ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮೀಪದ ಮಂದಗೆರೆಯ ಹೊನ್ನೇನಹಳ್ಳಿ ಕ್ರಾಸ್ ಬಳಿ ಭಾನುವಾರ ರಾಜ್ಯರೈತ ಸಂಘ ಹಸಿರು ಸೇನೆ, ಹಜರತ್‌ಖ್ವಾಜಾ ಷಾ ಮೆಹಬೂಬ್ ಅಲ್ಲಾ ಷಾ ಬೆಸ್ತಿ ಉಲ್ ಖಾದರಿಅಲ್ ಹುಸೇನಿ ಸಹಯೋಗದಲ್ಲಿ ಜರುಗಿದ ಸರ್ವಧರ್ಮಸಭೆ ಹಾಗೂ ಗೌಸ್ ಆಜಾಮ್ ದೀಪೋತ್ಸವದಲ್ಲಿ ಆಶೀರ್ವಚನ ನುಡಿದರು.
ಜಗತ್ತಿನ ಎಲ್ಲ ಧರ್ಮಗಳು ಬಯಸುವುದು ಶಾಂತಿ. ದುಡ್ಡಿಗಾಗಿ ಅನ್ಯರಾಷ್ಟ್ರವಾದರೆ, ಶಾಂತಿ, ನೆಮ್ಮದಿಗಾಗಿ ಭಾರತವಾಗಿದೆ. ಅನುಕೂಲಕ್ಕಾಗಿ ಧರ್ಮ, ಜಾತಿ ಸಂಪ್ರದಾಯಗಳಿವೆ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರದಿಂದ ಎಲ್ಲವೂ ಕಲುಷಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ದೇಶವನ್ನು ಸಾಲಗಾರರಾಗಿ ಮಾಡುತ್ತಿರುವ ರಾಜಕಾರಣಿಗಳಿಂದ ಸರ್ವಧರ್ಮಗಳು ದ್ವೇಷ, ದ್ವಂದ್ವದ ವಸ್ತುವಾಗಿ ದುರ್ಬಳಕೆಯಾಗುತ್ತಿದೆ. ದೇಶದ ಶಾಂತಿಭಂಗವಾಗಿಸಲು ಹೊರರಾಷ್ಟ್ರಗಳು ಮಾದಕ ವಸ್ತುಗಳನ್ನು ದೇಶಕ್ಕೆ ನುಸುಳಿಸುತ್ತಿದೆ. ಹೀಗಾಗಿ ಯುವಶಕ್ತಿ ಜಾಗೃತರಾಗಬೇಕು ಎಂದು ಕರೆ ನೀಡಿದರು.
ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, 1980ರಲ್ಲಿ ರೈತ ಚಳವಳಿಗೆ ಧುಮುಕಿದೆ. ಮಂಡ್ಯ ಜಿಲ್ಲೆಯಲ್ಲಿ ರೈತ ಚಳವಳಿ ಆರಂಭಿಸಿದವರು ನಾವು. ಎಲ್ಲ ಪಕ್ಷಗಳು ರೈತರ, ಜನಪರ ಕಲ್ಯಾಣ ಮರೆತು ಲೂಟಿಗೆ ನಿಂತಿವೆ. ನ್ಯಾಯಕ್ಕೆ ಪರಿತಪಿಸುವ ಸ್ಥಿತಿ ಬಂದಿದೆ ಎಂದು ಬೇಸರಿಸಿದರು.