ಮಕ್ಕಳ ಜ್ಞಾನ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು

KannadaprabhaNewsNetwork |  
Published : May 26, 2025, 12:47 AM IST
25ಕೆಬಿಪಿಟಿ.2.ಬಂಗಾರಪೇಟೆ ತಾಲೂಕಿನ ದೊಡ್ಡಬೊಂಪಳ್ಳಿ ಗ್ರಾಮದಲ್ಲಿ ಹಳೇ ವಿದ್ಯಾರ್ಥಿಗಳಿಂದ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಧನಶೇಖರ್ ರೆಡ್ಡಿ ಹೇಳಿದರು.

ಬಂಗಾರಪೇಟೆ: ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಧನಶೇಖರ್ ರೆಡ್ಡಿ ಹೇಳಿದರು.

ತಾಲೂಕಿನ ದೊಡ್ಡ ಬೊಂಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಗುರುವಂದನೆ ಹಾಗೂ ನಿವೃತ್ತಿ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸರ್ಕಾರಿ ಸೇವೆಯಲ್ಲಿ 26 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವುದು ಸುಲಭದ ಮಾತಲ್ಲ. ಅವರ ಸಾಧನೆ ಹೆಚ್ಚಿದೆ. ಮುಂದೆಯೂ ಮಕ್ಕಳಿಗೆ ಮಾರ್ಗದರ್ಶನ ಮಾಡುವುದನ್ನು ಮುಂದುವರಿಸಬೇಕು. ನಿವೃತ್ತ ಜೀವನವನ್ನು ಉತ್ತಮವಾಗಿ ಕಳೆಯಬೇಕು ಹಾಗೂ ಶಿಕ್ಷಕರು ನಿವೃತ್ತಿಯಾದರೂ ಸಹ ಸುತ್ತಮುತ್ತಲ ಮಕ್ಕಳಿಗೆ ಚೆನ್ನಾಗಿ ವ್ಯಾಸಂಗ ಮಾಡಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ರೆಡ್ಡಿ ಮಾತನಾಡಿ, ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು, ಶ್ರೇಷ್ಠ ಸೇವೆ. ಶಿಕ್ಷಕ ಸಮುದಾಯದವರು ಎಲ್ಲ ಕ್ಷೇತ್ರ ಗಳನ್ನು ಬೆಳೆಸುವಂತಹ ವ್ಯಕ್ತಿಗಳು ಆಗಿರುತ್ತಾರೆ ಮತ್ತು ಶಿಕ್ಷಕ ಹುದ್ದೆಯು ಸಾಮಾಜಿಕ ಬದಲಾವಣೆ ತರುವಂತಹ ಹುದ್ದೆಯಾಗಿದೆ. ಈ ಸೇವೆ ಸಿಗುವುದು ತುಂಬಾ ಅದೃಷ್ಟವಂತರಿಗೆ, ಕಠಿಣ ಪರಿಶ್ರಮಿಗಳಿಗೆ ಮತ್ತು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ನಮ್ಮ ಜೀವನ ಕಟ್ಟಿಕೊಳ್ಳುವ ವ್ಯಕ್ತಿಗಳಿಗೆ ಒಲಿದಿದೆ. ಆ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಪ್ರತಿ ಕ್ಷಣವೂ ಕಲಿಸುವಂತಹ ಇಮ್ಮಡಿ ಗೊಳಿಸಿಕೊಳ್ಳಬೇಕು ಎಂದರು.

ಹಳೆ ವಿದ್ಯಾರ್ಥಿಗಳಾದ ಸುರೇಶ್ ರೆಡ್ಡಿ,ಪ್ರಮೋದ್ ರೆಡ್ಡಿ, ಹರೀಶ್ ರೆಡ್ಡಿ,ಕೇಶವ ರೆಡ್ಡಿ, ಸುಗುಣ, ಸಂಧ್ಯಾರಾಣಿ,ರತ್ನ ಕುಮಾರಿ, ಹೇಮಾವತಿ, ಅಮೃತ,ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್,ಕೀಶೊರ್, ಮೋಹನ್ ಕುಮಾರ್, ಖಲೀಲ್ ಖಾನ್ , ಸಂಪತ್ತ್ ಕುಮಾರ್, ನವೀನ್ ರೆಡ್ಡಿ, ವಿನಯ್ ರೆಡ್ಡಿ.ನರೇಂದ್ರ, ಸಂತೋಷ್ ರೆಡ್ಡಿ, ವಜ್ರಮುನಿ ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್