ನಗರೋತ್ಥಾನ ಹಂತ-4ರ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹೊಲಿಗೆ, ಪಿಕೋ ಯಂತ್ರ ವಿತರಣೆಕನ್ನಡಪ್ರಭ ವಾರ್ತೆ ಹಳಿಯಾಳ
ಶನಿವಾರ ಪುರಸಭೆಯ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನಗರೋತ್ಥಾನ ಹಂತ-4ರ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹೊಲಿಗೆ, ಪಿಕೋ ಯಂತ್ರ ವಿತರಣೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ಹಳಿಯಾಳ-ದಾಂಡೇಲಿಯ ಆಯ್ದ 16 ಅಂಗನವಾಡಿಗಳಿಗೆ ಸ್ಮಾರ್ಟ್‌ಟಿವಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಬಡವರು ಜೀವನ ಸುಖಮಯವಾಗಬೇಕು, ಅವರು ನೆಮ್ಮದಿಯಿಂದ ಜೀವಿಸಬೇಕು ಎಂದರು. ಪಟ್ಟಣವು ಅಭಿವೃದ್ಧಿ ಹೊಂದುತ್ತಿದೆ. ಪಟ್ಟಣವಾಸಿಗಳಿಗೆ ಬೇಕಾದ ಅವಶ್ಯಕ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ಪರಿಣಾಮ ಇಂದು ಪಟ್ಟಣದಲ್ಲಿ ಕುಡಿಯುವ ನೀರು, ವಿದ್ಯುತ್ ಪೂರೈಕೆ, ಶುಚಿತ್ವದ ದೃಷ್ಟಿಯಿಂದ ಇತರೇ ಪಟ್ಟಣಗಳಿಗೆ ಹೊಲಿಕೆ ಮಾಡಿದರೇ ಹಳಿಯಾಳ ಸ್ಥಿತಿ ಉತ್ತಮವಾಗಿದೆ. ಇದನ್ನೇ ಮನಗಂಡು ಇಂದು ಸಾಕಷ್ಟು ಜನ ಹಳಿಯಾಳಕ್ಕೆ ವಲಸೆ ಬಂದು ನೆಲೆಸುತ್ತಿದ್ದಾರೆ ಎಂದರು.ಹಳಿಯಾಳದ ಅಭಿವೃದ್ಧಿಗೆ ಏನು ಬೇಕು ಅದನ್ನೆಲ್ಲಾ ಮಾಡಿದ್ದೇನೆ, ನಿಮ್ಮ ಬಳಿ ಬಡವರ ಮತ್ತು ಮದ್ಯಮ ವರ್ಗದವರ ಕಷ್ಟ ದೂರವಾಗುವ ದಿಸೆಯಲ್ಲಿ ಯೋಜನೆಗಳಿದ್ದರೇ ನನ್ನನ್ನು ಭೇಟಿಯಾಗಿ ಹೇಳಿರಿ ಎಂದರು.
ಅಕ್ರಮ ಬಡಾವಣೆಗಳಿಗೆ ಅನುಮತಿ ಬೇಡ:
ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಮಾತನಾಡಿ, ರಾಜ್ಯದಲ್ಲಿ ಜಾರಿಯಾಗುವ ಎಲ್ಲಾ ಉನ್ನತ ಮಟ್ಟದ ಯೋಜನೆಗಳನ್ನು ಶಾಸಕ ದೇಶಪಾಂಡೆಯವರು ಹಳಿಯಾಳಕ್ಕೆ ಮಂಜೂರು ಮಾಡಿ ತರುತ್ತಾರೆ. ಅಂತಹ ಸಾಮರ್ಥ್ಯ ಕೇವಲ ಅಭಿವೃದ್ಧಿ ಹಾಗೂ ದೂರದರ್ಶಿತ್ವ ವ್ಯಕ್ತಿತ್ವವುಳ್ಳ ನಾಯಕರಿಗೆ ಮಾತ್ರ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ನಗರೋತ್ಥಾನ ಹಂತ-4ರ ಯೋಜನೆಯಡಿಯಲ್ಲಿ ಆಯ್ಕೆಯಾದ 86 ಫಲಾನುಭವಿಗಳಲ್ಲಿ, 40 ಪೌರ ಕಾರ್ಮಿಕರಿಗೆ, 34 ಪ.ಜಾತಿಯವರಿಗೆ ಹಾಗೂ 12 ಪ.ಪಂಗಡ ದವರಿಗೆ ಹೊಲಿಗೆ, ಪಿಕೋ ಯಂತ್ರ ವಿತರಣೆ ಮಾಡಲಾಯಿತು.
ಪುರಸಭೆಯ ಮಾಜಿ ಸದಸ್ಯರಾದ ಸುರೇಶ ವಗ್ರಾಯಿ, ಸತ್ಯಜಿತ ಗಿರಿ, ಮಾರುತಿ ಕಲಬಾವಿ ಇದ್ದರು. ಶಿಕ್ಷಣ ಇಲಾಖೆಯ ಬಿಆರ್‌ಪಿ ಎನ್. ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.