ ವಿ ಸೋಮಣ್ಣ ಪುನರಾರಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಭಾಜಪ ದಾಂಡೇಲಿ ಘಟಕಾಧ್ಯಕ್ಷ ಬುದವಂತಗೌಡ ಪಾಟೀಲ, ಉಪಾಧ್ಯಕ್ಷ ಗುರು ಮಠಪತಿ, ಪ್ರಧಾನ ಕಾರ್ಯದರ್ಶಿ ಗಿರೀಶ ಟೋಸುರ, ಯುವಮೋರ್ಚಾ ಅದ್ಯಕ್ಷ ಪವನ ಕೊನ್ನೂರ, ಎಸ್ಸಿ ಮೋರ್ಚಾ ಅಧ್ಯಕ್ಷ ಸುಭಾಸ ಭೋವಿವಡ್ಡರ, ಪ್ರಮುಖರಾದ ಚಂದ್ರಕಾಂತ ಕ್ಷೀರಸಾಗರ, ರೋಷನ ನೇತ್ರವಾಳಿ, ರವಿ ಗಾಂವಕರ, ಸುಭಾಷ್ ಆರವೇಕರ್, ಪ್ರಶಾಂತ್ ಬಸುತೇಕರ್, ದಶರಥ್ ಬಂಡಿವಡ್ಡರ, ಬಸವರಾಜ್ ಹುಂಡೆಕರ್, ಸಂತೋಷ್ ಘಟಕಾಂಬಳೆ, ಜಯ ಕೋಳೇಕರ್, ಮಂಜುನಾಥ್ ಶೆಟ್ಟಿ , ಹನುಮಂತ ಕಾರಗಿ, ಚನ್ನಬಸಪ್ಪ ಮುರಗೋಡ, ಶಾರದಾ ಪರಶುರಾಮ, ಸಾವಿತ್ರಿ ಬಡಿಗೇರ, ರಮಾ ರವೀಂದ್ರ, ಜಯಶ್ರೀ ನ್ಯಾಮತಿ, ಅನ್ನಪೂರ್ಣ ಬಾಗಲಕೋಟ, ಪದ್ಮಾ ಜನ್ನು, ಸುಜಾತಾ ಗದಗ ಮುಂತಾದವರಿದ್ದರು.

ಬ್ಲಾಕ್ ಕಾಂಗ್ರೆಸ್ ಹರ್ಷ

ಸ್ಥಗಿತಗೊಂಡಿದ್ದ ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭಕ್ಕೆ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.ದಾಂಡೇಲಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿ, ರೈಲು ಸಂಚಾರ ಪುನಾರಂಭಕ್ಕೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಆರ್.ವಿ. ದೇಶಪಾಂಡೆ ಪಾತ್ರ ಸ್ಮರಣೀಯವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ಸಹ ಹೋರಾಟ ಮಾಡಿದ್ದು, ಆ ಎಲ್ಲಾ ಪ್ರಯತ್ನ ಹಾಗೂ ಪಕ್ಷಾತೀತ ಪ್ರಯತ್ನದಿಂದಾಗಿ ರೈಲ್ವೆ ಸಂಚಾರ ಪುನಾರಂಭವಾಗುವಂತಾಗಿದೆ. ಫೆ.7ರಂದು ನಡೆಯಲಿರುವ ರೈಲ್ವೆ ಸಂಚಾರ ಪುನಾರಂಭೋತ್ಸವ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸುವಂತೆ ತಿಳಿಸಿದರು.ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಇಕ್ಬಾಲ್ ಶೇಖ, ಕೀರ್ತಿ ಗಾಂವಕರ, ಕೆಪಿಸಿಸಿ ಸದಸ್ಯ ಕರೀಂ ಅಜ್ರೇಕರ, ನಗರ ಸಭೆಯ ನಿಕಟಪೂರ್ವ ಅಧ್ಯಕ್ಷ ಅಷ್ಪಾಕ್ ಶೇಖ, ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಿತಿ ಅಧ್ಯಕ್ಷೆ ರೇಣುಕಾ ಬಂದಂ, ಮುಖಂಡರಾದ ತಸ್ವರ ಸೌದಾಗರ, ಯಾಸ್ಮಿನ್ ಕಿತ್ತೂರು, ಸಂಜಯ ನಂದ್ಯಾಳ್ಕರ, ಆಸೀಪ್ ಮುಜಾವರ, ಅನಿಲ್ ನಾಯ್ಕರ, ದಾದಾಪೀರ್ ನದೀಮುಲ್ಲಾ, ದಿವಾಕರ ನಾಯ್ಕ, ರಾಮಲಿಂಗ ಜಾಧವ, ರವಿ ಚೌವ್ಹಾಣ್, ಶಾಹಿದಾ ಪಠಾಣ್, ರುಹೀನಾ ಖತೀಬ್, ವೆಂಕಟ್ರಮಣಮ್ಮ ಮೈಥುಕುರಿ, ಎಂ.ಆರ್. ನಾಯ್ಕ, ಅಬ್ದುಲ್ ಕರೀಂ, ಮಜೀದ್ ಸನದಿ, ಇಮ್ತಿಯಾಜ್ ಅತ್ತಾರ, ಅಡಿವೆಪ್ಪ ಭದ್ರಕಾಳಿ, ಪ್ರಮೀಳಾ ಮಾನೆ, ಮಹಾದೇವ ಸಾಂಗ್ಲೀಕರ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಸ್ಫೋಟಕ ಬಳಕೆ: ಅಪ್ಪ, ಮಗ ಬಂಧನ
ಮಾನವೀಯತೆಯಿಂದ ಬದುಕು ಸಾಗಿಸಲಿ