ಸವಣಾಲು ಗ್ರಾಮದಲ್ಲಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯು ಊರ ಹಾಗೂ ಪರವೂರ ದಾನಿಗಳಿಂದ ಜೀರ್ಣೋದ್ಧಾರಗೊಂಡಿದೆ. ಧಾಮ ಸಂಪ್ರೋಕ್ಷಣ ಮಹೋತ್ಸವ 28 ಹಾಗೂ ಮಾ.೧ ಮತ್ತು ೨ ರಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತಾಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯು ಊರ ಹಾಗೂ ಪರವೂರ ದಾನಿಗಳಿಂದ ಜೀರ್ಣೋದ್ಧಾರಗೊಂಡಿದೆ. ಧಾಮ ಸಂಪ್ರೋಕ್ಷಣ ಮಹೋತ್ಸವ 28 ಹಾಗೂ ಮಾ.೧ ಮತ್ತು ೨ ರಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಬಸದಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಕಿಶೋರ್ ಹೆಗ್ಡೆ, ಎರ್ಮೆದೋಡಿ ಗುತ್ತು ಮತ್ತು ಕಾರ್ಯದರ್ಶಿ ಸುರೇಶ್ ಕುಮಾರ್, ಉಜಿರೆ ತಿಳಿಸಿದ್ದಾರೆ.
ಅಪರಾಹ್ನ ಗಂಟೆ ೨.೩೦ರಿಂದ ನಾಂದಿಮಂಗಲ ಪೂಜಾವಿಧಾನ, ಕ್ಷೇತ್ರಪಾಲ ಪ್ರತಿಷ್ಠೆ, ನಾಗಪ್ರತಿಷ್ಠೆ, ಭಗವಾನ್ ಆದಿನಾಥಸ್ವಾಮಿಗೆ ೨೪ ಕಲಶ ಅಭಿಷೇಕ, ಮಹಾಪೂಜೆ ನೆರವೇರಲಿದೆ.
ಮಾ.1ರಂದು ಬೆಳಗ್ಗೆ 8ರಿಂದ ನಿತ್ಯವಿಧಿ ಸಹಿತ ವಾಸ್ತು ಪೂಜಾವಿಧಾನ, ನವಗ್ರಹ ಶಾಂತಿ, ಅಪರಾಹ್ನ ಗಂಟೆ ೨ ರಿಂದ ಪದ್ಮಾವತಿ ದೇವಿಗೆ ರಜತಕವಚ ಸಮರ್ಪಣೆ, ಆರಾಧನೆ, ಲಕ್ಷ ಹೂವಿನ ಪೂಜೆ, ಭಗವಾನ್ ಆದಿನಾಥ ಸ್ವಾಮಿಗೆ ೫೪ ಕಲಶ ಅಭಿಷೇಕ, ಮಹಾಪೂಜೆ ನಡೆಯುವುದು.
ಮಾ.2ರಂದು ಬೆಳಗ್ಗೆ 8ರಿಂದ ಧಾಮ ಸಂಪ್ರೋಕ್ಷಣೆ, ಭಗವಾನ್ ಆದಿನಾಥ ಸ್ವಾಮಿ ಪ್ರತಿಷ್ಠೆ, ಶಿಖರಾರೋಹಣ, ಅಪರಾಹ್ನ ೩.೩೦ ರಿಂದ ಭಕ್ತಾಮರ ಆರಾಧನೆ, ಭಗವಾನ್ ಆದಿನಾಥ ಸ್ವಾಮಿಗೆ ೧೦೮ ಕಲಶ ಅಭಿಷೇಕ, ಮಹಾಪೂಜೆ, ತೋರಣ ವಿಸರ್ಜನೆ ನೆರವೇರಲಿದೆ.
ಸೇವಾಕರ್ತೃಗಳು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು.
ಪ್ರತಿಷ್ಠಾಚಾರ್ಯ ಬೆಳ್ತಂಗಡಿ ಜಯರಾಜ ಇಂದ್ರರು, ಪುಷ್ಪರಾಜ ಇಂದ್ರರು ಮತ್ತು ಸ್ಥಳ ಪುರೋಹಿತ ವೃಷಭರಾಜ ಇಂದ್ರರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುವರು.
ಧಾರ್ಮಿಕ ಸಭೆ: ಮಾ. ೨ ರಂದು ಸಂಜೆ ೫ ಗಂಟೆಯಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಶ್ರೀ ಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು.
ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಲಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.