ವಿಘ್ನೇಶ್ ಎಂ. ಭೂತನಕಾಡು
ಅಂದಿನ ಯುದ್ಧಕ್ಕೂ ಈಗಿನ ಯುದ್ಧಕ್ಕೂ ಬಹಳ ವ್ಯತ್ಯಾಸವಿದೆ. ಭಾರತವು ಈಗ ಯಾವುದೇ ವೈರಿಯ ಅಡಗುತಾಣಕ್ಕೆ ಒಂದು ಅಡಿಯೂ ಹಿಂದುಮುಂದಾಗದಂತೆ ತಾಗುವಂತೆ ಮಿಸೈಲ್ ದಾಳಿಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
-ಇದು ಭಾರತೀಯ ಸೇನೆಯ ವಿಮಾನಪಡೆಯ ನಿವೃತ್ತ ಸಾರ್ಜೆಂಟ್ ಕಿಗ್ಗಾಲು ಎಸ್ ಗಿರೀಶ್ ಅವರ ಅಭಿಪ್ರಾಯ.ಅಖಂಡ ಭಾರತವನ್ನು ಬ್ರಿಟಿಷರು ತೊರೆದು ಹೊರಡುವಾಗ ಮಹಾತ್ಮಾ ಗಾಂಧಿ ಮತ್ತು ನೆಹರೂ ಅವರು ಇದನ್ನು ಮೂರು ಭಾಗಗಳಾಗಿ ವಿಭಜಿಸಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಹಾಗೂ ಭಾರತವೆಂಬ ಮೂರು ತುಂಡುಗಳನ್ನು ಮಾಡಿದರು. ನಂತರ ಪೂರ್ವ ಪಾಕಿಸ್ತಾನವು ತನ್ನ ಪ್ರಜೆಗಳಿಂದ ಎಲ್ಲ ತೆರಿಗೆಗಳನ್ನು ಸಂಗ್ರಹಿಸಿ ಪಶ್ಚಿಮ ಪಾಕಿಸ್ತಾನದ ನಾಯಕ ಅಯೂಬ್ ಖಾನನಿಗೆ ನೀಡಬೇಕಾಗಿ ಬರುತ್ತಿತ್ತು. ಈ ತೆರಿಗೆ ಹಣದ ಬಹುಪಾಲು ಮೊತ್ತವನ್ನು ಪೂರ್ವ ಪಾಕಿಸ್ಥಾನದ ಅಭಿವೃದ್ಧಿಗೆ ತೆರಿಗೆಯ ಹಣವನ್ನು ನೀಡದಿದ್ದುದರಿಂದ ಅಂದಿನ ಪೂರ್ವ ಪಾಕಿಸ್ತಾನದ ಅಧ್ಯಕ್ಷ ಮುಜೀಬುರ್ ರೆಹಮಾನ್ ರೊಚ್ಚಿಗೆದ್ದು ವಿವಿಧ ಚಳುವಳಿಗಳನ್ನು ಮಾಡತೊಡಗಿದನು. ಇದರಿಂದ ರೋಸಿಹೋದ ಅಲ್ಲಿನ ಪ್ರಜೆಗಳು ಭಾರತದ ಗಡಿಯೊಳಗೆ ನುಸುಳತೊಡಗಿದರು. ಭಾರತಕ್ಕೆ ಇದು ದೊಡ್ಡ ಹೊರೆಯೆನಿಸಿದಾಗ ಭಾರತವು ಪೂರ್ವ ಪಾಕಿಸ್ತಾನದ ವಿರುದ್ಧ ಕದನವನ್ನು ಸಾರಿ ಅದನ್ನು ಅಯೂಬ್‌ಖಾನನ ಹಿಡಿತದಿಂದ ಬಿಡಿಸಿಕೊಟ್ಟಿತು ಎನ್ನುತ್ತಾರೆ ಗಿರೀಶ್. ಭಾರತವು ಆಗ ಪೂರ್ವ ಪಾಕಿಸ್ತಾನದ ಸೇನೆಯನ್ನು ಪತರುಗುಟ್ಟಿಸಲು ಬಳಸುತ್ತಿದ್ದ ವಿಮಾನಗಳು ಬಹಳ ನಿಧಾನಗತಿಯಲ್ಲಿ ಹಾರುತ್ತಿದ್ದುವಲ್ಲದೆ ಬಾಂಬ್ ದಾಳಿಗಾಗಿ ಗಿರಿಗಿಟ್ಟಿಯ ಇಂಜಿನ್ ಇರುವ ಎ ಎನ್ 12 ಎಂಬ ಬೃಹತ್ ವಿಮಾನಗಳನ್ನು ಹಂಟರ್, ಅಜೀತ್ ವಿಮಾನಗಳ ಬೆಂಗಾವಲಿನಲ್ಲಿ ಕಳುಹಿಸಿಕೊಡಲಾಗುತ್ತಿತ್ತು. ಆಗ, ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂದೇಶವನ್ನು ತಲುಪಿಸಲು ಬಹಳ ಸಮಯವು ತಗಲುತ್ತಿತ್ತು. ಟೆಲಿಗ್ರಫಿಯಲ್ಲಿ ಬಳಸುವ ಮೋರ್ಸ್ ಸಂಕೇತಗಳಿಂದ ಸಂದೇಶವನ್ನು ಕಳುಹಿಸಬೇಕಾಗುತ್ತಿತ್ತು. ಭಾರತದ ವಾಯುನೆಲೆಗಳಲ್ಲಿ ಟೆಲಿಪ್ರಿಂಟರ್ ಎನ್ನುವ ಸಂವಹನ ಮಾಧ್ಯಮವು ಆ ಸಮಯದಲ್ಲಿ ಆರಂಭದ ಹಂತದಲ್ಲಿಯೇ ಇದ್ದು ಭೂಮಿಯ ಅಡಿಯಲ್ಲಿ ತಂತಿಗಳನ್ನು ಹುಗಿದು ಅದರ ಮೂಲಕ ಸಂದೇಶಗಳು ಹೋಗುತ್ತಿದ್ದವು. ಈ ಸಂದೇಶಗಳು ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಕರಪ್ಟ್ ಆಗುತ್ತಿದ್ದು ಸಂದೇಶವನ್ನು ಮತ್ತೊಮ್ಮೆ, ಮಗದೊಮ್ಮೆ ಕಳುಹಿಸಬೇಕಾದ ಪ್ರಮೇಯವೂ ಬರುತ್ತಿತ್ತು ಎಂದು ಗಿರೀಶ್ ವಿವರಿಸಿದರು.
ಆ ಬಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಸಾಮಾನ್ಯ ರೆಡಾರ್‌ಗಳನ್ನು ಬಳಸುತ್ತಿದ್ದರಲ್ಲದೆ ವೈರಿಯ ವಿಮಾನವನ್ನು ಲಾಕ್ ಮಾಡಿ ಅದನ್ನು ಹೊಡೆದುರುಳಿಸುವ ಸಾಮರ್ಥ್ಯವು ಭಾರತಕ್ಕೆ ಆಗ ಇರಲಿಲ್ಲ. ಡ್ರೋನ್‌ಗಳ ಬಳಕೆಯಂತೂ ಇರಲೇ ಇಲ್ಲ. ಉಪಗ್ರಹಗಳ ಆಧಾರದಿಂದ ವೈರಿಗಳ ನೆಲೆಯನ್ನು ಗುರುತಿಸುವ ವ್ಯವಸ್ಥೆಯೂ ಇರಲಿಲ್ಲ. ಆದರೂ ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನವೇ ನಕ್ಷತ್ರಗಳ ಗುರುತನ್ನು ಬಳಸಿಕೊಂಡು ಕ್ಯಾನ್‌ಬೆರಾದಂತಹ ಬಾಂಬರ್‌ಗಳು ಹಾರಿ ವೈರಿಗಳ ನೆಲೆಯತ್ತ ಬಾಂಬ್‌ಗಳನ್ನು ಎಸೆದು ಬರಬೇಕಾಗುತ್ತಿತ್ತು. ಈ ವಿಮಾನಗಳಲ್ಲಿ ಬಳಸುತ್ತಿದ್ದ ಏರ್ ಟು ಗ್ರೌಂಡ್ ಸಂಪರ್ಕಕ್ಕೆ ವಾಲ್ವ್ ಟ್ಯೂಬ್‌ಗಳಿರುವ ಎಸ್‌ಟಿ ಆರ್ 9 ಎಕ್ಸ್ ಎನ್ನುವಂತಹ ಜೇನುಪೆಟ್ಟಿಗೆಯ ಗಾತ್ರದ ಉಪಕರಣಗಳನ್ನು ಬಳಸಲಾಗುತ್ತಿತ್ತು ಎಂದು ಗಿರೀಶ್ ಅಂದಿನ ಪರಿಸ್ಥಿತಿಯನ್ನು ಅವಲೋಕಿಸಿದರು.
ಗೆಲ್ಲುವುದೊಂದೇ ಧ್ಯೇಯವಾಗಿರುತ್ತದೆ: