ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಮೇಖ್ರಿ ವೃತ್ತದ ಬಳಿಯ ರೆಜಿಮೆಂಟ್‌ನಲ್ಲಿ ಅಗ್ನಿವೀರರು 24 ವಾರಗಳ ತರಬೇತಿ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದರು.
ಅಗ್ನಿವೀರ ಪರೇಡ್ ವೀಕ್ಷಿಸಿದ ಜನರಲ್ ಆಫೀಸರ್ ಕಮಾಂಡಿಂಗ್, ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಮೇಜರ್ ಜನರಲ್ ರವಿ ಮುರುಗನ್ ಮಾತನಾಡಿ, ‘ ಅಗ್ನಿವೀರರು ನಿಷ್ಠೆ, ಪ್ರಾಮಾಣಿಕತೆ ಹಾಗೂ ವೀರತ್ವ ಎಂಬ ಮೂರು ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದರು. ಇದೇ ವೇಳೆ ಅಗ್ನಿವೀರರ ಹೆಮ್ಮೆಯ ಪೋಷಕರನ್ನು ಅಭಿನಂದಿಸಿ, ದೇಶಕ್ಕಾಗಿ ಕೊಡುಗೆ ನೀಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.ಪರೇಡ್ ನೇತೃತ್ವವನ್ನು ಮಧ್ಯಪ್ರದೇಶದ ಅಗ್ನಿವೀರ್ ರಿತೇಶ್ ಕುಮಾರ್ ರಾಯ್ ವಹಿಸಿದ್ದರು. ಪ್ರಶಸ್ತಿ ವಿಜೇತರ ಪೈಕಿ ಅಗ್ನಿವೀರ್ ಔರಂಗೇ ರೋಹಿತ್ ಪಾಂಡುರಂಗ್ ಅವರು ಒಟ್ಟಾರೆ ಅತ್ಯುತ್ತಮ ಕೆಡೆಟ್ ಆಗಿ ಗಿಲ್ ಪದಕ ಪಡೆದರು.