ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಕಾರ್ಯ ಅಮೋಘ

KannadaprabhaNewsNetwork | Published : Jan 3, 2025 1:30 AM

ಸಾರಾಂಶ

ಸಿದ್ದಾರೂಢರ ಗುರು ಪರಂಪರೆಯ ದಾರಿಯಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರು ಎನನ್ನೂ ಬಯಸದೆ 85ನೇ ವಯಸ್ಸಿನಲ್ಲೂ ಸಹ ಕ್ರೀಯಾಶೀಲರಾಗಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಕಾರ್ಯ ಅಮೋಘವಾಗಿದೆ ಎಂದು ಬೆಂಗಳೂರಿನ ಕೈಲಾಸ ಅಶ್ರಮದ ಮಹಾಸಂಸ್ಥಾನದ ಜಗದ್ಗುರು ಆಚಾರ್ಯ ಮಹಾಮಂಡಲೇಶ್ವರ ಜಯೇಂದ್ರಪುರಿ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಿದ್ದಾರೂಢರ ಗುರು ಪರಂಪರೆಯ ದಾರಿಯಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರು ಎನನ್ನೂ ಬಯಸದೆ 85ನೇ ವಯಸ್ಸಿನಲ್ಲೂ ಸಹ ಕ್ರೀಯಾಶೀಲರಾಗಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಕಾರ್ಯ ಅಮೋಘವಾಗಿದೆ ಎಂದು ಬೆಂಗಳೂರಿನ ಕೈಲಾಸ ಅಶ್ರಮದ ಮಹಾಸಂಸ್ಥಾನದ ಜಗದ್ಗುರು ಆಚಾರ್ಯ ಮಹಾಮಂಡಲೇಶ್ವರ ಜಯೇಂದ್ರಪುರಿ ಮಹಾರಾಜರು ಹೇಳಿದರು.

ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ನಡೆಯುತ್ತಿರುವ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ 85ನೇ ವರ್ಷದ ವರ್ಧಂತಿ ಮಹೋತ್ಸವ, ಶ್ರೀಗಳ 55ನೇ ವರ್ಷದ ಪೀಠಾರೋಹಣ, 55ನೇ ಅಖಿಲ ಭಾರತ ವೇದಾಂತ್ ಪರಿಷತ್ ಕಾರ್ಯಕ್ರಮದ ಪಾವನ ಸಾನ್ನಿಧ್ಯ ವಹಿಸಿ ಯೋಗಿಯನೊಲಿಸಿದೊಡಿಹಪರ ಸಿದ್ದಿ ವಿಷಯ ಕುರಿತು ಮಾತನಾಡಿದ ಅವರು, ಈ ಲೋಕದಲ್ಲಿ ನಾವೆಲ್ಲರೂ ಬಾಳಿ ಬದುಕ ಬೇಕಾದರೇ ಎಲ್ಲರ ಪ್ರೀತಿಗೆ ಪಾತ್ರರಾಗಬೇಕು ಎಂದರು.

ಹೈದರಾಬಾದ ಪರಾಶ್ರಮದ ಆಚಾರ್ಯ ಪರಿಶುದ್ದಾನಂದಗಿರಿ ಸ್ವಾಮೀಜಿ ಕುಳ್ಳೂರ ಬಸವಾನಂದ ಸ್ವಾಮೀಜಿ ಮಾತನಾಡಿ, ಪುಣ್ಯ, ಜ್ಞಾನ, ಶಾಂತಿ, ನೆಮ್ಮದಿ ಪ್ರಾಪ್ತಿಗಾಗಿ ಗುರುವಿನ ಮೊರೆ ಹೋಗಬೇಕು. ಈ ನಾಡಿಗೆ ಜೀವನದ ಅರ್ಥ ಬೋಧಿಸುತ್ತಿರುವ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರು ತಮ್ಮ ಉದ್ದಾರಕ್ಕಾಗಿ ಜನಿಸಿದ್ದಾರೆ. ಎಲ್ಲರೂ ಪುಣ್ಯ ಮಾಡಬೇಕು. ಈ ಲೋಕದಲ್ಲಿ ಬಾಳಬೇಕಾದರೇ ಎಲ್ಲರ ಪ್ರೀತಿಗೆ ಪಾತ್ರರಾಗಬೇಕು. ಇದರಿಂದ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದರು.

ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಯಾವುದೇ ರಾಜಕೀಯ ಇಲ್ಲದ ಯಾರಲ್ಲೂ ಎನನ್ನು ಬೇಡದ ಭಕ್ತರನ್ನು ತಮ್ಮ ಅಪಾರ ದಿವ್ಯ ಶಕ್ತಿಯ ಮೂಲಕ ಹರಸುತ್ತಿರುವ ಡಾ.ಶಿವಾನಂದ ಅಪ್ಪನವರ ಆಶೀರ್ವಾದದ ಫಲವಾಗಿ ಈ ನಾಡು ಸಮೃದ್ಧವಾಗಿದೆ. ಗುರುವಿನ ಆಶೀರ್ವಾದ ಇದ್ದರೆ ಮನುಷ್ಯ ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದರು.ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಶ್ರೀಶೈಲ ಪೀಠದ ಡಾ.ಚನ್ನಸಿದ್ದಾರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಋಷಿಕೇಷಿಯ ಮಹಾಮಂಡಲೇಶ್ವರ ಅಭಿಷೇಕ ಚೈತನ್ಯಗಿರಿ ಮಹಾರಾಜ, ಆಂಧ್ರಪ್ರದೇಶದ ಏರಪೇಡು ಪರಿಪೂರ್ಣಾನಂದ ಸ್ವಾಮೀಜಿ, ಹುಬ್ಬಳ್ಳಿಯ ರಾಮಾನಂದ ಸ್ವಾಮೀಜಿ, ಘೋಡಗೇರಿ ಮಲ್ಲಯ್ಯ ಸ್ವಾಮೀಜಿ, ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ, ಮಲ್ಲಾಪೂರದ ಚಿದಾನಂದ ಸ್ವಾಮೀಜಿ, ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ, ಮಲ್ಲೇಶ ಶರಣರು, ಅಸಂಗಾನಂದ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮುಂತಾದವರು ಇದ್ದರು. ಡಾ.ಶಿವಾನಂದ ಭಾರತಿ ಶ್ರೀಗಳ ಚರಿತ್ರಾಮೃತ ಗ್ರಂಥದ ಲೋಕಾರ್ಪಣೆ ಅಚಾರ್ಯ ಮಹಾಮಂಡಲೇಶ್ವರ ಜಯೇಂದ್ರ ಪುರಿ ಮಹಾರಾಜ ಬಿಡುಗಡೆಗೊಳಿಸಿದರು.

ಅಭಿನಂದನಾ ಮಹಾಪೂರ

ಶ್ರೀಗಳ 85ನೇ ವರ್ಧಂತಿ ಮಹೋತ್ಸವದ ನಿಮಿತ್ತ ರಾಜ್ಯದ ಮತ್ತು ಹೊರ ರಾಜ್ಯದ ಭಕ್ತಾದಿಗಳು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿ ತನು-ಮನ-ಧನದಿಂದ ಭಕ್ತಿ ಮೆರೆದರು. ಬೀದರದ ಸಿದ್ದಾರೂಢ ಚಿದಂಬರ ಆಶ್ರಮದ ಶಿವಕುಮಾರೇಶ್ವರ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಾಡಿನ ಮಹಾಮಂಡೇಲೇಶ್ವರರ, ಮಠಾಧೀಶರ ಸಮ್ಮುಖದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 85ನೇ ವಧರ್ಂತಿ ಮಹೋತ್ಸವ ಅಂಗವಾಗಿ ಕೊಂಚಿಗೆ ತೊಡಿಸಿ ಜೋಗುಳ ಪದ ಹಾಡುತ್ತ ತೊಟ್ಟಿಲೋತ್ಸವ, ಸುವರ್ಣ ಕೀರಿಟಧಾರನೆ, ಸುವರ್ಣ ಸಿಂಹಾಸನಾರೋಹಣ, ಓಂ ನಮಃ ಶಿವಾಯ, ತೂಗಿರೆ ಕಂದನ, ತೂಗಿರೇ ಶಿವಯೋಗೀಶ್ವರನ ಎಂಬ ನಾಮ ಸ್ಮರಣೆಯೊಂದಿಗೆ ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಚೈತ್ರಾ ಜನ್ಮಟ್ಟಿ, ಶಿವಾನಂದ ಜನ್ಮಟ್ಟಿ, ಸಂಭ್ರಮ ಜನ್ಮಟ್ಟಿ ಹಾಗೂ ಜನ್ಮಟ್ಟಿ ಕುಟುಂಬಸ್ಥರಿಂದ ಹಾಗೂ ಭಕ್ತರಿಂದ ಅದ್ಧೂರಿಯಾಗಿ ನಡೆದಿದ್ದನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ಸರ್ವಧರ್ಮ ಸಾಮೂಹಿಕ ವಿವಾಹ, ಶ್ರೀಗಳ ಪಲ್ಲಕ್ಕಿ ಉತ್ಸವ ಅದ್ಧೂರಿ

ಡಾ.ಶಿವಾನಂದ ಭಾರತಿ ಸ್ವಾಮೀಜಿ, ಮಹಾಮಂಡಲೇಶ್ವರ, ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹಗಳು ಗುರುವಾರ ಜರುಗಿದವು. ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ಪಲ್ಲಕ್ಕಿಯಲ್ಲಿ ಆಶೀನರಾಗಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರ ಹಷೋದ್ಘಾರದ ಮಧ್ಯ ಅದ್ಧೂರಿಯಾಗಿ ಆಚರಿಸಿದರು. ಸಹಸ್ರಾರು ಭಕ್ತರನ್ನು ಶ್ರೀಗಳು ಆಶೀರ್ವದಿಸಿದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಡಿ.ಬಿ.ಮಲ್ಲೂರ, ಎಸ್.ಎಂ.ರಾವುತನವರ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಚೈತ್ರಾ ಜನ್ಮಟ್ಟಿ, ಉದ್ಯಮಿ ವಿಜಯ ಮೆಟಗುಡ್ಡ, ಮಹಾಂತೇಶ ಮತ್ತಿಕೊಪ್ಪ, ಶಂಕರ ಮಾಡಲಗಿ, ನಾಗಪ್ಪ ಮೇಟಿ, ಕಾರ್ತಿಕ ಮಲ್ಲೂರ, ಭರಮನಾಯ್ಕ ಮಲ್ಲೂರು, ಚಂದ್ರು ನರಗುಂದ, ಬಾಳಪ್ಪ ನೀಲನ್ನವರ, ಸುರೇಶ ಕರಾಡೆ, ಶಿವಾನಂದ ಬೆಳಗಾವಿ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಅಂಗ ಸಂಸ್ಥೆಗಳ ಪ್ರಾಚಾರ್ಯರು, ಶಿಕ್ಷಕ ಸಿಬ್ಬಂದಿ ವರ್ಗ, ಸಹಸ್ರಾರು ಸದ್ಭಕ್ತರು ಇದ್ದರು.ಪ್ರತಿಯೊಂದು ಧರ್ಮ ಗ್ರಂಥದಲ್ಲಿ ಸನ್ಮಾರ್ಗದ ಮಾರ್ಗವಿದೆ. ಮಹಾನ್ ಪುರುಷರ, ಸಾಧು ಸಂತರ ಸನ್ನಿಧಾನಕ್ಕೆ ಬಂದು ಭಕ್ತಿ ಭಾವ ತೋರಿದರೆ ಮನಸ್ಸು ಹಗುರವಾಗುತ್ತದೆ. ಸೌಜನ್ಯದಿಂದ ಅಪೇಕ್ಷೆ ಮಾಡಬೇಕು. ಅಧರ್ಮದಿಂದ ನಡೆದುಕೊಂಡರೆ ಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಶ್ರೀಗಳು ನಿರಂತರವಾಗಿ ಭೂ ಮಂಡಲದಲ್ಲಿ ನಿರಾಳವಾಗಿ ಭಕ್ತರನ್ನು ಸದಾ ಹರಿಸುವಂತಾಗಲಿ.

-ಆಚಾರ್ಯ ಮಹಾಮಂಡಲೇಶ್ವರ ಜಯೇಂದ್ರಪುರಿ ಮಹಾರಾಜರು, ಕೈಲಾಸ ಅಶ್ರಮದ ಮಹಾಸಂಸ್ಥಾನದ ಜಗದ್ಗುರು.ತರರು ಇದ್ದರು.

Share this article