ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತುಕರಾಮ ನಾಯಕ್ ನಾಗರಕೋಡಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ , ಪ್ರಮುಖರಾದ ಪ್ರವೀಣ್ ರೈ, ಅನಂತ ಪ್ರಸಾದ್ ನೈತಡ್ಕ, ತಿಮ್ಮಪ್ಪ ಪೂಜಾರಿ, ಕೇಶವ ಪೂಜಾರಿ ಬಾಗ್ಲೋಡಿ, ಮಂಜುನಾಥ ಸಾಲಿಯಾನ್, ಬಾಬು ಮೂಲ್ಯ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
೮೦೦ ವರ್ಷಗಳ ಇತಿಹಾಸ ಹೊಂದಿದ್ದ ಈ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಗೋಚರಿಸಿದಂತೆ, ಲಭಿಸಿದ ಕುರುಹುಗಳ, ಭಗ್ನಾವಶೇಷಗಳ ಆಧಾರದಲ್ಲಿ ಮತ್ತೆ ಅದೇ ಸ್ಥಳದಲ್ಲಿ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ವಿಶೇಷತೆಯೆಂದರೆ ಇಲ್ಲಿನ ದೇವಾಲಯದ ಗರ್ಭಗುಡಿ ಭಕ್ತರ ಸನಿಹದಲ್ಲಿದ್ದು, ಅತೀ ಸನಿಹದಲ್ಲೇ ದೇವರನ್ನು ಪೂಜಿಸಲು ಪ್ರಾರ್ಥಿಸಲು ಅವಕಾಶ ಕಲ್ಪಿಸಲಾಗಿದೆ. ಕಾಲಚಕ್ರಕ್ಕೆ ಸಿಲುಕಿ ಯಾವುದೇ ಮೂಲಭೂತ ಸೌಕರ್ಯವಿಲ್ಲದ ಸ್ಥಳದಲ್ಲಿ ನಡೆಯುತ್ತಿರುವ ದೇವಾಲಯದ ಪುನರ್ ನಿರ್ಮಾಣದಲ್ಲಿ ಪ್ರತಿ ಮನೆಯ ಭಕ್ತಾದಿಗಳು ಅವಿರತ ಶ್ರಮಿಸುತ್ತಿದ್ದು, ಎದುರಿಗಿರುವ ಕಡಿಮೆ ಅವಧಿಯಲ್ಲಿ ಗರಿಷ್ಠ ಕಾರ್ಯಗಳು ನಡೆಯಬೇಕಾಗಿದೆ.