ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರವು ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿದರೆ ಸುಮಾರು 7 ಸಾವಿರ ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಸರ್ಕಾರಿ ಶಾಲೆಗಳನ್ನು ಗ್ರಾಮೀಣ ಭಾಗದ ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಗ್ರಾಮದ ಶಾಲೆ ಮುಚ್ಚಿದೆ ಎಂದು ಮಕ್ಕಳನ್ನು ಬೇರೆ ಗ್ರಾಮದ ಶಾಲೆಗೆ ಕಳುಹಿಸದೆ ಕೂಲಿಗೆ ಕಳುಹಿಸುವ ಸಾಧ್ಯತೆ ಇದೆ. ಇದರಿಂದ ಮತ್ತೆ ಗ್ರಾಮೀಣ ಜನರು ಸಾಕ್ಷರತೆ ಇಲ್ಲದೆ, ಅನಕ್ಷರತೆ ಉಂಟಾಗುವ ಅಪಾಯ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.ವಿಪಕ್ಷ ಶಾಸಕನಾದರೂ ಅನುದಾನಕ್ಕಾಗಿ ಎಲ್ಲಾ ಸಚಿವರ ಬಾಗಿಲುಗಳಿಗೆ ತೆರಳಿ ಮನವಿ ಮಾಡಿದ್ದೇನೆ. ಸರ್ಕಾರ ನೀಡಿರುವ ಅಲ್ಪಸ್ವಲ್ಪ ಅನುದಾನವನ್ನು ತಾಲೂಕಿನ ಯಾವುದೇ ಗ್ರಾಮಕ್ಕೂ ಅನ್ಯಾಯವಾಗದಂತೆ ಶಾಸಕರ ಅನುದಾನವನ್ನು ಎಲ್ಲಾ ಗ್ರಾಮಗಳಿಗೂ ಸಮರ್ಪಕವಾಗಿ ಹಂಚಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಸೋಮೇನಹಳ್ಳಿ, ದೊಡ್ಡಕ್ಯಾತನಹಳ್ಳಿ, ನಾಯಸಿಂಗನಹಳ್ಳಿ, ಕುಂದೂರು, ಕೊರಟಿಕೆರೆ, ಅಣ್ಣೇಚಾಕನಹಳ್ಳಿ ಅಕ್ಕಿಹೆಬ್ಬಾಳು ಹೋಬಳಿಯ ಮುದ್ಲಾಪುರ, ಹೊಸಮಾವಿನಕೆರೆ, ಗುಡುಗನಹಳ್ಳಿ, ಸೋಮನಾಥಪುರ, ಬೆಳತೂರು ಗ್ರಾಮಗಳಲ್ಲಿ ತಲಾ ಹತ್ತು ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.