ಕನ್ನಡಪ್ರಭ ವಾರ್ತೆ ಬೆಂಗಳೂರು
ಮೆದುಳು ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಹಾನ್ಸ್‌ನಲ್ಲಿ ನಡೆಯುತ್ತಿರುವ 3 ದಿನಗಳ ‘ನೊವಲ್ಕಾನ್ 2024 – ನ್ಯೂರೋ ಟೆಕ್ಕಾನ್’ ಸಮ್ಮೇಳನದಲ್ಲಿ ಶನಿವಾರ ನರರೋಗ ತಜ್ಞ ಡಾ. ಶರಣ್ ಶ್ರೀನಿವಾಸ್ ಮತ್ತು ಡಾ.ಪ್ರತಿಭಾ ಶರಣ್ ಅವರ ‘ರೀಬೂಟಿಂಗ್ ದಿ ಬ್ರೈನ್’ ವೈದ್ಯಕೀಯ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಂತ್ರಜ್ಞಾನದಲ್ಲಿ ಅದ್ಭುತವಾದ ಪ್ರಗತಿಯಾಗಿದೆ. ತಲೆ ಬುರುಡೆಗೆ ರಂಧ್ರ ಕೊರೆಯದೆಯೇ ಮೆದುಳಿಗೆ ಸಂಬಂಧಿಸಿದ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು. ನಿಷ್ಕ್ರೀಯವಾಗುವ ಮೆದುಳನ್ನು ಸೂಕ್ತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಮೂಲಕ ಪುನಶ್ಚೇತನಗೊಳಿಸಬಹುದು. ಇಂತಹ ಹಲವಾರು ಯಶೋಗಾಥೆಗಳಿವೆ. ಪಾರ್ಶ್ವವಾಯು, ಪಾರ್ಕಿನ್‌ಸನ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ನುಡಿದರು.ಹುಟ್ಟಿನಿಂದ ಅಥವಾ ಅಪಘಾತದಿಂದ ಮೆದುಳು, ನರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಉಂಟಾದಾಗ ಜನರು ನಿರ್ಲಕ್ಷ್ಯ ತೋರದೆ ನಿಮ್ಹಾನ್ಸ್‌ನಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಪ್ರಯತ್ನಿಸಬೇಕು. ಅತ್ಯದ್ಭುತ ಚಿಕಿತ್ಸಾ ಕ್ರಮಗಳಿಂದ ರೋಗಿಗಳು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಡಾ. ತೈರಾ ತಿಳಿಸಿದರು.