ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಂಷುಗರ್ಸ್ ಕಾರ್ಖಾನೆ ಆವರಣದ ಶ್ರೀಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆಗಳು ನಡೆದವು.ಮುಂಜಾನೆ ದೇವಿಗೆ ವಿಶೇಷ ದ್ರವ್ಯ ಅಭಿಷೇಕ, ವಿವಿಧ ಹೂವುಗಳಿಂದ ಅಂಕಾರ ಮಾಡಲಾಗಿತ್ತು. ಬಳಿಕ ದೇವಾಲಯದ ಪ್ರಧಾನ ಅರ್ಚಕ ಕಾರ್ತೀಕ್ ಆರಾಧ್ಯ ಅವರಿಂದ ವಿಶೆಷ ಪೂಜಾ ಕೈಕಂರ್ಯಗಳು ಸಾಂಗವಾಗಿ ನೆರವೇರಿದವು. ಬಳಿಕ ಮಹಾ ಮಂಗಳಾರತಿ ಜರುಗಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ನೇರವೇರಿತು.
ಈ ವೇಳೆ ಮಹಿಳೆಯರು ತಾಯಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ಆರತಿ ಬೆಳಗಿದರು. ದೇವಾಲಯದಲ್ಲಿ ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್ ಪೂಜೆ ನೇತೃತ್ವ ವಹಿಸಿದ್ದರು. ಶಾಸಕ ಕದಲೂರು ಉದಯ್ ಮತ್ತು ವಿನುತಾ ದಂಪತಿ ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗೀಗೌಡ, ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಕಾರ್ಖಾನೆ ಉಪಾಧ್ಯಕ್ಷ ಮಣಿ, ವ್ಯವಸ್ಥಾಪಕ ಎಂ.ರವಿ, ಅಧಿಕಾರಿಗಳಾದ ನಿತೀಶ್, ನಿಂಗಯ್ಯ, ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ ಸೇರಿದಂತೆ ಹಲವರಿದ್ದರು.
ಇಂದಿನಿಂದ ಆಷಾಢ ಜಾತ್ರಾ ಮಹೋತ್ಸವಮೇಲುಕೋಟೆ: ಆಷಾಢ ಜಾತ್ರಾ ಮಹೋತ್ಸವ, ಶ್ರೀಕೃಷ್ಣರಾಜಮುಡಿ ಬ್ರಹ್ಮೋತ್ಸವದ ಅಂಗವಾಗಿ ಜುಲೈ 12ರಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಮಹಾವಿಷ್ಣುವಿನ ಸೇವೆಗೆ ಪ್ರಶಸ್ತವಾದ ಶನಿವಾರ ಚೆಲುವನಾರಾಯಣಸ್ವಾಮಿಗೆ ಬೆಳಗ್ಗೆ ಮಹಾಭಿಷೇಕ ಮತ್ತು ಸಂಜೆ ಕಲ್ಯಾಣೋತ್ಸವ, ಜು.13, ರಾತ್ರಿ ಬೇರಿತಾಡನ ಹಂಸವಾನ, ಜು.14 ರಾತ್ರಿ ಶೇಷವಾಹನೋತ್ಸವ, ಜು.15 ಸಂಜೆ ನಾಗವಲ್ಲೀ ಮಹೋತ್ಸವ, ರಾತ್ರಿ ಚಂದ್ರಮಂಡಲವಾಹನೋತ್ಸವ, ಜು.16ರ ರಾತ್ರಿ ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ, ಜು.17 ಸಂಜೆ ಪ್ರಹ್ಲಾದ ಪರಿಪಾಲನ ಗರುಡವಾಹನೋತ್ಸವ, ಜು.18 ಸಂಜೆ ಗಜೇಂದ್ರಮೋಕ್ಷ, ರಾತ್ರಿ ಗಜ ಮತ್ತು ಅಶ್ವವಾಹನೋತ್ಸವ, ಜು.19 ಮಧ್ಯಾಹ್ನ ಮಹಾರಥೋತ್ಸವ (ಸಾಂಕೇತಿಕ ಉತ್ಸವ ), ಜು.20 ತೆಪ್ಪೋತ್ಸವ (ಸಾಂಕೇತಿಕ ಉತ್ಸವ), ಜು.21 ಬೆಳಗ್ಗೆ ಕಲ್ಯಾಣಿಯಲ್ಲಿ ಅವಭೃತ ತೀರ್ಥಸ್ನಾನ, ಸಂಜೆ ಪಟ್ಟಾಭಿಷೇಕ ಬ್ರಹ್ಮೋತ್ಸವ ಸಂಪನ್ನ, ಜು.22 ರಂದು ಸಂಜೆ ಪುಷ್ಪಯಾಗ ಜರುಗಲಿದೆ.