ಶಾಸಕ ಯತ್ನಾಳ ಮೂರನೇ ಟಿಪ್ಪು

KannadaprabhaNewsNetwork |  
Published : Dec 26, 2023, 01:30 AM IST
್್‌ | Kannada Prabha

ಸಾರಾಂಶ

ನನ್ನ ಬಳಿ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫೋಟೊ ದಾಖಲೆಗಳಿದ್ದು, ಶಾಸಕ ಯತ್ನಾಳ ಮೂರನೇ ಟಿಪ್ಪು ಎಂದು ಸಚಿವ ಎಂಬಿಪಾ ಜರಿದಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೂರನೇ ಟಿಪ್ಪು ಎನ್ನಲು ನನ್ನಲ್ಲಿ ಫೋಟೋ ದಾಖಲೆಗಳಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಶಾಸಕ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಎರಡನೇ ಟಿಪ್ಪು ಸುಲ್ತಾನ್ ಎಂದು ಹೇಳುತ್ತಿರುವ ಇದೇ ಯತ್ನಾಳ್. ಈ ಹಿಂದೆ ಟಿಪ್ಪು ಸುಲ್ತಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋಗಳು ನನ್ನ ಬಳಿ ಇವೆ. ಮಾಧ್ಯಮದವರೇ ಯಾರೋ ನನಗೆ ಅವುಗಳನ್ನು ಕಳಿಸಿದ್ದಾರೆ. ಎಲ್ಲವೂ ನಿಮ್ಮ ಬಳಿಯೇ ಇದ್ದರೂ ನಮ್ಮ ಬಾಯಿಂದ ಹೇಳಿಸುತ್ತೀರಲ್ಲ ಎಂದು ಪತ್ರಕರ್ತರಿಗೆ ಮರುಪ್ರಶ್ನೆ ಹಾಕಿದರು.

ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವ ಮುನ್ನ ಹೊಂದಾಣಿಕೆ, ಸೌಹಾರ್ದತೆ ಇತ್ತು. ಇದೀಗ ಕದಡಲಾಗಿದ್ದು, ಶಿಕ್ಷಣದ ನೆಲೆಗಳಲ್ಲಿ ಜಾತಿ, ಧರ್ಮ, ಪಕ್ಷ ಅಂತೆಲ್ಲ ವೈಮನಸ್ಸು ಸೃಷ್ಟಿಸಲಾಗಿದೆ. ಪರಿಣಾಮ ಹಿಜಾಬ್ ವಿಷಯ ಇದೀಗ ಕೋರ್ಟ್ ಮೆಟ್ಟಿಲೇರಿದೆ ಎಂದು ಎಂದರು.

ಈ ಹಿಂದೆ ಶಾಲಾ ಕಾಲೇಜುಗಳಲ್ಲಿ ಪರಸ್ಪರ ಹೊಂದಾಣಿಕೆ, ವಿಶ್ವಾಸ, ಸೌಹಾರ್ದತೆ ಕದಡಲಾಗಿದೆ. ಸದ್ಯ ಹಿಜಾಬ್ ನಿಷೇಧ ಪ್ರಕರಣ ನ್ಯಾಯಾಲಯದಲ್ಲಿದ್ದು, ಕಾನೂನಾತ್ಮಕವಾಗಿ ವಿಚಾರ ಮಾಡುತ್ತೇವೆ ಎಂದು ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.

ರೈತರು, ಬರ, ಸಾಲ ಮನ್ನಾ ವಿಷಯದಲ್ಲಿ ಸಚಿವ ಶಿವಾನಂದ ಪಾಟೀಲ ಏನು ಹೇಳಿಕೆ ನೀಡಿದ್ದಾರೆಂದು ನಾನು ಗಮನಿಸಿಲ್ಲ. ಹೀಗಾಗಿ ಈ ವಿಷಯದಲ್ಲಿ ನೀವು ಅವರನ್ನೇ ಕೇಳಿದರೆ ಸೂಕ್ತ ಎಂದರು.

ವಿಜಯಪುರ ನಗರದಲ್ಲಿ ವೃಕ್ಷೋಥಾನ್ ಹೆರಿಟೇಜ್ ಮ್ಯಾರಥಾನ್ ಹಾಗೂ ಬೆಳಗಾವಿಯಲ್ಲಿ ಪ್ರಭಾಕರ ಕೋರೆ ಅವರ ವಿವಾಹದ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂರ್ವ ನಿರ್ಧಾರಿತ ಕಾರ್ಯಕ್ರಮಗಳಿದ್ದವು. ಹೀಗಾಗಿ ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶಕ್ಕೆ ಹೋಗಿರಲಿಲ್ಲ. ಆದರೆ ಸಂದೇಶ ಕಳಿಸಿದ್ದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು